ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಬಂಡಾಯ: ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಪ್ರತಿಭಟನೆಗೆ ಪ್ರಕಾಶ್ ರಾಜ್ ಕರೆ!

ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನ ಕಟುವಾಗಿ ಟೀಕಿಸಿರುವ ಅವರು, ಅಕ್ಟೋಬರ್ 8ರಂದು (ಗುರುವಾರ) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಹಾಗೂ ಯುವಜನತೆಗೆ ಕರೆ ನೀಡಿದ್ದಾರೆ.

ಈ ಆಡಳಿತಾತ್ಮಕ ಪ್ರಕ್ರಿಯೆಯನ್ನ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನ ಕೊಲ್ಲುವ ನೇರ ಯತ್ನ ಎಂದು ಹೇಳಿರುವ ನಟ ಪ್ರಕಾಶ್ ರಾಜ್, ಇದು ಕೇವಲ ಒಂದು ವೋಟಿನ ಪ್ರಶ್ನೆಯಲ್ಲ, ಬದಲಾಗಿ ನಮ್ಮ ಸಾಂವಿಧಾನಿಕ ಹಕ್ಕುಗಳ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಎಂದಿದ್ದಾರೆ.

Prakash Raj Urges Citizens To Join Bengaluru Freedom Park Protest Against Draconian SIR Voter Rule

ಮುಖ್ಯವಾಗಿ ಬೆಂಗಳೂರಿನ ನಗರ ಪ್ರದೇಶಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನಿಜವಾದ ಮತದಾರರ ಹೆಸರುಗಳನ್ನ ಏಕಾಏಕಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪಾರದರ್ಶಕತೆ ಇಲ್ಲದ ಈ ಪ್ರಕ್ರಿಯೆಯಿಂದಾಗಿ ಅನೇಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವ್ಯವಸ್ಥಿತ ಅನ್ಯಾಯದ ವಿರುದ್ಧವೇ ಇದೀಗ ಪ್ರಕಾಶ್ ರಾಜ್ ಪ್ರತಿಭಟನೆಗೆ ಇಳಿದಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಮತ್ತು ಪೀಪಲ್ಸ್ ಟ್ರಿಬ್ಯೂನಲ್

ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರಾಜ್, ಸಿವಿಲ್ ಸೊಸೈಟಿ ಗುಂಪುಗಳು ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' ಸಹಯೋಗದೊಂದಿಗೆ ಈ ಹೋರಾಟವನ್ನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ವಕ್ತಾರ ಸೌರವ್ ದಾಸ್ ಈ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವ ಕಾರ್ಯಕರ್ತರು ಮತ್ತು ಸಂಘಟಕರನ್ನು ಕಾಕ್ರೋಚ್‌ಗಳು ಎಂದು ಉಲ್ಲೇಖಿಸಿರುವ ಪ್ರಕಾಶ್ ರಾಜ್, ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕಳೆದುಕೊಂಡ ಸಂತ್ರಸ್ತರು ರಾಜ್ಯ ಮಟ್ಟದ 'ಪೀಪಲ್ಸ್ ಟ್ರಿಬ್ಯೂನಲ್' (ಜನತಾ ನ್ಯಾಯಮಂಡಳಿ) ಮುಂದೆ ತಮ್ಮ ಅಳಲನ್ನ ಸಾಕ್ಷ್ಯ ಸಮೇತ ಮಂಡಿಸಲಿದ್ದಾರೆ ಎಂದು ವಿವರಿಸಿದ್ದಾರೆ.

ಅತಿಥಿಯ ಸುಳಿವು ನೀಡಿದ ನಟ

ಈ ಹೋರಾಟ ಕೇವಲ ಚುನಾವಣಾ ರಾಜಕೀಯವನ್ನ ಮೀರಿದ್ದಾಗಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಫ್ರೀಡಂ ಪಾರ್ಕ್‌ನಲ್ಲಿ ಸೇರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ಗುರುವಾರ ಸಂಜೆಯ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಒಬ್ಬ 'ಅಚ್ಚರಿಯ ಅತಿಥಿ' ಆಗಮಿಸಲಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ. "ನ್ಯಾಯ, ಸತ್ಯ ಮತ್ತು ಸ್ವಾಭಿಮಾನಕ್ಕಾಗಿ ತಲೆಬಾಗದೆ ನಿಲ್ಲುವ ದಿಟ್ಟ ಧ್ವನಿಯೊಂದು ಸಂಜೆ ನಮ್ಮೊಂದಿಗೆ ಸೇರಲಿದೆ. ಯಾರು ಎಂಬುದನ್ನು ಊಹಿಸುತ್ತಿರಿ, ಆ ಅಚ್ಚರಿಯ ವ್ಯಕ್ತಿಯನ್ನ ನಾನೇ ಪರಿಚಯಿಸುತ್ತೇನೆ" ಎಂದು ಹೇಳುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಕಾವು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+