ಮೋದಿ ಸಭೆ: ರಾಜ್ಯ ಬಿಜೆಪಿ ನಾಯಕರಲ್ಲಿ ಒಡಕು
ಬೆಂಗಳೂರು,
ನ. 13: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಗಳೂರು ರ್ಯಾಲಿಗೆ ಇನ್ನು ನಾಲ್ಕೇ ದಿನ ಬಾಕಿ ಇದೆ. ಈ ಮಧ್ಯೆ ಸಮಾವೇಶದಲ್ಲಿ ಮೇಲ್ವಿಚಾರಣೆ ವಿಷಯದಲ್ಲಿ ರಾಜ್ಯ ಬಿಜೆಪಿ ನಾಯಕರಲ್ಲಿ ಭಿನ್ನಸ್ವರ ಕೇಳಿಬಂದಿದೆ. ಈ ಮಧ್ಯೆ, ಸಮಾವೇಶಕ್ಕೆ ಹಣ ಹೊಂದಿಸಲೂ ಸಹ ರಾಜ್ಯ ಬಿಜೆಪಿ ತಿಣುಕಾಡುತ್ತಿದೆ. id="toptextpromo"> id='are-slot-1' class='oiad oi-axt oiadv'>ಇದರ
ಹೊರತಾಗಿ ಬೆಂಗಳೂರು ಪೊಲೀಸರು ಯಾವುದೇ ಲೋಪ ಕಾಣಬರದಂತೆ ಕಟ್ಟೆಚ್ಚರ ವಹಿಸಿದ್ದು, ಇಡೀ ಅರಮನೆಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಇಂಚಿಂಚು ಜಾಲಾಡುತ್ತಿದ್ದಾರೆ. ಅರಮನೆ ಮೈದಾನ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅವಳವಡಿಸಿ, ಕಣ್ಗಾವಲು ಹಾಕಿದ್ದಾರೆ. id='are-slot-2' class='oiad oi-axt oiadv'>ಜತೆಗೆ
ಮೈದಾನದೊಳಗೆ ಎತ್ತರದ ವಾಚ್ ಟವರ್ ಗಳನ್ನು ನಿರ್ಮಿಸಿ, 360 ಡಿಗ್ರಿ ಬಂದೋಬಸ್ತ್ ಪಾಲಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹೆಚ್ಚುವರಿ ಆಯುಕ್ತ ಕಮಲ್ ಪಂತ್ ಭದ್ರತೆಯ ಹೊಣೆ ಹೊತ್ತಿದ್ದಾರೆ.
ಅಶೋಕರಿಂದ ರಾಜ್ಯ ನಾಯಕರ ಕಡೆಗಣನೆ
ಇನ್ನು ಮತ್ತೆ ಮೋದಿ ಸಭೆ ಕುರಿತು ರಾಜ್ಯ ಬಿಜೆಪಿ ನಾಯಕರಲ್ಲಿ ಒಡಕುಂಟಾಗಿರುವ ವಿಷಯಕ್ಕೆ ಬಂದರೆ ಹಿಂದಿನ ಗೃಹ ಸಚಿವ ಆರ್ ಅಶೋಕ್ ಅವರು ಪಕ್ಷದ ವತಿಯಿಂದ ರ್ಯಾಲಿ ಜವಾಬ್ದಾರಿ ಹೊತ್ತಿದ್ದಾರೆ. ಮೊದಲಿಂದಲೂ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿರುವ ಅಶೋಕ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತುಸು ಹೆಚ್ಚೇ ತಮ್ಮ 'ಜವಾಬ್ದಾರಿ' ನಿರ್ವಹಿಸುತ್ತಿದ್ದಾರೆ. ಈ ಭರದಲ್ಲಿ ರಾಜಧಾನಿಯ ಇತರೆ ಮುಖಂಡರು ಮತ್ತು ರಾಜ್ಯದ ನಾಯಕರನ್ನು ಅವರು ಕ್ಯಾರೇ ಅನ್ನುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.

