ಡಿ.4, 5, 6ರಂದು ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಚೆಕ್ ಮಾಡ್ಕೊಳಿ

ಬೆಂಗಳೂರು ಡಿಸೆಂಬರ್ 3: ಬೆಂಗಳೂರಿನಲ್ಲಿ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಇದರ ಮಧ್ಯೆ ಬೆಸ್ಕಾಂ ಸಿಲಿಕಾನ್ ಸಿಟಿ ಮಂದಿಗೆ ಬಿಗ್ ಶಾಕ್ ಕೊಟ್ಟಿದೆ. ನಿರ್ವಹಣೆ ಕಾರ್ಯ ಇರುವುದರಿಂದ ಬೆಂಗಳೂರಿನಲ್ಲಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲ್ಲಿಸುವುದಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಮೂರು ದಿನಗಳ ಕಾಲ ಬೆಂಗಳೂರಿನ ವಿವಿಧ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಜನ ಸಹಕರಿಸಬೇಕು ಎಂದು ನಿಗಮ ಮನವಿ ಮಾಡಿದೆ. ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಡಿಸೆಂಬರ್ 4, 5 ಮತ್ತು 6 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಡಿತವು ಮುಖ್ಯವಾಗಿ ನಿರ್ವಹಣೆ ಮತ್ತು ಇತರ ಕೆಲಸಗಳ ಕಾರಣದಿಂದಾಗಿರುತ್ತದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್ 4: ಪ್ರಕಟಣೆಯ ಪ್ರಕಾರ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಭ ನಗರ, ಶಾರದ ನಗರ, ಮಾರುತಿ ಲೇಔಟ್, ಬ್ರಿಗೇಡ್ ಪೆಟೂನಿಯಾ, ಕೆಆರ್ ರಸ್ತೆ, ಬನಶಂಕರಿ 2 ನೇ ಹಂತ, ಬನಶಂಕರಿ 3 ನೇ ಹಂತ, ಹೊಸಕೆರೆಹಳ್ಳಿ, ಪದ್ಮನಾಭನಗರ, ದತ್ತಾತ್ರೇಯನಗರ, ಮೂಕಾಂಬಿಕಾ ನಗರ, ಐಟಿಐಪಿಎಲ್ ರಸ್ತೆ, ಪಾಣತ್ತೂರು ದಿನ್ನೆ ರಸ್ತೆ, ಹೊರ ವರ್ತುಲ ರಸ್ತೆ, ದೇವರಬಿಸನಹಳ್ಳಿ, ಸುಭಾಷ್ ನಗರ, ತಿಲಕ್ ನಗರ, ಲಕ್ಕಸಂದ್ರ, ವಿಲ್ಸೋನ್‌ಗಾರ್ಡನ್, ಶಾಂತಿನಗರ, ಕೆಎಸ್‌ಆರ್‌ಟಿಸಿ ಕ್ವಾರ್ಟರ್ಸ್, ದೊಡ್ಡಕಮ್ಮನಹಳ್ಳಿ ಮತ್ತು ಚಿಕ್ಕಕಮ್ಮನಹಳ್ಳಿಯಲ್ಲಿ ಡಿಸೆಂಬರ್ 4ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಇನ್ನೂ ಉತ್ತರ ವಲಯದಲ್ಲಿ ಗಾಯತ್ರಿನಗರ, ಅಬ್ಬಿಗೆರೆ, ಟಾಟಾನಗರ, ದೇವಿನಗರ, ಲೊಟ್ಟೆಗೊಲ್ಲಹಳ್ಳಿ, ಎಲ್‌ಕೆಆರ್‌ ನಗರ, ರಿಂಗ್‌ ರಸ್ತೆಯ ಭಾಗ, ಜಿಕೆವಿಕೆ ಡಬಲ್‌ ರಸ್ತೆ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್‌ ಲೇಔಟ್‌ ಸೇರಿದಂತೆ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ಕಡಿತವಾಗಲಿದೆ. ಹುರಳಿ ಚಿಕ್ಕನಹಳ್ಳಿ, ಕೆ.ಟಿ.ಪುರ, ಹೆಸರಘಟ್ಟ, ದಾಸೇನಹಳ್ಳಿ, ಗುಡ್ಡದಹಳ್ಳಿ, ನೆಲಮಂಗಲ ಭಾಗಗಳು, ಡಿ.ಜೆ.ಹಳ್ಳಿ, ನ್ಯಾಯಾಂಗ ಬಡಾವಣೆ, ಕಲಾಸ್ತ್ರೀನಗರ, ಗ್ರಾಪಂ ಗಾರ್ಡನ್, ಮಲ್ಲಸಂದ್ರ ಮತ್ತು ಕಲ್ಯಾಣ ನಗರದಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.

