Power cut: ಬೆಂಗಳೂರಿನ ವಿವಿಧೆಡೆ ಶನಿವಾರ (ಅ.21) ವಿದ್ಯುತ್ ಇರಲ್ಲ: ಸಮಯ, ಪ್ರದೇಶಗಳ ಮಾಹಿತಿ
ಬೆಂಗಳೂರು, ಅಕ್ಟೊಬರ್ 20: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ನಗರದ ಅಂಜನಾಪುರ ಮತ್ತು ಜಯದೇವ ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಸಂಬಂಧ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಶುಕ್ರವಾರ ಸಂಜೆ ವರೆಗೆ ಮತ್ತು ನಾಳೆ ಶನಿವಾರ ಇಡಿ ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಕೆಲವೆಡೆ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜುನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯೋಣ.

ನಾಳೆ ಶನಿವಾರ (ಅಕ್ಟೋಬರ್ 21) ಬೆಂಗಳೂರಿನ ಬಿಳೆಕಹಳ್ಳಿ, ರಂಕಾ ರಸ್ತೆ, ಅನುಗ್ರಹ ಬಡಾವಣೆ, ಎನ್.ಎಸ್‌ಪಾಳ್ಯ, ವಿಜಯ ಬ್ಯಾಂಕ್ ಲೇಔಟ್ ಒಂದನೇ ಭಾಗ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ತುರ್ತು ಕಾಮಗಾರಿ ಕೈಗೊಳ್ಳುವ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇಂದು ಅಕ್ಟೊಬರ್ 20ರಂದು ಅವಲಹಳ್ಳಿ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್, ರಾಯಲ್ ಲೇಕ್ ಫ್ರಂಟ್ ವ್ಯೂ ರೆಸಿಡೆನ್ಸಿ, ಬ್ರೂಕ್ಸ್ ಲೇಔಟ್, ದೀಪಕ್ ಲೇಔಟ್, ಶ್ರೀನಿವಾಸ್ ಬ್ಯಾಂಕ್ ಲೇಔಟ್, ತಲಘಟ್ಟಪುರ, ವಾಜರಹಳ್ಳಿ, ಶೋಭಾ ಅಪಾರ್ಟ್‌ಮೆಂಟ್, ಕೆಎಸ್‌ಟಿ ಕಾಲೇಜು, ನಕಾರರ ಕಾಲೋನಿ, ಪುರವಂಕರ ಅಪಾರ್ಟ್‌ಮೆಂಟ್, ವಡ್ಡರಪಾಳ್ಯ, ಅಮೃತನಗರ, ಕೆಂಬತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.












Click it and Unblock the Notifications