ರವಿ- ಲಿಂಬಾವಳಿಗೆ ಸಿಟ್ಟು
ಮೋದಿ ಕಟ್ಟರ್ ಅಭಿಮಾನಿಗಳೂ/ ಮಾಜಿ ಸಚಿವರೂ ಆದ ಸಿಟಿ ರವಿ ಮತ್ತು ಅರವಿಂದ ಲಿಂಬಾವಳಿ ಅಶೋಕ ಮಹಾರಾಜರ ಪ್ರಭುತ್ವ/ಪ್ರಾಬಲ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಶೋಕ್, ಮೋದಿ ರ್ಯಾಲಿಗೆ ಸಂಬಂಧಪಟ್ಟಂತೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಸಭೆಗೆ ಅಂದಾಜು 15 ಕೋಟಿ ರೂ. ಅಗತ್ಯ
ಇನ್ನು ಸಮಾವೇಶಕ್ಕೆ ಹಣ ಹೊಂದಿಸುವ ವಿಚಾರಕ್ಕೆ ಬಂದರೆ ರ್ಯಾಲಿಗೆ ಅಂದಾಜು 15 ಕೋಟಿ ರೂ. ಅಗತ್ಯ ಬೀಳಲಿದೆ. ಮುಂದಿನ ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳು ಇದಕ್ಕೆ ಹೆಚ್ಚಿನ ಕಾಣಿಕೆ ಸಲ್ಲಿಸಬೇಕು ಎಂಬುದು ಪಕ್ಷದಲ್ಲಿ ತೀರ್ಮಾನವಾಗಿದೆ. ಆದರೆ ಅಂತಹ ಅಭ್ಯರ್ಥಿಗಳು ಹಣ ೊದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ರಾಜ್ಯ ನಾಯಕರಿಗೆ ತಲೆನೋವಾಘಿ ಪರಿಣಮಿಸಿದೆ.

ಪಕ್ಷದ ಗುರಿ ಕನಿಷ್ಠ 5 ಲಕ್ಷ ಮಂದಿ
ಇನ್ನು ಬೆಂಗಳೂರು ಅರಮನೆ ಪ್ರದೇಶದಲ್ಲಿ ಪೊಲೀಸರೇ ಹೇಳುವಂತೆ 2 ಲಕ್ಷ ಮಂದಿ ಭಾಗವಹಿಸಬಹುದಾಗಿದೆ. ಆದರೆ ಪಕ್ಷದ ಗುರಿ ಕನಿಷ್ಠ 5 ಲಕ್ಷ ಮಂದಿ. ಅಷ್ಟು ಮಂದಿಯನ್ನು ಇಲ್ಲಿ ಸೇರಿಸುವುದಾದರೂ ಹೇಗೆ ಎಂದು ನಾಯಕರು ಕೊನೆ ಘಳಿಗೆಯಲ್ಲಿ ಮಂಡೆ ಬಿಸಿಮಾಡಿಕೊಳ್ಳುತ್ತಿದ್ದಾರೆ.

ಅಶೋಕೇ ಎಲ್ಲವನ್ನೂ ನೋಡಿಕೊಳ್ಳಲಿ
ಎಲ್ಲವನ್ನೂ ಏಕಾಂಗಿಯಾಗಿ ನೋಡಿಕೊಳ್ಳುತ್ತಿರುವ ಅಶೋಕ್ ಈ ಹಿಂದೆ ಬೆಂಗಳೂರು ಉಸ್ತುವಾರಿ ಜತೆಗೆ ಸಾರಿಗೆ ಖಾತೆ. ಗೃಹ ಖಾತೆಗಳನ್ನು ಸಂಭಾಳಿಸಿದವರು. ಹಾಗಾಗಿ ಅವರೇ ಹೆಚ್ಚು ಪಾಲನ್ನು ನೀಡಲಿ ಎಂದು ಅನೇಕ ನಾಯಕರು ನೇರವಾಗಿಯೇ ಹೇಳಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.












Click it and Unblock the Notifications