ಬೆಂಗಳೂರು: ದ್ವಿಚಕ್ರ ವಾಹನ ಕಳ್ಳರ ಸೆರೆ
ಬೆಂಗಳೂರು, ಮೇ.10 : ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸರು ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಜನ ಕಳ್ಳರನ್ನು ಬಂಧಿಸಿದ್ದಾರೆ.
ನಗರದ ಹಲವು ಕಡೆ ಶೋಕಿಗಾಗಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಮಂಜುನಾಥ, ರಘುನಾಥ್‍ರಾವ್, ಸಂತೋಷ್‍ಕುಮಾರ ಬಂಧಿತ ಆರೋಪಿಗಳಾಗಿದ್ದು ಇವರಿಂದ 5 ಲಕ್ಷ ಬೆಲೆ ಬಾಳುವ 12 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ಗಿರಿನಗರ, ಬ್ಯಾಟರಾಯನಪುರ, ಜ್ಞಾನಭಾರತಿ, ಕೆಂಗೇರಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ವಶಪಡಿಸಿಕೊಂಡಿರುವ ವಾಹನಗಳಲ್ಲಿ 4 ದ್ವಿ ಚಕ್ರ ವಾಹನಗಳ ಗಿರಿನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕದ್ದಿದ್ದಾರೆ.[ಬೆಂಗಳೂರು: ರಾತ್ರಿ ಕಳ್ಳರ ಕೈಚಳಕ - 5 ಲಕ್ಷ ಕಳ್ಳತನ]

ರಾಜರಾಜೇಶ್ವರಿನಗರದ ಮಣಪ್ಪುರಂ ಫೈನಾನ್ಸ್ ನಲ್ಲಿ ಮೇ.9 ರಂದು ಆಭರಣ ಕಳವು ಪ್ರಕರಣವನ್ನುಪೊಲೀಸರು ಬೇಧಿಸಿದ್ದು ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ.[ಹೈಟೆಕ್ ವೇಶ್ಯಾವಾಟಿಕೆ ದಂಧೆ- ಇಬ್ಬರ ಬಂಧನ]
ಚಿನ್ನದ ಆಭರಣಗಳನ್ನು ಇಟ್ಟಿದ್ದ ಪ್ಯಾಕೆಟ್‍ನ್ನು ಕಳವು ಮಾಡಿದ ಹಿನ್ನೆಲೆಯಲ್ಲಿ ಪ್ರಕಾಶ ಬಿನ್ ಜವರೇಗೌಡನನ್ನು ಬಂಧಿಸಿ ಆತನ ಬಳಿಯಿದ್ದ 96 ಸಾವಿರ ಬೆಲೆ ಇರುವ 33 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.[ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು]












Click it and Unblock the Notifications