Get Updates
Get notified of breaking news, exclusive insights, and must-see stories!

ದುನಿಯಾ ವಿಜಯ್ ಮೊದಲ ಪತ್ನಿಗಾಗಿ ಪೊಲೀಸರ ಹುಡುಕಾಟ, ಅಣ್ಣಾಮಲೈ ಖಡಕ್ ವಾರ್ನಿಂಗ್‌

ಬೆಂಗಳೂರು, ಅಕ್ಟೋಬರ್ 29: ನಟ ದುನಿಯಾ ವಿಜಯ್ ಅವರ ಕೌಟುಂಬಿಕ ಕಲಹ ಬೇಗನೆ ಅಂತ್ಯವಾಗುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.

ನಾಗರತ್ನರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋದ ದುನಿಯಾ ವಿಜಯ್.!

ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಗರತ್ನ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.

'ಕೀರ್ತಿಗೌಡ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ನಾಗರತ್ನ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಗರತ್ನ ಅವರೇ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ದಾರೆಂಬುದನ್ನು ಪತ್ತೆ ಹಚ್ಚಿ ನಾಗರತ್ನ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ.

Police searhing for Duniya Vijays first wife Nagarathna

ನಾಗರತ್ನ ಅವರು ಕೀರ್ತಿಗೌಡ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ದೃಶ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಜಯ್ ಬಂಧನದ ಮರುದಿನ ಹಲ್ಲೆ

ವಿಜಯ್ ಬಂಧನದ ಮರುದಿನ ಹಲ್ಲೆ

ಪಾನಿಪುರಿ ಕಿಟ್ಟಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಬಂಧನವಾದ ಮರುದಿನ ನಾಗರತ್ನ ಅವರು ಕೀರ್ತಿಗೌಡ ಅವರ ಮನೆಗೆ ನುಗ್ಗಿ ಏಕಾ-ಏಕಿ ಹಲ್ಲೆ ನಡೆಸಿದ್ದರು. ಆ ನಂತರ ಠಾಣೆಗೆ ಹೋಗಿ ಕೀರ್ತಿಗೌಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು.

ತಲೆಮರೆಸಿಕೊಂಡಿರುವ ನಾಗರತ್ನ

ತಲೆಮರೆಸಿಕೊಂಡಿರುವ ನಾಗರತ್ನ

ಪ್ರಸ್ತುತ ನಾಗರತ್ನ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಗರತ್ನ ಅವರು ತಲೆಮರೆಸಿಕೊಂಡಿದ್ದು, ನಾಗರತ್ನ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ನಾಗರತ್ನ ಪರ ವಕೀಲರು ಪೊಲೀಸ್‌ ಜಾಮೀನಿಗಾಗಿ ಯತ್ನಿಸಿದ್ದರು. ಆದರೆ ದೊರೆತಿರಲಿಲ್ಲ.

ಅಣ್ಣಾಮಲೈ ಖಡಕ್ ಎಚ್ಚರಿಕೆ

ಅಣ್ಣಾಮಲೈ ಖಡಕ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಕುಟುಂಬಕ್ಕೆ ಎಚ್ಚರಿಕೆ ನೀಡಿರುವ ಅಣ್ಣಾಮಲೈ ಅವರು ಪರಸ್ಪರ ಕಿತ್ತಾಡಿಕೊಳ್ಳುವುದು ಬೇಡವೆಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ತಿಂಗಳಿನಿಂದಲೂ ನಾಗರತ್ನ ಅವರು ಕೀರ್ತಿಗೌಡ ಮೇಲೆ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ದೂರುಗಳನ್ನೂ ನೀಡಿದ್ದಾರೆ. ಪ್ರತಿಯಾಗಿ ಕೀರ್ತಿಗೌಡ ಸಹ ನಾಗರತ್ನ ದೂರು ನೀಡಿದ್ದಾರೆ.

ದುನಿಯಾ ವಿಜಯ್‌ ಇಂದ ವಿಚ್ಛೇಧನಕ್ಕೆ ಅರ್ಜಿ?

ದುನಿಯಾ ವಿಜಯ್‌ ಇಂದ ವಿಚ್ಛೇಧನಕ್ಕೆ ಅರ್ಜಿ?

ನಾಗರತ್ನ ಅವರಿಂದ ವಿಚ್ಛೇಧನ ಪಡೆದುಕೊಳ್ಳಲು ದುನಿಯಾ ವಿಜಯ್ ಮುಂದಾಗಿದ್ದಾರೆ ಎನ್ನಾಗಿದೆ. ಪಾನಿಪುರಿ ಕಿಟ್ಟಿ ಪ್ರಕರಣ ಆದಾಗಿನಿಂದಲೂ ನಾಗರತ್ನ ಹಾಗೂ ದುನಿಯಾ ವಿಜಯ್ ನಡುವಿನ ಕಿತ್ತಾಟ ತಾರಕ್ಕೆ ಹೋಗಿದ್ದು, ಪರಸ್ಪರ ಹಲ್ಲೆಗಳು, ದೂರುಗಳು ಎಲ್ಲವೂ ಆಗಿವೆ. ಹಾಗಾಗಿ ದುನಿಯಾ ವಿಜಯ್ ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+