ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!

ಬೆಂಗಳೂರು, ಜನವರಿ, 07: ಕ್ಷುಲ್ಲಕ ಕಾರಣಕ್ಕೆ ವಿಷ ಉಂಡು ಸಾವಿನ ಅಂಚಿಗೆ ತಲುಪಿದ್ದ ಮರದಲ್ಲೀಗ ಹೊಸ ಚಿಗುರು, ಹೊಸ ಉಸಿರು. ಮರದ ಆರೈಕೆ ಮಾಡಿದ್ದ ವಿಜಯ್ ನಿಶಾಂತ್ ಕಣ್ಣಲ್ಲಿ ಸಂತೃಪ್ತಿಯ ಭಾವ.

ಬೆಂಗಳೂರಿನ ವಿಜಯನಗರದಲ್ಲಿ ಮನೆಯ ಮಾಲೀಕರೊಬ್ಬರು ವಾಸ್ತು ದೋಷ ಎಂಬ ಕಾರಣಕ್ಕೆ ಮನೆ ಎದುರಿಗಿನ ಮರಕ್ಕೆ ವಿಷ ಉಣಿಸಿದ್ದರು. ಅದ್ಯಾವ ಜ್ಯೋತಿಷಿಮ ಇಂಥ ಐಡಿಯಾ ಕೊಟ್ಟಿದ್ದನೋ ಗೊತ್ತಿಲ್ಲ! ಆದರೆ ಈಗ ವಿಷ ಉಂಡ ಮರದಲ್ಲಿ ಮುರು ಜೀವ ಕಾಣಿಸಿಕೊಂಡಿದೆ. ಮರ ಮತ್ತೆ ಹಸಿರಾಗಿದೆ. ಈ ಸಂಭ್ರವನ್ನು ವಿಜಯ್ ನಿಶಾಂತ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.[ಬೆಂಗಳೂರು: ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?]

tree

ಕಳೆದ ನವೆಂಬರ್ 2015ರಂದು ಮರದ ಜೀವನ್ಮರಣ ಹೋರಾಟದ ಬಗ್ಗೆ ವರದಿ ಮಾಡಲಾಗಿತ್ತು. ವಾಸ್ತು ದೋಷದ ಕಾರಣಕ್ಕೆ ಸಿಕ್ಕ ನೇರಳೆ ಮರವೀಗ ಆಮ್ಲಜನಕ ನೀಡುತ್ತಿದೆ. ನಿರಂತರ ಹೋರಾಟದ ಮುಖೇನ ಮರ ಉಳಿಸಿಕೊಂಡ ವಿಜಯ್ ನಿಶಾಂತ್ ಅವರ ಸಾಮಾಜಿಕ ಕಾಳಜಿಗೆ ಭೇಷ್ ಎನ್ನಲೇಬೇಕು.[ಬೆಂಗಳೂರು: ಶಂಕರ್ ನಾಗ್ ವೃತ್ತದ ಸುತ್ತ ಇದೆಂಥ ವಾಸನೆ?]

tree

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರೂ ಬಿಬಿಎಂಪಿ ಮತ್ತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಪರಿಹಾರ ಕ್ರಮ ತೆಗೆದುಕೊಂಡಿರಲಿಲ್ಲ. ಖುದ್ದು ವಿಜಯ್ ಮುಂದೆ ನಿಂತು ಮರದ ಜೀವ ಕಾಪಾಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+