ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈದ್ ಮಿಲಾದ್ ಹಬ್ಬದ ಪೂರ್ವ ತಯಾರಿ ಭಾರೀ ಜೋರು

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 23 : ಗೌರಿ ಗಣಪತಿ ಹಬ್ಬದ ಸಂಭ್ರಮ ಮುಗಿದು ಕೆಲವೇ ದಿನಗಳಾಗಿವೆ. ಮುಂಬರುವ ಹಬ್ಬಗಳ ತಯಾರಿಯಲ್ಲಿ ಮಗ್ನರಾಗಿರುವ ಮಂದಿ ಪ್ರಪಂಚದಲ್ಲಿ ನಡೆದ, ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಸಮಯವೇ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೀಗೆ ಬೇಸರಿಸಿಕೊಳ್ಳುವ ಮಂದಿಗೆ ಇಲ್ಲಿದೆ ನೋಡಿ ಹಲವಾರು ಸುದ್ದಿಗಳ ಸಂಪುಟ. ಒಂದೊಂದೇ ಪುಟ ತೆರೆದು ಎಲ್ಲೆಲ್ಲಿ ಏನೇನಾಗಿದೆ ಎಂದು ಓದಿ ತಿಳಿದುಕೊಳ್ಳಿ.

ಕಲ್ಕತ್ತಾ ಕಿವುಡು ಮಕ್ಕಳ ಪ್ರತಭೆಗೆ ಸಾಕ್ಷಿಯಾಯಿತು. ಬಿಹಾರದ ಹಲವೆಡೆ ಚುನಾವಣೆ ಕಾವು ಕಾಣಿಸಿಕೊಳ್ಳುತ್ತಿದೆ. ಚುನಾವಣಾ ಸ್ಪರ್ಧಿಗಳು ಹಲವಾರು ಕಡೆ ಭೇಟಿ ನೀಡುತ್ತಿದ್ದಾರೆ. ಮುಸಲ್ಮಾನರ ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಯ ತಯಾರಿ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಭಾರತೀಯ ಕ್ರಿಕೆಟಿಗರ ತಂಡ ಬೆಂಗಳೂರಿಗೆ ಬಂದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪರಮವೀರ ಚಕ್ರ ಪ್ರದಾನ ಮಾಡಿದರು.[ಬಿಹಾರ ಚುನಾವಣಾಪೂರ್ವ ಸಮೀಕ್ಷೆ: ನಿತೀಶ್ ಗೆ ಮುಖಭಂಗ]

ಹೀಗೆ ಬುಧವಾರ ಸುದ್ದಿ ಸಂಪುಟ ನಾನಾ ವಿಶೇಷ ಘಟನೆಗಳಿಂದ ಕೂಡಿದೆ. ಮೇಲಿನ ಎಲ್ಲಾ ಸುದ್ದಿಗಳ ಹೆಚ್ಚಿನ ವಿವರಗಳಿಗಾಗಿ ಸ್ಲೈಡ್ ನೋಡಿ. ಪ್ರತಿಯೊಂದು ಘಟನೆಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಮನಸೆಳೆದ ಕಿವುಡು ಮಕ್ಕಳ ನೃತ್ಯ

ಮನಸೆಳೆದ ಕಿವುಡು ಮಕ್ಕಳ ನೃತ್ಯ

ಕಲ್ಕತ್ತಾದಲ್ಲಿ 'ಅಂತರಾಷ್ಟ್ರೀಯ ಕಿವುಡು ಮಕ್ಕಳ ವಾರ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಕಿವುಡು ಮಕ್ಕಳು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಪ್ರತಿಭೆಗಳಿಗೆ ಸಾಕ್ಷಿಯಾದ ಈ ಆಚರಣೆಯಲ್ಲಿ ಮಕ್ಕಳು ಚಂದದ ಕೆಂಪು ಬಟ್ಟೆ ಧರಿಸಿ ಹೆಜ್ಜೆ ಹಾಕಿದ್ದು ಹೀಗೆ

ಪಾಟ್ನಾದಲ್ಲಿ ನಿತೀಶ್ ಕುಮಾರ್

ಪಾಟ್ನಾದಲ್ಲಿ ನಿತೀಶ್ ಕುಮಾರ್

ಬಿಹಾರ ಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಚುನಾವಣಾ ಪ್ರಚಾರ ಭಾರೀ ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಾಟ್ನಾದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿದ್ದರು. ಆಗ ಹಲವಾರು ಕಾಲೇಜು ಯುವತಿಯರು ನಿತೀಶ್ ಕುಮಾರ್ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಒದ್ದಾಡುತ್ತಿರುವುದು.

