Prajwal Love Dhoka: ಆಂಟಿ ಜೀವನ ಹಾಳು ಮಾಡಿದ ಪ್ರಜ್ವಲ್: ದೂರು ದಾಖಲು
ಬೆಂಗಳೂರು ಆಗಸ್ಟ್ 10: ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ನಂಬಿಸಿ ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಎರಡು ಮಕ್ಕಳಿರುವ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪ್ರೀತಿ ಯಾರ ನಡುವೆಯಾದರೂ ಹುಟ್ಟಿಕೊಳ್ಳಬಹುದು. ಆದರೆ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದರೆ ಯಶಸ್ವಿಯಾಗುವುದಕ್ಕಿಂತ ವಿಫಲವಾಗುವುದೇ ಹೆಚ್ಚು.
ಹೌದು... ಬೆಂಗಳೂರಿನಲ್ಲಿ ಆಂಟಿಯೊಬ್ಬಳು ಮೋಸ ಹೋಗಿರುವುದಾಗಿ ದೂರು ನೀಡಿದ್ದಾಳೆ. ಆಷಾಢ ಕಳೆದು ಶ್ರಾವಣ ಬಂದ್ರೆ ಮದುವೆ ಆಗಿ ಇಬ್ಬರು ಒಟ್ಟಿಗೆ ಜೀವನ ಮಾಡೋಣ ಅಂತ ನಂಬಿಸಿ ಪ್ರಜ್ವಲ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಿದ್ದ ರೀಲ್ಸ್ ಆಂಟಿಗೆ ಪ್ರಜ್ವಲ್ ಎಂಬಾತ ಯಾಮಾರಿಸಿದ್ದಾನೆ.

ಮೋಸ ಹೋದ ಮಹಿಳೆಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಹೀಗಿದ್ದರೂ ಪ್ರಜ್ವಲ್ ಎಂಬಾತನ ಜೊತೆ ಮಹಿಳೆ ಸಂಬಂಧದಲ್ಲಿ ಇದ್ದಳು. ಆದರೆ ಆತ ನಂಬಿಸಿ ಮೋಸ ಮಾಡಿ ಪರಾರಿಯಾಗಿದ್ದಾನೆ ಎಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ.
ಅಷ್ಟಕ್ಕೂ ಈ ರೀಲ್ಸ್ ಆಂಟಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಗೊತ್ತಾ? ಕೆಲ ವರ್ಷಗಳ ಹಿಂದೆಯಷ್ಟೇ ಈ ಮಹಿಳೆ ಗಂಡ ಹೊಡೆಯುತ್ತಾನೆಂದು ದೂರಿ ಆತನಿಂದ ದೂರವಾಗಿದ್ದಳು. ತವರು ಮನೆಯಲ್ಲಿ ವಾಸ ಮಾಡಿದ್ದ ಮಹಿಳೆ ಅಲ್ಲೂ ಮನಸ್ತಾಪ ಮಾಡಿಕೊಂಡು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಳು.
ಜೀವನ ಸಾಗಿಸಲು ಕಷ್ಟವಾಗಿ ಎಂಟು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಜೀವನ ಮಾಡಿಕೊಂಡಿದ್ದಳು. ಜೀವನ ನಡೆಸಲು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡ್ತಾಯಿದ್ದ ಈಕೆ ಸಮಯ ಕಳೆಯಲು ರೀಲ್ಸ್ ಮಾಡುತ್ತಿದ್ದಳು. ಆಕೆಯ ಜೀವನ ಅದು ಹೇಗೋ ನಡೆಯುತ್ತಿತ್ತು. ಆದರೆ ಈ ನಡುವೆ ರೀಲ್ಸ್ ನಿಂದಾಗಿ ಪ್ರಜ್ವಲ್ ಎಂಬಾತ ಈಕೆಗೆ ಪರಿಚಯವಾಗಿದ್ದ.

ಆಂಟಿ ಮಾಡುತ್ತಿದ್ದ ರೀಲ್ಸ್‌ಗಳಿಗೆ ಪ್ರಜ್ವಲ್ ಮನಸೋತಿದ್ದನು. ಪ್ರೀತಿಯ ಸಂಕೇತವಿರುವ ಹಾರ್ಟ್ ಎಮೋಜಿಯೊಂದಿಗೆ ಕಾಮೆಂಟ್ ಮಾಡ್ತಿದ್ದನು. ಇದೇ ವೇಳೆ ಇಬ್ಬರಿಗೂ ಪರಿಚಯವಾಗಿ ಕೊನೆಗೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಸಲಿಗೆ ಹೆಚ್ಚಾಗಿತ್ತು. ಮಹಿಳೆಗೆ ಮದುವೆಯಾಗಿರುವ ವಿಚಾರ ತಿಳಿದಿದ್ದರೂ ಪ್ರಜ್ವಲ್ ಆಕೆಯೊಡನೆ ಸಂಬಂಧದಲ್ಲಿ ಇದ್ದನು.
ಮಹಿಳೆ ನೋಡಲು ಚೆನ್ನಾಗಿಲ್ಲವಾದರೂ ನಾನು ಮದುವೆಯಾಗುತ್ತೇನೆ ಎಂದು ಮಹಿಳೆ ತಾಯಿ ಬಳಿಯೂ ಪ್ರಜ್ವಲ್ ಮದುವೆ ಪ್ರಸ್ತಾಪ ಮಾಡಿದ್ದನಂತೆ. ಶ್ರಾವಣ ಮಾಸದ ಬಳಿಕ ಮದುವೆಯಾಗುತ್ತೇನೆ ಎಂದು ಹೇಳಿದ್ದ ಪ್ರಜ್ವಲ್ ಮೂರು ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾಡಿದ್ದಾನೆ. ನಂತರ ಮೆಲ್ಲಗೆ ಕಾಲ್ಕಿತ್ತಿದ್ದಾನೆ.
ಮಹಿಳೆಯೊಂದಿಗೆ ಇರುವಷ್ಟು ದಿನ ಆಕೆ ಹಾಗೂ ಆಕೆಯ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದ ಪ್ರಜ್ವಲ್ ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಆಂಟಿ ಪದೇ ಪದೇ ಕರೆ ಮಾಡಿದಾಗ ಆಕೆಯನ್ನು ಶಂಕಿಸಿದ್ದಾನೆ. ಗಂಡನೊಂದಿಗೆ ಹೋಗಿ ಜೀವನ ಮಾಡಲು ತಿಳಿಸಿದ್ದಾನೆ. ಆಕೆಯೊಂದಿಗೆ ಜಗಳ ಮಾಡಿದ್ದಾನೆ. ಆದರೆ ಮಹಿಳೆ ಮಾತ್ರ ಪ್ರಜ್ವಲ್ ಬೇಕು ಅಂತ ಪಟ್ಟು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications