ಮಹಿಳೆಯ ಜೀವವನ್ನೇ ಕಸಿದ ಮಿಸ್ಡ್‌ಕಾಲ್, ಏನಿದು ಘಟನೆ?

ಬೆಂಗಳೂರು, ಸೆಪ್ಟೆಂಬರ್ 25: ಒಂದುಮಿಸ್ಡ್‌ಕಾಲ್ ಮಹಿಳೆಯ ಜೀವವನ್ನೇ ಕಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬುಲೆಟ್ ಶೋರೂಂ ಮೆಕ್ಯಾನಿಕ್ ಅಜಯ್ ಕೊಲೆ ಪ್ರಕರಣ ಸಂಬಂಧ ಆತನ ಪ್ರೇಯಸಿಯ ಸೋದರ ಸೇರಿದಂತೆ ಐವರನ್ನು ಮೈಕೋ ಲೇಔಟ್ ಠಾಣೆ ಪೊಲೀಸ್ ಬಂಧಿಸಿದ್ದಾರೆ.

ಸಿಕೆ ಪಾಳ್ಯದ ಕುಮಾರ್, ಆತನ ಸ್ನೇಹಿತರಾದ ಸಂಜು, ಮುನಿಕೃಷ್ಣ, ಮುತ್ತು ಹಾಗೂ ಚೇತನ್ ಬಂಧಿತರು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆನಂದ್ ಸೇರಿ ಇತರೆ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಅಜಯ್‌ನನ್ನು ಕುಮಾರ್ ಹಾಗೂ ಆನಂದ್‌ ತಂಡ ಅಪಹರಿಸಿ ಕೊಲೆ ಮಾಡಿತ್ತು.

One Missed Call Killed a Woman

ಮಿಸ್ಡ್‌ಕಾಲ್ ತಂಡ ಆಪತ್ತು:ಬನ್ನೇರುಘಟ್ಟ ರಸ್ತೆಯ ಸಮೀಪ ಬುಲೆಟ್ ಶೋ ರೋನಲ್ಲಿ ಕೆಲಸ ಮಾಡುತ್ತಿದ್ದ ಅಜಯ್, ತನ್ನ ಕುಟುಂಬದ ಜೊತೆ ಕಲ್ಕೆರೆಯಲ್ಲಿ ನೆಲೆಸಿದ್ದ.

ಆರು ತಿಂಗಳ ಹಿಂದೆ ಬೇರೆ ಯಾರಿಗೋ ಕರೆ ಮಾಡಲು ಹೋಗಿ ತಪ್ಪಿ ಚಲನಚಿತ್ರ ಕಾರ್ಮಿಕ ಆನಂದ್ ಪತ್ನಿ ರೂಪಾಳಿಗೆ ಮಿಸ್‌ಕಾಲ್ ಕೊಟ್ಟಿದ್ದ. ಹೀಗೆ ಪರಿಚಿತರಾದ ಅವರ ಮಧ್ಯೆ ಕ್ರಮೇಣ ಆತ್ಮೀಯತೆ ಮೂಡಿತ್ತು, ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಖ್ಯಾತ ನಿರ್ದೇಶಕ ಶವಮಣಿ ತಂಡದಲ್ಲಿ ಕೆಲಸ ಮಾಡುತ್ತಿದ್ದ ಆನಂದ್, ಇತ್ತೀಚೆಗೆ ಚಿತ್ರೀಕರಣ ಸಂಬಂಧ ರಾಜ್ಯ-ಹೊರ ರಾಜ್ಯಗಳಿಗೆ ತೆರಳಿದ್ದ. ಕೆಲವು ದಿನಗಳ ಹಿಂದೆ ಸ್ನೇಹಿತರ ಮೂಲಕ ಆನಂದ್ ಗೆ ಪತ್ನಿ ಅಕ್ರಮ ಸಂಬಂಧ ವಿಷಯ ಗೊತ್ತಾಗಿದೆ.

ಕೆರಳಿದ ಆತ, ಅಜಯ್ ಕೊಲೆಗೆ ನಿರ್ಧರಿಸಿದ್ದ, ಆಗ ಆತನಿಗೆ ಭಾಮೈದ ಹಾಗೂ ಇತರೆ ಆರೋಪಿಗಳು ಸಹಕರಿಸಿದ್ದರು. ಸೆ.16ರಂದು ಅಜಯ್ ರೂಪಾಳ ಮೂಲಕ ಕರೆ ಮಾಡಿಸಿ ಮಾತುಕತೆ ನೆಪದಲ್ಲಿ ಜಿಗಣಿಗೆ ಕರೆಸಿ ಅಪಹರಿಸಿ ಕೊಲೆಗೈದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+