PM Modi Bengaluru Visit: ಯಾವುದೇ ರೋಡ್ ಶೋ ಇರಲ್ಲ, ನೇರ ಇಸ್ರೋ ಕಚೇರಿ ಬೇಟಿ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 25: ಭಾರತೀಯ ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಶನಿವಾರ ಪ್ರಧಾನಿ ಮೋದಿ ಸಹ ಬೆಂಗಳೂರಿಗೆ ಆಗಮಿಸಿ ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳನ್ನು ಗೌರವಿಸಿ, ಅಭಿನಂದನೆ ತಿಳಿಸಲಿದ್ದಾರೆ. ಆದರೆ ನಾಳೆ ಆ.26 ರಂದು ಪ್ರಧಾನಿ ಮೋದಿ ಆಗಮನ ಪ್ರಯುಕ್ತ ನಗರದಲ್ಲಿ ಯಾವುದೇ ರೋಡ್ ಶೋ ಇರುವುದಿಲ್ಲ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಭಾರತವು ಚಂದ್ರಯಾನ 3 ಯಶಸ್ವಿ ಖುಷಿಯಲ್ಲಿದೆ. ಇದಕ್ಕೆ ಕಾರಣವಾದ ವಿಜ್ಞಾನಿಗಳನ್ನು ಅಭಿನಂದಿಸಿಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಎಚ್‌ಎಎಲ್‌ನಲ್ಲಿ ಅವರನ್ನು ಸ್ವಾಗತ ಕೋರಲಾಗುವುದು. ಬಳಿಕ ಅವರು ನೇರವಾಗಿ ಪೀಣ್ಯದಲ್ಲಿನ ಇಸ್ರೋ ಕಚೇರಿಗೆ ತೆರಳಲಿದ್ದಾರೆ. ಅಲ್ಲಿ ವಿಜ್ಞಾನಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಇವುಗಳ ಹೊರತು ಬೇರಾವ ಕಾರ್ಯಕ್ರಮ ರೋಡ್ ಶೋ ಇಲ್ಲ ಎಂದು ಅವರು ತಿಳಿಸಿದರು.

ಹಾಗಾದರೆ ಪ್ರಧಾನಿ ಮೋದಿ ಕಾರ್ಯಕ್ರಮದ ಪ್ರತಿ ಕ್ಷಣದ ಮಾಹಿತಿ ನೋಡುವುದಾರೆ, ಬೆಳಗ್ಗೆ 5.55 ಗಂಟೆಗೆ ಪ್ರಧಾನಿ ಬೆಂಗಳೂರಿನ ಎಚ್‌ಎಎಲ್ ಗೆ ಆಗಮಿಸಲಿದ್ದಾರೆ. ನಂತರ 6 ಗಂಟೆಯಿಂದ 6.30ರವರೆಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಬಳಿಕ 6.35 ಗಂಟೆಗೆ ರಸ್ತೆ ಮಾರ್ಗವಾಗಿ ಹೊರಟು ಅವರು ಇಸ್ರೋ ಕಚೇರಿಗೆ ತೆರಳಲಿದ್ದಾರೆ. 7 ಗಂಟೆಗೆ ವಿಜ್ಞಾನಿಗಳನ್ನು ಭೇಟಿ ಮಾಡಲಿರುವ ಪ್ರಧಾನಿ 7-8 ಗಂಟೆವರೆಗೆ ಸಭೆ ನಡೆಸಲಿದ್ದಾರೆ.
ಇದಾದ ಬಳಿಕ ಪ್ರಧಾನಿ ನೇತೃತ್ವದಲ್ಲಿ ಯಾವುದೇ ಕಾರ್ಯಕ್ರಮ ಇರದ ಕಾರಣ, ಇಸ್ರೋ ಕಚೇರಿಯಿಂದ ನೇರವಾಗಿ 8.05ಗಂಟೆಗೆ ಹೊರಟು 8.35ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ 11.35 ಗಂಟೆಗೆ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಮತದಾರ ಚೇತನ ಮಹಾಚೇತನ ಅಭಿಯಾನ
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಅಧಿಕಾರ ವಹಿಸಿಕೊಳ್ಳುವ ಸಮಯ ಹತ್ತಿರ ಬರುತ್ತಿದೆ. ವಿಶ್ವಕ್ಕೆ ಇವರ ನಾಯಕತ್ವ ಬೇಕಿದೆ. ಹೀಗಾಗಿ ಬಿಜೆಪಿಯು ಮತದಾರ ಚೇತನ ಮಹಾಚೇತನ ಅಭಿಯಾನ ನಡೆಸಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿ ಸೇರ್ಪಡೆ, ಜಾಗೃತಿ ಮೂಡಿಸುವುದು, ನಿಧನ ಹೊಂದಿದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವುದು ಸೇರಿದಂತೆ ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲೋಕಸಭಾ ಚುನಾವಣೆ 2024ರಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಬಿಎಲ್ಎ 2ಗಳ ನೇಮಕವನ್ನು ಶೀಘ್ರದಲ್ಲೇ ಮಾಡಲಿದ್ದೇವೆ. ಪಕ್ಷದ ವತಿಯಿಂದ ಪ್ರತಿ ಗ್ರಾಮದಲ್ಲಿಯೂ ಬಿಎಲ್ಎಗಳ ನೇಮಕವಾಗುತ್ತಾರೆ. ರಾಜ್ಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ನಾಯಕತ್ವದಲ್ಲಿ ಸೆಪ್ಟೆಂಬರ್ 1ರಿಂದ ಹತ್ತು ದಿನ ಅಭಿಯಾನ ನಡೆಯಲಿದೆ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.












Click it and Unblock the Notifications