Power cuts in Bangalore on D4, 5, 6: Check your area

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ವಿನಾಯಕ ಲೇಔಟ್, ನಾಗರಭಾವಿ, ಟಿಂಬರ್ ಯಾರ್ಡ್, ಟಿಬಿ ಹಳ್ಳಿ ರಸ್ತೆ, ವಿದ್ಯಾಮಾನ ನಗರ, ಅಂದ್ರಹಳ್ಳಿ ಮುಖ್ಯರಸ್ತೆ ಮತ್ತು ಟಿಜಿ ಪಾಳ್ಯ ಇದರಲ್ಲಿ ಸೇರಿವೆ. ಜೊತೆಗೆ ಪೂರ್ವ ವಲಯದಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಇದರಲ್ಲಿ ಮರ್ಫಿ ಟೌನ್, ಸುದ್ದಗುಂಟೆ ಪಾಳ್ಯ, ಲೇಕ್ ಸಿಟಿ ಟೌನ್, ಜಯಂತಿ ನಗರ, ಕಾಫಿ ಬೋರ್ಡ್ ಲೇಔಟ್, ಗಾಂಧಿ ವೃತ್ತ ಮತ್ತು ಈದ್ಗಾ ರಸ್ತೆ ಸೇರಿವೆ.

ಡಿಸೆಂಬರ್ 5: ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಜೆಸಿ ಇಂಡಸ್ಟ್ರಿಯಲ್ ಲೇಔಟ್, ಸೋಮಸುಂದ್ರ ಪಾಳ್ಯ, ಹುಳಿಮಾವು ಮತ್ತು ವೆಲಂಕಣಿ ಟೆಕ್‌ಪಾರ್ಕ್ ಪವರ್ ಕಟ್ ಆಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಅಮೃತಹಳ್ಳಿ, ಜಕ್ಕೂರು, ಟೆಲಿಕಾಂ ಲೇಔಟ್, ಎಚ್‌ಎಂಟಿ ಲೇಔಟ್, ಶಿವಪುರ, ನೆಲಗದರನಹಳ್ಳಿ, ರಾಘವೇಂದ್ರ ಲೇಔಟ್ ಮತ್ತು ತುಮಕೂರು ರಸ್ತೆಯಲ್ಲಿ ವಿದ್ಯುತ್‌ ಕಡಿತವಾಗಲಿದೆ.

Power cuts in Bangalore on D4, 5, 6: Check your area

ಪಶ್ಚಿಮ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿಘ್ನೇಶ್ವರ ನಗರ, ವೀರಭದ್ರೇಶ್ವರ ನಗರ, ಭೈರವೇಶ್ವರ ಕೈಗಾರಿಕಾ ರಸ್ತೆ, ತಿಮ್ಮಪ್ಪ ರಸ್ತೆ, ಪೀಣ್ಯ 2ನೇ ಹಂತ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ ಮತ್ತು ರಾಜಾಜಿನಗರ ಇದರಲ್ಲಿ ಸೇರಿವೆ. ಪೂರ್ವ ವಲಯದಲ್ಲಿ ಹಲಸೂರು ಮೆಟ್ರೊ ನಿಲ್ದಾಣದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

