Benglauru Auto Fare: ಆಟೋರಿಕ್ಷಾ ಪ್ರಯಾಣ ದರ ಏರಿಕೆಗೆ ಚಾಲಕ ಸಂಘಟನೆಗಳಿಂದಲೇ ವಿರೋಧ
ಬೆಂಗಳೂರು, ಮಾರ್ಚ್ 13: ರಾಜಧಾನಿಯಲ್ಲಿ ಜನರು ಅವಲಂಬಿಸಿದ್ದ ಮೆಟ್ರೋ ಸಾರಿಗೆ, ಬಿಎಂಟಿಸಿ ನಗರ ಸಾರಿಗೆ ಪ್ರಯಾಣ ದುಬಾರಿಯಾಗಿದೆ. ಇದರ ಬೆನ್ನಲ್ಲೆ ನಗರದಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲು ಒತ್ತಡ ಹೆಚ್ಚಾಗಿತ್ತು. ಕನಿಷ್ಠ 5-10 ರೂಪಾಯಿ ಹೆಚ್ಚಳಕ್ಕೆ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಇದೀಗ ನಿರ್ಧಾರ ಅಂತಿಮಗೊಳ್ಳುವ ಮುನ್ನವೇ ಚಾಲಕ ಸಂಘಟನೆಗಳಿಂದ ಆಟೋ ದರ ಏರಿಕೆಗೆ ಪರ ಮತ್ತು ವಿರೋಧ ಕೇಳಿ ಬರುತ್ತಿದೆ.
ರಾಜ್ಯ ಸರ್ಕಾರ ಕರ್ನಾಟಕ ಸಾರಿಗೆ ಬಸ್, ಬಿಎಂಟಿಸಿ ಸೇರಿ ಎಲ್ಲ ಬಸ್‌ಗಳ ದರ ಏರಿಕೆ ಮಾಡಿತು. ಅದರ ಬಳಿಕ ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ ದರ ಏರಿಕೆಗೆ ಅನುಮತಿ ನೀಡಿತು. ಇದೀಗ ಆಟೋ ದರ ಏರಿಕೆ ಮಾಡಲು ಹಲವರು ಸಜ್ಜಾಗಿದ್ದಾರೆ. ಇದಕ್ಕೆ ಕೆಲ ಸಂಘಟನೆಗಳಿಂದ ಪರವಾಗಿ ಅಭಿಪ್ರಾಯ ವ್ಯಕ್ತವಾದರೆ, ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ರಾಪಿಡೋ ಬೈಕ್, ಬಹುರಾಷ್ಟ್ರೀಯ ಸಂಸ್ಥೆಗಳ ಸಂಚಾರಿ ಸೇವೆಗಳು ಆಟೋ ಚಾಲಕರ ಜೀವನಕ್ಕೆ ಮಾರಕವಾಗಿ ಪರಿಣಮಿಸಿವೆ. ಇಂತಹ ಸಮಯದ್ಲಲಿ ದರ ಹೆಚ್ಚಳ ಬೇಡ. ಆಟೋಗಳಿಗೆ ಹೆಚ್ಚುವರಿ ಪರ್ಮಿಟ್ ನೀಡುವುದು ಸೂಕ್ತವಲ್ಲ ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಮುಂದಿನ ವಾರ ದರ ಏರಿಕೆಯ ಅಂತಿಮ ನಿರ್ಧಾರ
ಇತ್ತ ಕೆಲವು ಆಟೋ ಸಂಘಟನೆಗಳು ಕಿಲೋಮೀಟರ್ ಗೆ 5 ರಿಂದ 10 ರುಪಾಯಿವರೆಗೆ ದರ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದವು. ಡಿಸಿಪಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಚಾಲಕ ಸಂಘಟನೆಗಳ ಸಭೆ ನಡೆಸಲಾಗಿತ್ತು. ಸಾಧಕ ಬಾಧಕಗಳನ್ನು ಪರಿಶೀಲಿಸಿ ಇನ್ನೊಂದು ವಾರದಲ್ಲಿ ಸೂಕ್ತ ತೀರ್ಮಾನ ಹೊರ ಬೀಳುವ ನಿರೀಕ್ಷೆಯಿದೆ.
ದರಿ ಪರಿಷ್ಕರಣೆ: 16 ಸಂಘಟನೆಗಳ ಅಭಿಪ್ರಾಯ ವ್ಯಕ್ತ
ಇಂದು ಪೂರ್ವ ಸಂಚಾರಿ ವಿಭಾಗದ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಗಾಗಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಗರದ ಎಲ್ಲಾ ಚಾಲಕ ಸಂಘಟನೆಗಳು ಭಾಗಿಯಾಗಿದ್ದು, 17 ಸಂಘಟನೆಗಳ ಪೈಕಿ 16 ಸಂಘಟನೆಗಳು ತಮ್ಮ ಅಭಿಪ್ರಾಯ ತಿಳಿಸಿವೆ.
ಈ ವೇಳೆ ಮಾತನಾಡಿದ, ಡಿಸಿಪಿ ಸಾಹಿಲ್ ಬಾಗ್ಲಾ ಅವರು, ಒಂದು ವಾರ ಸಮಯಾವಕಾಶ ನೀಡಿದ್ದೇವೆ. ಶಾಂತಿನಗರ ಆರ್.ಟಿ.ಓಗೆ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಅರ್ಜಿ ಸ್ವೀಕೃತಿಯಾದ ಬಳಿಕ ಬೆಂಗಳೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಆಟೋ ಚಾಲಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಿ ನಂತರ ನಿರ್ಧರಿಸಲಾಗುವುದು ಎಂದು ಹೇಳಿದರು.
