ಬೆಂಗಳೂರಲ್ಲಿ ಒಂದು ವಾರ ಯಾವ್ಯಾವ ಬಡಾವಣೆಯಲ್ಲಿ ಕರೆಂಟ್ ಇರಲ್ಲ!
ಬೆಂಗಳೂರು, ಏಪ್ರಿಲ್ 26: ಬೆಸ್ಕಾಂ ವ್ಯಾಪ್ತಿಯ ಇ.ಡಿ.ಸಿ.,220/66/11 ಕೆವಿ ಸ್ಟೇಷನ್ ನಲ್ಲಿ ತುರ್ತು ಕೆಲಸಗಳನ್ನು ನಿರ್ವಹಿಸಬೇಕಾಗಿರುವುದರಿಂದ 66/11 ಕೆ.ವಿ. ಬಿ ಸ್ಟೇಷನ್ ಮತ್ತು ಆಸ್ಟಿನ್ ಟೌನ್ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಏ.26ರಿಂದ ಮೇ 2ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಳಗ್ಗೆ 10ರಿಂದ ಸಂಜೆ 7ರವರೆಗೂ ವಿದ್ಯುತ್ ಅಡಚಣೆ ಉಂಟಾಗಲಿದೆ. ಕಾಸ್ಟಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಅಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ರಿಚ್ ಮಂಡ್ ರಸ್ತೆ, ಕಾನ್ವೆಂಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಲಾವಲೆ ರಸ್ತೆ, ವಿಟ್ಠಲ್ ಮಲ್ಯ ರಸ್ತೆ, ರಿಚ್ ಮಂಡ್ ರಸ್ತೆ, ಕ್ರಾಕ್ ಪಾರ್ಕ್ ಲೇಔಟ್, ಎಂಜಿ ರಸ್ತೆ, ಕಮಿಷನರೇಟ್ ರಸ್ತೆ, ಗರುಡಾ ಮಾಲ್, ಮ್ಯೂಸಿಯಂ ರಸ್ತೆಯಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ಮದ್ರಾಸ್ ಬ್ಯಾಂಕ್ ರಸ್ತೆ, ಒಎಂ ರಸ್ತೆ, ಹಲಸೂರು, ಗೌತಮಪುರ, ಸೇಂಟ್ ಮಾರ್ಕ್ಸ್ ರಸ್ತೆ, ಅಶೋಕನಗರ, ಕಾರ್ಪೊರೇಷನ್ ಕಚೇರಿ, ಇನ್ ಕಮ್ ಟ್ಯಾಕ್ಸ್ ಕಚೇರಿ, ಕಾಮರಾಜ್ ರಸ್ತೆ, ಮೆಡಿನೋವಾ, ಕಮರ್ಷಿಯಲ್ ಸ್ಟ್ರೀಟ್, ಸಂಗಮ್ ರಸ್ತೆ, ಎಸ್ ಸಿ ಗಾರ್ಡನ್, ಹಳೇ ಮಾರ್ಕೆಟ್, ನಳರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕೋದಂಡರಾಮ ಲೇಔಟ್, ಲೇಡಿ ಕರ್ಜನ್ ರಸ್ತೆ, ಸಫೀನಾ ಪ್ಲಾಜಾ, ಕೃಷ್ಣಯ್ಯ ಚೆಟ್ಟಿ, ಕಬ್ಬನ್ ರಸ್ತೆ, ಯೂನಿಯನ್ ಸ್ಟ್ರೀಟ್, ಎಂಕೆ ಸ್ಟ್ರೀಟ್, ಒಪಿಎಚ್ ರಸ್ತೆ, ಬ್ಲ್ಯೂ ಕ್ರಾಸ್ ಚೇಂಬರ್, ಜೆಮ್ ಪ್ಲಾಜಾ, ಅಶರ್ ಖಾನ್ ಸ್ಟ್ರೀಟ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.












Click it and Unblock the Notifications