Bengaluru Power Cut: ಬೆಂಗಳೂರಿನಲ್ಲಿಂದು 7 ಗಂಟೆ ಕರೆಂಟ್‌ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಇಂದು (ಸೆಪ್ಟೆಂಬರ್ 14, ಭಾನುವಾರ) ರಂದು ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.

66/11 ಕೆ.ವಿ. ಬಾಣಸವಾಡಿಯ ಪವರ್ ಸ್ಟೇಷನ್‌-3ರಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಸೆಪ್ಟೆಂಬರ್ 14ರ ಭಾನುವಾರ ವಿದ್ಯತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Power Cut in Bengaluru s These Areas on September 14 Sunday

ಕೆಪಿಟಿಸಿಎಲ್ ವತಿಯಿಂದ 66/11 ಕೆ.ವಿ ಬಾಣಸವಾಡಿ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯ ಹಿನ್ನೆಲೆ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಂಜೆ 7 ಗಂಟೆಗಳ ಕಾಲ ನಗರದ ಹಲವು ಭಾಗಗಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಮತ್ತು ತುಮಕೂರು ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಸೆಪ್ಟೆಂಬರ್ 14ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತುರ್ತುನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ಬೆಂಗಳೂರು ನಗರದ ಕೆಜಿ ದೇವಸ್ಥಾನ, ಹಿರೇಹಳ್ಳಿ, ಹೊನ್ನುಡಿಕೆ, ಹೆಣ್ಣೂರು ಮತ್ತು ತಿಮ್ಮಸಂದ್ರ ಸೇರಿದಂತೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಸಿದೆ. ಆದ್ದರಿಂದ, ಈ ಭಾಗಗಳ ನಿವಾಸಿಗಳು ತುರ್ತು ನಿರ್ವಹಣಾ ಕಾರ್ಯ ಸಮಯದಲ್ಲಿ ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ಬಳಸುವುದನ್ನು ತಪ್ಪಿಸಬೇಕು. ಹಾಗೂ ಮುಂಚಿತವಾಗಿ ಲ್ಯಾಪ್‌ಟಾಪ್‌, ಮೊಬೈಲ್‌ನಂತ ವಿದ್ಯುತ್ ಉಪಕರಣಗಳನ್ನಯ ಮುಂಚಿತವಾಗಿ ಚಾರ್ಜ್‌ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದೆ.

ರಾಜ್ಯ ರಾಜಧಾನು ಬೆಂಗಳೂರು ಅಷ್ಟೇ ಅಲ್ಲದೆ, ರಾಜ್ಯದ ಹಲವು ಭಾಗಗಳಲ್ಲಿ ಇದೇ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ ಎಂದು ಬೆಸ್ಕಾಂ ತಿಳಿಸಿದೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ನಿಟ್ಟೂರು, ಗುಬ್ಬಿ, ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಉಂಗ್ರ, ಸೋಮಲಾಪುರ, ನೈಋತ್ಯ ರೈಲ್ವೆ ಮಾರ್ಗ, ಬೆಳ್ಳಾವಿ, ಹೆಗ್ಗೆರೆ, ದೊಡ್ಡಸರಂಗಿ, ಕೋರ್, ಬೆಳದಾರ, ಉರ್ಡಿಗಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+