ಪೆರಿಫೆರಲ್ ರಸ್ತೆ ಕಾಮಗಾರಿ, ಅಂತಿಮ ಸಮೀಕ್ಷೆ, ಶೀಘ್ರ ಟೆಂಡರ್

ಬೆಂಗಳೂರು, ಮಾರ್ಚ್ 2: ಪೆರಿಫೆರಲ್ ನಿರ್ಮಾಣ ಯೋಜನೆ ನಿರ್ಮಾಣಕ್ಕಾಗಿ ನಡೆಯುತ್ತಿರುವ ಸಮೀಕ್ಷೆ ಅಂತಿಮ ಹಂತ ತಲುಪಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣ ಕಾಮಗಾರಿಯೂ ಕೂಡ ಒಂದು. ಖಾಸಗಿ ಸಂಸ್ಥೆ ಫಾಲ್ಟನ್ ನಡೆಸುತ್ತಿರುವ ಸರ್ವೇ ಕಾರ್ಯ ಶೀಘ್ರದಲ್ಲೇ ಅಂತ್ಯಗೊಳ್ಳಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿ ನಂತರ ಸರ್ಕಾರ ಕಾಮಗಾರಿಗೆ ಟೆಂಡರ್ ಕರೆಯಲಿದೆ.

ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರ ಕಳೆದ ವಾರ ಟೆಂಡರ್ ಕರೆಯಲು ಸಿದ್ಧತೆ ನಡೆಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಿತ್ತು. ಈಗ ಮಾರ್ಚ್ ಕೊನೆಯ ವಾರದಲ್ಲಿ ಟೆಂಡರ್ ಕರೆಯಲು ಬಿಡಿಎ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

peripheral road tender will be invited with in end of March

ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಸ್ತೆ ಕಾಮಗಾರಿಗೆ ಸಾವಿರ ಕೋಟಿ ರೂ ಮೀಸಲಿಡುತ್ತಿದ್ದಂತೆ ಸಮೀಕ್ಷೆ ಕಾರ್ಯ ಚುರುಕಾಗಿದೆ. ಯಲಹಂಕದ ವೆಂಕಟಾಲ, ಮಾರ್ಗದಲ್ಲಿ ರಸ್ತೆ ನಿರ್ಮಾಣ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ 2007ರಲ್ಲಿ ತಯಾರಿಸಿದ ಮಾರ್ಗದಲ್ಲೇ ರಸ್ತೆ ಕಾಮಗಾರಿ ನಡೆಸಲು ಬಿಡಿಎ ಸಿದ್ಧತೆ ಆರಂಭಿಸಿದೆ.

ಪೆರಿಫೆರಲ್ ವರ್ತುಲ ರಸ್ತೆಗೆ ಅಂದಾಜು 17,061 ಕೋಟಿ ರೂ ವೆಚ್ಚವಾಗಲಿದೆ. ರಸ್ತೆಗೆ 1,810 ಎಕರೆ ಭೂಮಿ ಅವಶ್ಯಕವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊಸಕೋಟೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಇತರೆ ಪ್ರಮುಖ ಸ್ಥಳಗಳಿಗೆ ವರ್ತುಲ ರಸ್ತೆ ಸಂಪರ್ಕ ಕಲ್ಪಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+