ಬೆಂಗಳೂರಿನ ಜನರಿಗೆ ಧನ್ಯವಾದ ತಿಳಿಸಿದ ಭಾಸ್ಕರ್ ರಾವ್

ಬೆಂಗಳೂರು, ಜುಲೈ 6: ಬೆಂಗಳೂರಿನ ಜನರಿಗೆ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ತಿಳಿಸಿದ್ದಾರೆ. ಭಾನುವಾರದ ಲಾಕ್‌ಡೌನ್ ಯಶಸ್ವಿಗೊಳಿಸಿದ ಕಾರಣ ಜನರಿಗೆ ಧನ್ಯವಾದ ಹೇಳಿದ್ದಾರೆ.

''ನೀವೆಲ್ಲಾ 36 ಗಂಟೆಗಳ ಲಾಕ್‌ಡೌನ್​​ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರ. ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು. ಇನ್ನು ಮುಂದೆ ಮಾಸ್ಕ್​ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡೋಣ'' ಎಂದು ಭಾಸ್ಕರ್​ ರಾವ್ ಟ್ವೀಟ್​ ಮಾಡಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್‌ಡೌನ್ ಘೋಷಣೆ ಮಾಡಿದೆ. ನಿನ್ನೆಯ ಮೊದಲ ಭಾನುವಾರ ಇದಕ್ಕೆ ಜನರಿಗೆ ಒಳ್ಳೆಯ ಸಹಕಾರ ಸಿಕ್ಕಿದೆ. ಹೀಗಾಗಿ, ಭಾಸ್ಕರ್​ ರಾವ್ ಧನ್ಯವಾದ ತಿಳಿಸಿದ್ದಾರೆ.

Police Commissioner Bhaskar Rao Thanked Bengaluru Residence

ಆದರೂ, ಬೆಂಗಳೂರಿನ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಕೊರೊನಾ ಭಯದಿಂದ ಅನೇಕ ಜನರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಕಾಟ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ಬರೋಬ್ಬರಿ 1235 ಮಂದಿಗೆ ಸೋಂಕು ಹರಡಿದೆ. ಕರ್ನಾಟಕದಲ್ಲಿ ನಿನ್ನೆಗೆ ಸೋಂಕಿತರ ಸಂಖ್ಯೆ 23474ಕ್ಕೆ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+