'ಮಗನ ನೋಡಿ ದರ್ಶನ್ ಅತ್ತಿದ್ದು ನೋಡಿದ್ರೆ ಕರಳು ಚುರುಕ್ ಅನ್ನುತ್ತೆ ಅಲ್ವಾ?'
ಬೆಂಗಳೂರು, ಜೂನ್ 26: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಪರಪ್ಪನ ಅಗ್ರಹಾರ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್ ಅವರನ್ನು ಸೋಮವಾರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಜೈಲಿನಲ್ಲಿ ಭೇಟಿಯಾಗಿದ್ದರು.
ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿಯಾದ ವೇಳೆ ದರ್ಶನ್ ಜೋರಾಗಿ ಅತ್ತು ಕಣ್ಣೀರಿಟ್ಟಿದ್ದರು ಎಂದು ವರದಿಯಾಗಿತ್ತು. ಈ ವರದಿ ನೋಡಿದ ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಶಾಂತ್ ಸಂಬರಗಿ '15 ದಿನಗಳ ನಂತರ ಮಗ ಅಪ್ಪನ ನೋಡಿ ಅಪ್ಪ ಮಗನ ನೋಡಿ ಕಣ್ಣೀರು ಸುರಿಸಿದನಂತೆ. ಈ ಸುದ್ದಿ ಕೇಳಿದ್ರೇನೇ ಕರಳು ಚುರುಕ್ ಅನ್ನುತ್ತೆ ಅಲ್ವಾ? ಅದೇ ಚಿತ್ರದುರ್ಗದಲ್ಲಿ ನತದೃಷ್ಟ ಹೆಣ್ಣಿನ ಗರ್ಭದಲ್ಲಿ ಬೆಳಿತೀರೋ ಮಗುವಿಗೆ ಈ ಭಾಗ್ಯನೂ ಇಲ್ವಲ್ಲ' ಎಂದು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಇನ್ನು ಈ ಹಿಂದೆ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದ ಪ್ರಶಾಂತ್ ಸಂಬರಗಿ, ಅವನು ಹೊರಗಡೆ ಇರ್ಬೇಕಾದರೆ ಅವನ ಜೊತೆ ಒಂದೇ ತಟ್ಟೆನಲ್ಲಿ ಊಟ ಮಾಡ್ತಾಯಿದ್ರು ನಮ್ಮ ಅನೇಕ ಸ್ಯಾಂಡಲ್‌ವುಡ್ ನಟರು. ಇನ್ನು ಕೆಲವರು ನೀನೇ ಅಣ್ಣ, ನನ್ನ ಮಗ ತರ ಅಂತ ಹೇಳೋದೇನು. ಪಾಪ ಒಳಗಡೆ ಅಂದರ್ ಆದ್ಮೇಲೆ ಯಾರೇ ಒಬ್ಬ ಕನ್ನಡದ ಕಲಾವಿದರು ಇವನ ಪರ ಅಥವಾ ಇವನ ವಿರುದ್ಧ ಕಮಕ್ ಕೀಮಕ್ ಅಂತ ಹೇಳ್ತಾಯಿಲ್ಲ? ಅದೇ ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮೇಡಂ ಬಗ್ಗೆ ನಾನು ರಾಜಕೀಯವಾಗಿ ವಿರೋಧ ಇದ್ದರೂ ಇವಳ ಧೈರ್ಯ ಮೆಚ್ಚುತೀನಿ. ಇವನ ಪಾಪ ಕಾರ್ಯದ ಬಗ್ಗೆ ಧ್ವನಿ ಎತ್ತಿದ ಏಕೈಕ ದಿಟ್ಟ ಮಹಿಳೆ ಎಂದು ನಟಿ ರಮ್ಯಾ ಅವರನ್ನು ಹೊಗಳಿ ಬರೆದುಕೊಂಡಿದ್ದರು.












Click it and Unblock the Notifications