ಶಶಿಕಲಾ, ಜಯಾ ಬೆಂಬಲಿಗರ ಮಾರಾಮಾರಿ; ಪರಿಸ್ಥಿತಿ ಉದ್ವಿಗ್ನ
ಶಶಿಕಲಾ ಬೆಂಗಳೂರಿಗೆ ಬರುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಶಶಿಕಲಾ ನಟರಾಜನ್ ವಿರುದ್ಧ ಆಕ್ರೋಶಗೊಂಡಿರುವ ಜಯಲಲಿತಾ ಅಭಿಮಾನಿಗಳು ಚಿನ್ನಮ್ಮನ ಅಭಿಮಾನಿಗಳ ಕಾರುಗಳ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 15: ಶಶಿಕಲಾ ಬೆಂಗಳೂರಿಗೆ ಬರುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಶಶಿಕಲಾ ನಟರಾಜನ್ ವಿರುದ್ಧ ಆಕ್ರೋಶಗೊಂಡಿರುವ ಜಯಲಲಿತಾ ಅಭಿಮಾನಿಗಳು ಚಿನ್ನಮ್ಮನ ಅಭಿಮಾನಿಗಳ ಕಾರುಗಳ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ. ಇದರಿಂದ ಪರಪ್ಪನ ಅಗ್ರಹಾರದ ಸುತ್ತಾ ಪರಿಸ್ಥಿತಿ ಕಾವೇರಿದೆ.
5 ಸ್ಕಾರ್ಪಿಯೋ ಮತ್ತು ಒಂದು ಇನ್ನೊವಾ ಕಾರು ಕಲ್ಲುತೂರಾಟದಿಂದ ಜಖಂಗೊಂಡಿದೆ. ಶಶಿಕಲಾ ಜಯಲಲಿತಾರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಜಯಾ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮೊರೆ ಹೋಗಿದ್ದಾರೆ.[LIVE: ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ನಟರಾಜನ್ ಆಗಮನ]

ಕೈಯಿಂದಲೇ ಗುದ್ದಿ ವ್ಯಕ್ತಿಯೊಬ್ಬ ಕಾರಿನ ಗ್ಲಾಸುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಪರಪ್ಪನ ಅಗ್ರಹಾರದ ಸುತ್ತಾ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸಮರೋಪಾದಿಯಲ್ಲಿ ಪೊಲೀಸರು ರಕ್ಷಣಾ ಕೆಲಸದಲ್ಲಿ ನಿರತರಾಗಿದ್ದಾರೆ.












Click it and Unblock the Notifications