ಕೆಜೆಪಿಯ ಪದ್ಮನಾಭ ಪ್ರಸನ್ನ ಮುಖಕ್ಕೆ ಮಸಿ!
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರ ಮೇಲೆ ಶುಕ್ರವಾರ ಹಲ್ಲೆ ಯತ್ನ ನಡೆದಿದೆ. ಪ್ರಸನ್ನ ಅವರ ಮುಖಕ್ಕೆ ಕಿಡಿಗೇಡಿಗಳು ಆಯಿಲ್ ಹಾಕಿದ್ದಾರೆ.
ಶುಕ್ರವಾರ ಮಧ್ಯಾಹ್ನ ಪ್ರಸನ್ನ ಅವರು ಬೆಂಗಳೂರು ಪ್ರೆಸ್ ಕ್ಲಬ್ಬಿಗೆ ಆಗಮಿಸುತ್ತಿದ್ದ ವೇಳೆ ಕಿಡಿಗೇಡಿಗಳು ವಾಹನದ ಇಂಜಿನ್ ಆಯಿಲ್ ತಂದು ಪದ್ಮನಾಭ ಅವರ ಮುಖಕ್ಕೆ ಎರಚಿದರು. ಏಕಾಏಕಿ ದಾಳಿಯಿಂದ ಗಾಬರಿಗೊಂಡ ಪ್ರಸನ್ನ ಅವರಿಗೆ ಏನು ಮಾಡಲು ತೋಚದೆ ಹಾಗೆ ನಿಂತಿದ್ದರು.

ನಂತರ ಘಟನೆ ಬಗ್ಗೆ ಮಾತನಾಡಿದ ಪ್ರಸನ್ನ ಅವರು ಇದು ಯಡಿಯೂರಪ್ಪ ಬೆಂಬಲಿಗರ ಕೃತ್ಯ. ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಅವರ ನಡುವಿನ ಸಂಬಂಧದ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂಬುದನ್ನು ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ. ಧೈರ್ಯವಿದ್ದರೆ ಎದುರಿಗೆ ಬಂದು ದಾಳಿ ಮಾಡಿ ಈ ರೀತಿ ಹಿಂದಿನಿಂದ ಚೂರಿ ಹಾಕಬೇಡಿ ಎಂದು ಪ್ರಸನ್ನ ಗುಡುಗಿದರು.












Click it and Unblock the Notifications