ಡಿಸೆಂಬರ್ 6: ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಚಿಕ್ಕಲಕ್ಷ್ಮಿ ಲೇಔಟ್, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಭ ನಗರ, ಶಾರದ ನಗರ, ಮಾರುತಿ ಲೇಔಟ್, ಈಶ್ವರ ಲೇಔಟ್, ಲಕ್ಷ್ಮಿ ನಗರ, ಗುರು ರಾಘವೇಂದ್ರ ಲೇಔಟ್, ಬಿ ಶಿವೇರ್ಶ ಗರಡನ್ ನಗರ, ಬಿ. , ದೊಡ್ಮನೆ ಕೈಗಾರಿಕಾ ಪ್ರದೇಶ, ಚರ್ಚ್ ರಸ್ತೆ, ಚುಂಚಗಟ್ಟಾ ಮುಖ್ಯ ರಸ್ತೆ, ರಾಜೀವ್ ಗಾಂಧಿ ರಸ್ತೆ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ತ್ಯಾಗರಾಜ ನಗರ ಮುಖ್ಯ ರಸ್ತೆ, MV ಮಾರ್ಗ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಟಿಜಿ ಲೇಔಟ್, ಇಟ್ಟಮಡು, ಗುರುದತ್ತ ಲೇಔಟ್, ಸಿದ್ದಾಪುರ 1ನೇ ಬ್ಲಾಕ್, ದೊಮ್ಮಲೂರು ಹೊರ ವರ್ತುಲ ರಸ್ತೆ, ಅಮರಜ್ಯೋತಿ ಪೂರ್ವ ಭಾಗ, ಸಮತಾ ನಗರ, ರಾಜೇಂದ್ರ ನಗರ, ಬಿಟಿಎಂ 1ನೇ ಹಂತ, ವಿಜ್ಞಾನ ನಗರ, ಕೆಂಪಣ್ಣ ಮುಖ್ಯರಸ್ತೆ, ಕುವೆಂಪಣ್ಣ ಮುಖ್ಯರಸ್ತೆ. , ವಿಶ್ವಜಿತ್ ಲೇಔಟ್, ರಾಮಯ್ಯರೆಡ್ಡಿ ಎ & ಬಿ ಸೆಕ್ಟರ್ ಮತ್ತು ಬೃಂದಾವನ ಲೇಔಟ್, ಮಾರತಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಚೌಡೇಶ್ವರಿ ದೇವಸ್ಥಾನ ರಸ್ತೆ, ತುಳಸಿ ಥಿಯೇಟರ್ ರಸ್ತೆ, ಎಇಸಿಎಸ್ ಲೇಔಟ್, ಐಟಿಪಿ ಎಲ್ ಮುಖ್ಯರಸ್ತೆ, ಕುಂದಲಹಳ್ಳಿ ಕಾಲೋನಿ, ಪಾಣತ್ತೂರು ದಿನ್ನೆ ರಸ್ತೆ, ಸಿಕೆ ನಗರ, ಪರಪ್ಪನ ಅಗ್ರಹಾರ, ಮಹಾಗಣಪತಿ ದೇವಸ್ಥಾನ ಸುತ್ತಮುತ್ತ, ಜುನ್ನಸಂದ್ರ ಮುಖ್ಯರಸ್ತೆ, 11ನೇ ಬ್ಲಾಕ್ ಬಿಡಿಎ ಲೇಔಟ್ ಅಂಜನಾಪುರ, ಗೌರವನನಗರ, ಅನ್ನಪೂರ್ಣೇಶ್ವರಿ ಲೇಔಟ್, ಶ್ರೇಯಸ್ ಕಾಲೋನಿ ಮತ್ತು ಎಚ್‌ಎಸ್‌ಆರ್ ಪವರ್ ಕಟ್ ಆಗಲಿದೆ.

Recommended Video

      ಸಂಬಳ ಸಿಗದ ರಾಯಭಾರಿ ಮಾಡಿದ ಟ್ವೀಟ್ ನಿಂದ ಪಾಕಿಸ್ತಾನದ ಮಾನ‌ ಹರಾಜು | Oneindia Kannada

      ಬೆಂಗಳೂರು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದರಲ್ಲಿ ಓಕಳಿಪುರಂ ಮುಖ್ಯರಸ್ತೆ, ದೇವಯ್ಯ ಪಾರ್ಕ್, ಯತ್ತಿರಾಜ್ ಮಾತಾ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಸುಬೇದಾರಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ದಿವಾನರಪಾಳ್ಯ, ತಣ್ಣೀರು ಹಳ್ಳ, ಬಾಲಾಜಿ ಲೇಔಟ್, ಭದ್ರಪ್ಪ ಲೇಔಟ್, ಬಸ್ಸಿರಾಯಾರತಿಪುರ, ನಾನ್ ಭಾಗ , ವೆಂಕಟರಾಮಪ್ಪ ಲೇಔಟ್, ಗುರುದರ್ಶನ ಲೇಔಟ್, ಗಣೇಶ್ವರ ಲೇಔಟ್, ಸಪ್ತಗಿರಿ ಲೇಔಟ್, ತಿಂಡ್ಲು ಗ್ರಾಮ, ದ್ವಾರಕಾನಗರ, ಮಾರುತಿ ನಗರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿ, ಕೆ.ಬಿ.ಸಂದ್ರ, ಚಿನ್ನಣ್ಣ ಲೇಔಟ್, ರತನ್ ಸಿಂಗ್ ಲೇಔಟ್, ಪುಟ್ಟೇನಹಳ್ಳಿ, ಬಾಗಲು ನಗರ ಮುಖ್ಯ ರಸ್ತೆ, ಕೋಗಿಲು ನಗರ ಮುಖ್ಯ ರಸ್ತೆ, , MTS ಕಾಲೋನಿ, ಮುತ್ತುರಾಯ ಸ್ವಾಮಿ ದೇವಸ್ಥಾನದ ಹತ್ತಿರ, ಪ್ರಶಾಂತ್ ನಗರ, ನೃಪತುಂಗ ರಸ್ತೆ, ತೆಂಗಿನ ತೋಟ, ಕೆಜಿ ಲೇಔಟ್, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರ ವಿದ್ಯುತ್ ಕಡಿತಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+