ಜೂನ್ 30ರಂದು ಬೆಂಗಳೂರಿನಲ್ಲಿ ಪಾಸ್ಪೋರ್ಟ್ ಮೇಳ
ಬೆಂಗಳೂರು, ಜೂನ್ 7: ನಗರದಲ್ಲಿ ಇದೇ ಜೂನ್ 30ರಂದು ಪಾಸ್ಪೋರ್ಟ್ ಮೇಳ ಹಮ್ಮಿಕೊಳ್ಳಲು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತೀರ್ಮಾನಿಸಿದೆ.
ಬೆಂಗಳೂರಿನ ಲಾಲ್ ಬಾಗ್ ಕಚೇರಿಯಲ್ಲಿ ಪಾಸ್ಪೋರ್ಟ್ ಮೇಳ ಇದೇ ಜೂನ್ 30ರಂದು ನಡೆಯಲಿದೆ. ಸಾಮಾನ್ಯ ಕೆಟಗರಿಯವರಿಗೆ ಮಾತ್ರ ಈ ಮೇಳಕ್ಕೆ ಪ್ರವೇಶವಿದೆ.
ಇದೇ ಜೂನ್ 23ರಂದೇ ಈ ಮೇಳ ನಡೆಯಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮೇಳವನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.

ಈ ಮೇಳಕ್ಕೆ ಅಪಾಯಿಂಟ್ಮೆಂಟ್ ಗಳನ್ನು ಜೂನ್ 27ರ ಸಂಜೆ 4.30ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಭರತ್ ಕುಮಾರ್ ಕುಥಾಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ www.passportindia.gov.in ಗೆ ಭೇಟಿ ನೀಡಿ ಪಾಸ್ಪೋರ್ಟ್ ಆಫೀಸಸ್ ಆಯ್ಕೆಯಡಿ ಬೆಂಗಳೂರನ್ನು ಆಯ್ಕೆ ಮಾಡಿ, ಅದರಲ್ಲಿ ಪಾಸ್ಪೋರ್ಟ್ ಮೇಳ ರಿಕ್ವಾಯರ್ಮೆಂಟ್ಸ್ ಗೆ ಭೇಟಿ ನೀಡಲು ಅವರು ಸೂಚಿಸಿದ್ದಾರೆ.












Click it and Unblock the Notifications