ಐಟಿ ಅಧಿಕಾರಿಯೆಂದು ಹೇಳಿ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಜೈಲು ಪಾಲಾದ

ಬೆಂಗಳೂರು, ಡಿಸೆಂಬರ್ 22: ಕಂದಾಯ ಇಲಾಖೆ ಅಧಿಕಾರಿ ಸೋಗಿನಲ್ಲಿ ಬಂದು ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ನಾಗಾಲ್ಯಾಂಡ್ ಮೂಲದ ಜಾನ್ ಕೆಜಿಫಿಯನ್ನು ಸೈಬರ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾತೆದಾರರ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಿದ್ದ ಆರೋಪಿ, ತನ್ನನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಹೇಳಿ ಪರಿಚಯಿಸಿಕೊಳ್ಳುತ್ತಿದ್ದ ಬಳಿಕ ನಿಮ್ಮ ಆದಾಯ ತೆರಿಗೆ ಖಾತೆಯನ್ನು ಅಪ್‌ಡೇಟ್ ಮಾಡಬೇಕಿದೆ.

ಅದಕ್ಕಾಗಿ ನಿಮ್ಮ ಮೊಬೈಲ್‌ಗೆ ಒಂದು ಲಿಂಕ್ ಕಳುಹಿಸುತ್ತೇನೆ ಅದನ್ನು ಓಪನ್ ಮಾಡಿದರೆ ಒಂದು ಓಟಿಪಿ ಬರುತ್ತದೆ ಅದರ ಬಗ್ಗೆ ತಿಳಿಸಿ ಎಂದು ಸಲಹೆ ನೀಡುತ್ತಿದ್ದ. ಹೀಗೆಯೇ ಅವರಿಂದ ಹಣ ಲಪಟಾಯಿಸುತ್ತಿದ್ದ.

Police arrested Fake IT officer

ಲಕ್ಷಾಂತರ ಹಣ ದೋಚುತ್ತಿದ್ದ. ಬನ್ನೇರುಘಟ್ಟ ರಸ್ತೆಯ ನೋಬೋ ನಗರದ ನಿವಾಸಿಯೊಬ್ಬರಿಗೂ ವಂಚನೆ ಮಾಡಿದ್ದ, ಖಾತೆಯಿಂದ 2.2 ಲಕ್ಷ ರೂ ಲಪಟಾಯಿಸಿದ್ದ. ಆತ ಕಾಡುಗೋಡಿಯ ಮಹೀಂದ್ರ ಬ್ಯಾಂಕ್‌ನಲ್ಲಿ ಒಂದು ಖಾತೆ ತೆರೆದಿದ್ದ.

ಆತ ತನ್ನ ಖಾತೆಗೆ ಹಣ ಬಂದ ತಕ್ಷಣ ಅದನ್ನು ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಳ್ಳಲು ತನ್ನ ಸಹಚರನಿಗೆ ತಿಳಿಸುತ್ತಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸೈಬರ್ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+