ಹ್ಯಾಪಿ ಈದ್ ಮಿಲಾದ್ ಇನ್ ಅಡ್ವನ್ಸ್

ಹ್ಯಾಪಿ ಈದ್ ಮಿಲಾದ್ ಇನ್ ಅಡ್ವನ್ಸ್

ಮುಸಲ್ಮಾರ ಹಬ್ಬವಾದ ಈದ್ ಮಿಲಾದ್ ಸೆಪ್ಟೆಂಬರ್ ೨೫ರ ಶುಕ್ರವಾರ ನಾಡಿನಾದ್ಯಂತ ಆಚರಣೆಗೊಳ್ಳಲಿದೆ. ಮುಸ್ಲಿಂ ಬಾಂಧವರು ಈ ಹಬ್ಬವನ್ನು ಮಹಮ್ಮದ್ ಪೈಗಂಬರರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸಲಾಗುತ್ತದೆ. ಈದ್ ಮಿಲಾದ್ ಎಂದರೆ ತ್ಯಾಗದ ಹಬ್ಬ ಎನ್ನಲಾಗುತ್ತದೆ. ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಈದ್ ಮಿಲಾದ್ ಪ್ರಯುಕ್ತ ಕುರಿಗಳ ಮಾರಾಟದಲ್ಲಿ ತೊಡಗಿರುವ ಮಂದಿ ನೋಡಿ.

ಆಫ್ರಿಕಾ ವಿರುದ್ಧ ಗೆಲುವು ನಮ್ಮದೆ

ಆಫ್ರಿಕಾ ವಿರುದ್ಧ ಗೆಲುವು ನಮ್ಮದೆ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಟಿ-20, ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು ಅಕ್ಟೋಬರ್ ಎರಡರಂದು ಟಿ 20 ಪಂದ್ಯದ ಮೂಲಕ ಸರಣಿಗೆ ಚಾಲನೆ ದೊರೆಯಲಿದೆ. ಸರಣಿಗೆ ಪೂರ್ವಭಾವಿ ಅಭ್ಯಾಸ ಮಾಡಲು ಬೆಂಗಳೂರಿಗೆ ಭಾರತ ಕ್ರಿಕೆಟ್ ತಂಡ ಆಗಮಿಸಿದ್ದು ಒಂದು ವಾರ ಕಾಲ ಕೆಎಸ್ ಇಎ ಮೈದಾನದಲ್ಲಿ ಅಭ್ಯಾಸ ಮಾಡಲಿದೆ.

ಪರಮವೀರ ಚಕ್ರ ಪ್ರದಾನ

ಪರಮವೀರ ಚಕ್ರ ಪ್ರದಾನ

1965ರ ಇಂಡೋ ಪಾಕ್ ಕದನದಲ್ಲಿ ಭಾಗವಹಿಸಿದ ಹಿರಿಯ ಸೈನಿಕರಿಗೆ ರಾಷ್ರಪತಿ ಭವನದಲ್ಲಿ ಪರಮವೀರ ಚಕ್ರ ಪ್ರಶಸ್ತಿಯನ್ನು ರಾಷ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು ಏರ್ ಮಾರ್ಷಲ್ ಅರ್ಜನ್ ಸಿಂಗ್, ಮಾಸ್ಟರ್ ಹವಾಲ್ದಾರ್ ಅಬ್ದುಲ್ ಹಮೀದ್ ಅವರ ಪತ್ನಿ ರಸೂನಾನ್ ಬೀಬೀ, ಲೆಫ್ಟಿನೆಂಟ್ ಕೊಲೆನಲ್ ಎಬಿ ಥರಾಪೋರ್ ಮಗಳಾದ ಜರೀನಾ ಮಹೀರ್ ಇನ್ನು ಹಲವಾರು ಮಂದಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ರಸೂಲನ್ ಬೀಬೀ ಅವರನ್ನು ಕರೆತರುತ್ತಿರುವ ರಕ್ಷಣಾ ಸಿಬ್ಬಂದಿ

English summary
This photo feature tells about many events of world on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X