Bengaluru Bandh: ಈ ಶಾಲೆಗಳಿಗೆ ರಾತ್ರೋ ರಾತ್ರಿ ಸ್ವಯಂ ಘೋಷಿತ ರಜೆ!

ಬೆಂಗಳೂರು: ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಕ್ ಎದುರಾಗಿತ್ತು. ಯಾಕಂದ್ರೆ ರಾತ್ರೋ ರಾತ್ರಿ ರಜೆಯ ಕುರಿತು ಬಂದಿದ್ದ ಮೆಸೇಜ್ ನೋಡದೆ ಎಡವಟ್ಟಾಗಿತ್ತು. ಹೀಗೆ ಗೇಟ್ ಹಾಕಿರುವ ಬೆಂಗಳೂರಿನ ಖಾಸಗಿ ಶಾಲೆಗಳ ಬಳಿ ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಪರದಾಡಿದರು.

ಬೆಂಗಳೂರಲ್ಲಿ 6000 ಶಾಲೆಗಳು ಇವೆ ಈ ಪೈಕಿ ಬಹುತೇಕ ಶಾಲೆಗಳ ಬಳಿ ಸ್ವಂತ ವಾಹನದ ವ್ಯವಸ್ಥೆ ಇದ್ದರೂ ಖಾಸಗಿ ವಾಹನಗಳನ್ನೂ ವಿದ್ಯಾರ್ಥಿಗಳ ಪೋಷಕರು ಅವಲಂಬಿಸಿದ್ದಾರೆ. ಈ ಹಿನ್ನೆಲೆ ದೂರದ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಂದ್ ಕಾರಣ ಕಷ್ಟವಾಗಲಿದೆ. ಹೀಗಾಗಿ ಎಲ್ಲವನ್ನು ಅಳೆದು ತೂಗಿ ಲೆಕ್ಕಾಚಾರ ಹಾಕಿದ್ದ ಖಾಸಗಿ ಶಾಲೆ ಆಡಳಿತ ಮಂಡಳಿ ರಾತ್ರಿಯೇ ರಜೆ ಘೋಷಣೆಗೆ ಮುಂದಾಗಿದ್ದವು. ಹೀಗಾಗಿ ಪೋಷಕರ ಮೊಬೈಲ್‌ಗೆ ರಾತ್ರಿಯೇ ಮೆಸೇಜ್ ಹೋಗಿದೆ. ಆದರೆ ಮೆಸೇಜ್ ನೋಡದ ಪೋಷಕರು ಇದೀಗ ಶಾಲೆಗಳ ಮುಚ್ಚಿದ ಗೇಟ್ ಬಳಿ ಪರದಾಡಿದರು.

Private schools announced sudden leave for students in Bengaluru

ಕಾಲೇಜು ವಿದ್ಯಾರ್ಥಿಗಳಿಗೂ ಸಂಕಷ್ಟ

ಒಂದು ಕಡೆ ಶಾಲಾ ಮಕ್ಕಳ ಪರಿಸ್ಥಿತಿ ಹೀಗಿದ್ದರೆ, ಮತ್ತೊಂದು ಕಡೆ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕೂಡ ಪರದಾಡಿದ್ದಾರೆ. ದೂರದ ಜಾಗದಲ್ಲಿನ ಕಾಲೇಜುಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಇಲ್ಲದೆ ಒದ್ದಾಡಿದರು. ಇನ್ನು ಖಾಸಗಿ ವಾಹನಗಳ ಲಭ್ಯತೆಯೇ ಇಲ್ಲದ ಕಾರಣ ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಹೀಗಾಗಿ ಅನಿವಾರ್ಯ ಸ್ಥಿತಿ ಎದುರಾದರೂ ಪ್ರಯಾಣ ಮಾಡಬೇಕಾಗಿ ಬಂತು. ಬಹುತೇಕ ಕಾಲೇಜುಗಳು ಕೂಡ ಇಂದು ರಜೆ ಘೋಷಣೆ ಮಾಡಿವೆ.

ವಾಹನ ಸಂಚಾರ ಮಾರ್ಗ ಬದಲಾವಣೆ

ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್‌ಗೆ ಬೆಂಬಲ ನೀಡಿರುವ ಸಂಘಟನೆಗಳು ಮೆಜೆಸ್ಟಿಕ್ ರೈಲು ನಿಲ್ದಾಣದ ಸಮೀಪ 10 ಗಂಟೆಗೆ ಪ್ರತಿಭಟನಾ ಜಾಥಾ ಆರಂಭಿಸಲಿವೆ. ಫ್ರೀಡಂಪಾರ್ಕ್‌ ತನಕ ಜಾಥಾ ಸಾಗಲಿದೆ. ಹೀಗಾಗಿ ಸಂಚಾರ ವಿಭಾಗದ ಪೊಲೀಸರು ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಟ್ಯಾಕ್ಸಿ, ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ವಿಮಾನ ನಿಲ್ದಾಣದ ಟ್ಯಾಕ್ಸಿ ಬಿಟ್ಟು ಬೆಂಗಳೂರು ನಗರದಲ್ಲಿ ಟ್ಯಾಕ್ಸಿ ಸಿಗುತ್ತಿಲ್ಲ.

ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ ತನಕ ಜಾಥಾ ನಡೆಯುವ ಹಿನ್ನಲೆ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಮಾಡಲಾಗಿದ್ದು, ಅದರ ಮಾಹಿತಿ ಮುಂದೆ ಇದೆ.

* ಖೋಡೆ ಸರ್ಕಲ್‌ಗೆ ಬರುವ ವಾಹನಗಳು ಆರ್. ಆರ್. ಜಂಕ್ಷನ್ ಮೂಲಕ ಮಲ್ಲೇಶ್ವರಂ ಕಡೆಗೆ ಹೋಗುವುದು.

* ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಜಿ. ಟಿ. ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್-ಓಕಳಿಪುರಂ ಸುಜಾತ ಮೂಲಕ ಮುಂದೆ ಹೋಗುವುದು.

* ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು ಹಳೇ ಜೆಡಿಎಸ್ ಕಛೇರಿ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.

* ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು ಪ್ಯಾಲೇಸ್ ರಸ್ತೆ-ಮಹಾರಾಣಿ ಅಂಡರ್‌ಪಾಸ್- ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು.

ತೀವ್ರವಾಗಲಿದೆ ಖಾಸಗಿ ಸಾರಿಗೆ ಹೋರಾಟ

ಒಟ್ನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಲ್ಲೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ಅಲರ್ಟ್ ಆಗಿದ್ದಾರೆ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು. ಮತ್ತೊಂದ್ಕಡೆ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಖಾಸಗಿ ಸಾರಿಗೆ ಒಕ್ಕೂಟ ತೀರ್ಮಾನಿಸಿದೆ.

ಬಂದ್ ತೀವ್ರಗೊಳ್ಳುವ ಆತಂಕದ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಇದರ ಜೊತೆಯಲ್ಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಈಗ ಹದ್ದಿನ ಕಣ್ಣಿಡಲಾಗಿದ್ದು, ವಾಹನಗಳ ಮೇಲೆ ದಾಳಿ ನಡೆದ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆದರೂ ಕೆಲವು ಕಡೆ ಆಟೋ ಹಾಗೂ ಕ್ಯಾಬ್‌ಗಳ ಮೇಲೆ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+