ಮನೆಯ ಬಾಲ್ಕನಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರ ಬಂಧನ
ಬೆಂಗಳೂರು, ನ. 16: ಅಕ್ರಮ ಸಂಪಾದನೆಯ ಸಲುವಾಗಿ ಮನೆಯ ಬಾಲ್ಕನಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಗಳ ಬಂಧಿಸಲಾಗಿದ್ದು, ಸುಮಾರು 2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಅಮೃತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ದಾಸರಹಳ್ಳಿ ಗ್ರಾಮದ ಮಾರುತಿ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿರುವ ರೋನಿಕಾ ಕಾರ್ಗೊ ಮೂವರ್ಸ್ ಎಂಬ ಅಂಗಡಿಯಲ್ಲಿ ಲಲಿತ್‍ಕುಮಾರ್ ಅಲಿಯಾಸ್ ಲಲಿತ್ ಎಂಬ ಆಸಾಮಿಯು ಗಾಂಜಾ ಎಂಬ ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಲಾಗಿದೆ.
ದಾಸರಹಳ್ಳಿಯ ಮಾರುತಿ ಲೇ ಔಟ್ ನಿವಾಸಿ ಲಲಿತ್‍ಕುಮಾರ್(27 ವರ್ಷ) ಅವರು ಹರಿಯಾಣ ರಾಜ್ಯ ಮೂಲದವರಾಗಿದ್ದು, ಹೆಚ್ಚಿನ ಹಣ ಗಳಿಸುವ ಸಲುವಾಗಿ ಶಂಕರ್ ಎಂಬುವನ ಮುಖಾಂತರ ಹರಿಯಾಣದಿಂದ ಕೋರಿಯಾರ್ ಮೂಲಕ ಕಡಿಮೆ ಬೆಲೆಯಲ್ಲಿ ಗಾಂಜಾವನ್ನು ಖರೀದಿಸಿ ನಂತರ ಅದನ್ನು ದುಪ್ಪಟ ಹಣಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುತ್ತಾನೆ. ಈತನ ಬಂಧನದಿಂದ ಸುಮಾರು 50000/- ರೂ ಬೆಲೆ ಬಾಳುವ 1.650 ತೂಕದ ಗಾಂಜಾ ವನ್ನು ವಶಪಡಿಸಿಕೊಂಡಿರುತ್ತದೆ.ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.

***
ಬಾಲ್ಕನಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯ ಬಂಧನ
ಸಂಪಿಗೆಹಳ್ಳಿಯ ನಿವಾಸಿ ಪರೇಶ್ ದಿಲೀಪ್ ಭಟ್(40 ವರ್ಷ) ಎಂಬುವವನ್ನು ದಸ್ತಗಿರಿ ಮಾಡಿದ್ದು ಈತ ಮೂಲತಃ ಮುಂಬೈ ನಿವಾಸಿಯಾಗಿದ್ದಾರೆ. ಆರೋಪಿಯು ಹೆಚ್.ಬಿ.ಆರ್.ಲೇಔಟ್‍ನಲ್ಲಿರುವ ಮೈಕ್ರೋಟೆಕ್ ವಿಷನ್ ಪ್ರೈ ಲಿಮಿಟೆಡ್ ಸಂಸ್ಥೆಯಲ್ಲಿ ಕಸ್ಟಮರ್ ಸರ್ವೀಸ್ ಪ್ರೊವೈಡರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ.
ಈತನನ್ನು ವಿಚಾರಣೆ ಮಾಡಲಾಗಿ ಆರೋಪಿತನು ಗಾಂಜಾ ಮಾರಾಟ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತಾನು ವಾಸವಾಗಿರುವ ಅರ್ಕಾವತಿ ಲೇಔಟ್ ಬಿಲ್ಡಿಂಗ್ ಮನೆ ನಂ 201 ರ ಬಾಲ್ಕನಿಯಲ್ಲಿ ಅಕ್ರಮವಾಗಿ ಗಾಂಜ ಗಿಡವನ್ನು ಬೆಳೆದಿರುವುದಾಗಿ ಒಪ್ಪಿಕೊಂಡಿದ್ದು, ಈತನ ಬಂದನದಿಂದ ಸುಮಾರು 240 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಿಗೆಹಳ್ಳಿ ಎಸಿಪಿ ನಾಗರಾಜ ಕೆ.ಎಸ್, ಸಿಬ್ಬಂದಿ ಮಲ್ಲಿಕಾರ್ಜುನ ಬಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಐಪಿಎಸ್ ಕಲಂ, 8(ಎ), 20(ಎ), 20(ಬಿ) ಎನ್‍ಡಿಪಿಎಸ್ ಆಕ್ಟ್ ಅಡಿಯಲ್ಲಿ ಕೇಸು ದಾಖಲಾಗಿರುತ್ತದೆ.












Click it and Unblock the Notifications