ಆಟೋ ಕನಿಷ್ಠ ದರ 40 ರೂ. ಹೆಚ್ಚಳಕ್ಕೆ ಪಟ್ಟು
ಎರಡು ಕಿಲೋ ಮೀಟರ್‌ಗೆ 10 ರೂಪಾಯಿ ಏರಿಕೆ ಮಾಡುವಂತೆ ಕೆಲವು ಸಂಘಟನೆಗಳು ಮನವಿ ಮಾಡಿವೆ. ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಲೋ ಮೀಟರ್ ಗೆ 30 ರೂಪಾಯಿ ಇದೆ. ಕನಿಷ್ಠ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಪಟ್ಟು ಹಿಡಿದಿವೆ. ದರ ಏರಿಕೆಗೆ ವಿರೋಧವೂ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಎಲ್ಲಾ ಅಭಿಪ್ರಾಯಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಪಿಡೋ ಬೈಕ್ ನಿಂದಾಗಿ ಆಟೋ ಚಾಲಕರು ಬದುಕು ತೀವ್ರ ಸಂಕಷ್ಟದಲ್ಲಿದೆ. ದರ ಏರಿಕೆ ಮಾಡಿದರೆ ಆಟೋ ಹತ್ತುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಆದ್ದರಿಂದ ದರ ಏರಿಕೆಯೂ ಬೇಡ. ಹೊಸ ಆಟೋಗಳಿಗೆ ಪರವಾನಗಿ ನೀಡುವುದೂ ಬೇಡ. ಸಧ್ಯಕ್ಕೆ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕಿದೆ. ಈ ಕುರಿತು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮನವಿ ಮಾಡಿದರು.
ಡಿಸಿ ಜೊತೆಗೆ ಅಂತಿಮ ಸಭೆ? ಜನರ ಜೇಬಿಗೆ ಕತ್ತರಿ ಸಾಧ್ಯತೆ
ರ್ಯಾಪಿಡೋ ಹಾಗೂ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯಿಂದಾಗಿ ಈಗಾಗಲೇ ಆಟೋ ಚಾಲಕರು ಪ್ರಯಾಣಿಕರು ಇಲ್ಲದೇ ಹೈರಾಣಾಗಿದ್ದಾರೆ. ಶಕ್ತಿ ಯೋಜನೆ ಜಾರಿ ಆಗುತ್ತಿದ್ದಂತೆ ಒಂದಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಆಟೋ ಸಂಘಟನೆಗಳು ಇಟ್ಟಿದ್ದವು. ಆಗ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ.
ಇತ್ತೀಚೆಗೆ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿದೆ. ದೂರದ ಮೆಟ್ರೋ ಪ್ರದೇಶಗಳಿಗೆ ಕನಿಷ್ಠ 60-90 ರೂಪಾಯಿವರೆಗೆ ದರ ನಿಗಿದ ಮಾಡಲಾಗಿದೆ. ಇತರ ಅಗತ್ಯ ವಸ್ತುಗಳ ದರವು ಹೆಚ್ಚಾಗಿದೆ. ಈ ಮಧ್ಯೆ ಬಿಎಂಟಿಸಿ, ಸೇರಿದಂತೆ ನಾಲ್ಕು ನಿಗಮಗಳ ಬಸ್ ಟಿಕೆಟ್ ಬೆಲೆ ಏರಿಕೆ ಆಗಿದೆ. ಇದರಿಂದ ಜನರಿಗೆ ಆರ್ಥಿಕ ಹೊರೆ ಉಂಟಾಗಿದೆ. ಈ ಮಧ್ಯೆ ಆಟೋಗೆ ಫಿಲ್ ಮಾಡುವ ಅನಿಲ, ಇಂಧನ ದರವು ಗಗನಕ್ಕೇರಿದೆ. ಇದೆಲ್ಲ ಕಾರಣದಿಂದ ಆಟೋ ಚಾಲಕರು ದರ ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದಾರೆ.
ವಿವಿಧ ಹಂತಗಳಲ್ಲಿ ಮಾತುಕತೆ ಆಗಿದೆ. ಶೀಘ್ರವೇ ಕೊನೆಯ ಸುತ್ತಿನ ಸಭೆ ನಡೆಸಲಾಗುತ್ತದೆ. ಆಟೋ ಚಾಲಕರ ಸಂಘಟನೆಗಳು ತಮಗಾಗುವ ಸಂಕಷ್ಟ ಕುರಿತು ಮುಖಂಡರ ಜೊತೆಗೆ ತಿಳಿಸಲಿದ್ದಾರೆ. ಇದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದರ ಏರಿಕೆ ಮಾಡಬೇಕಾ?, ಸದ್ಯಕ್ಕೆ ಬೇಡವಾ? ಎಂದು ತಿರ್ಮಾನವಾಗಲಿದೆ.
ಒಂದು ವೇಳೆ ದರ ಏರಿಕೆ ಆದಲ್ಲಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಮೆಟ್ರೋ ದರ ಏರಿಕೆಯಿಂದ ಸ್ವಲ್ಪ ಪ್ರಮಾಣದಲ್ಲಿ ಬಾಡಿಗೆ ಆಟೋ, ಓಲಾ, ಊಬರ್, ಕ್ಯಾಬ್‌ಗಳಲ್ಲಿ ಓಡಾಡುತ್ತಿರುವವರಿಗೆ ಮತ್ತೆ ಹೊರೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿದೆ. ನಿರಂತರ ಬೆಲೆ ಏರಿಕೆ ಪರಿಣಾಮವು ನೇರವಾಗಿ ಸಾರ್ವಜನಿಕರ ಮೇಲೆ ಬೀಳುತ್ತಿದೆ ಎಂಬುದು ಜನರ ಅಳಲಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications