ವಿಧಾನಸೌಧದ ಸಿಎಂ ಕಚೇರಿಗೆ ನುಗ್ಗಿದ ವ್ಯಕ್ತಿ ಬಂಧನ
ಬೆಂಗಳೂರು, ಫೆಬ್ರವರಿ 12 : ಪೊಲೀಸರ ಕಣ್ತಪ್ಪಿಸಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ನುಗ್ಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಭಾಸ್ಕರ್ ಆಗಂತುಕ. ಭಾಸ್ಕರ್ ಪೊಲೀಸರಿಗೆ ಯಾಮಾರಿಸಿ 3ನೇ ಗೇಟ್ ಮೂಲಕ ಸಿಬ್ಬಂದಿ ಎಂದು ಹೇಳಿಕೊಂಡು ಬೈಕ್ ನಲ್ಲಿ ಆವರಣದೊಳಗೆ ಪ್ರವೇಶ ಪಡೆದಿದ್ದಾನೆ. ಬಳಿಕ ದಕ್ಷಿಣ ಗೇಟ್ ಮೂಲಕ ವಿಧಾನಸೌಧದ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಅಲ್ಲಿಂದ ಮೂರನೇ ಮಹಡಿಯ ಸಿಎಂ ಕಚೇರಿ ಬಳಿ ಹೋಗಿದ್ದಾನೆ. ಡಾಗ್ ಸ್ಕ್ವಾಡ್ ಪರಿಶೀಲನೆ ವೇಳೆ ಸಿಎಂ ಕಚೇರಿಗೆ ಭಾಸ್ಕರ್ ನುಗ್ಗಿದ್ದಾನೆ.

ಪೊಲೀಸರಿಗೆ ಅನುಮಾನ ಬಂದು ವಶಕ್ಕೆ ಪಡೆದಿದ್ದಾರೆ. ವಿಧಾನಸೌಧದ ಪೊಲೀಸ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications