ಕರಾವಳಿ, ಉತ್ತರ ಕರ್ನಾಟಕದ ಕಡೆಗಣನೆ: ಬಿಜೆಪಿ ಆಕ್ರೋಶ
ಬೆಂಗಳೂರು, ಜುಲೈ 05: ಕುಮಾರಸ್ವಾಮಿ ಅವರು 2018ರ ಬಜೆಟ್ ಘೋಷಣೆ ಮುಕ್ತಾಯಗೊಳಿಸುತ್ತಿದ್ದಂತೆ ವಿಪಕ್ಷ ಸದನದಲ್ಲಿ ಗದ್ದಲ ಎಬ್ಬಿಸಿದೆ.
ಕರಾವಳಿ ಜಿಲ್ಲೆ, ಉತ್ತರ ಕರ್ನಾಟಕಗಳ ಹೆಸರನ್ನೇ ಬಜೆಟ್‌ನಲ್ಲಿ ಹೇಳಲಿಲ್ಲ, ಕೇವಲ ತಮ್ಮ ಕ್ಷೇತ್ರಗಳಿಗೆ ಮಾತ್ರವೇ ಒತ್ತು ನೀಡಲಾಗಿದೆ ಎಂದು ವಿಪಕ್ಷದ ಸದಸ್ಯರು ಒಕ್ಕೂರಲ ಆರೋಪ ಮಾಡಿದರು.
ಹಾಸನ, ರಾಮನಗರ, ಮಂಡ್ಯ, ಸೇರಿದಂತೆ ಜೆಡಿಎಸ್ ಶಾಸಕರು ಇದ್ದಕಡೆಗೆ ಮಾತ್ರ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನಿಡಲಾಗಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು.

ರಾಜಕೀಯ ಪ್ರೇರಿತವಾದ ಬಜೆಟ್ ಇದಾಗಿದ್ದು, ಈ ಬಜೆಟ್‌ಗೆ ಜನಪರವಾದ ನಿಲವಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಹಲವರು ಬಜೆಟ್ ಪ್ರತಿಯನ್ನು ಎತ್ತಿ ತೋರಿಸಿ, ಪ್ಲಕಾರ್ಡ್ಗಳನ್ನು ಪ್ರದರ್ಶಿಸಿ ಬಜೆಟ್ ವಿರುದ್ಧ ಘೋಷಣೆಗಳನ್ನು ಕೂಗಿದರು.












Click it and Unblock the Notifications