ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕ
ಬೆಂಗಳೂರು, ಡಿಸೆಂಬರ್ 15 : ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ನಾಟಕೋತ್ಸವ ಕಾರ್ಯಕ್ರಮವನ್ನು ಶುಕ್ರವಾರ(ಡಿ.15 ) ರಿಂದ ಡಿಸೆಂಬರ್ 18 ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಎನ್ ಎಸ್ಡಿಯಲ್ಲಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದೆ.
ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕವು ಡಿ.15 ರಿಂದ 18 ರವರೆಗೂ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. 2017-18 ನೇ ಸಾಲಿನ ನಾಟಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಮಾಲತೇಶ ಬಡಿಗೇರ ಅವರು ನಿರ್ದೇಶಿಸಲಿದ್ದಾರೆ, ಸಿದ್ದರಾಮ ಕೇಸಾಪುರ ಅವರು ಸಂಗೀತ ನೀಡಲಿದ್ದಾರೆ.

ಪಾಂಡಿಚೇರಿ, ತಮಿಳುನಾಡಿನಿಂದ 6 ವಿದ್ಯಾರ್ಥಿಗಳು, ಆಂಧ್ರ ಪ್ರದೇಶ, ತಮಿಳುನಾಡಿನಿಂದ 5 ವಿದ್ಯಾರ್ಥಿಗಳು, ಕೇರಳದಿಂದ ಇಬ್ಬರು ಹಾಗೂ ಕರ್ನಾಟಕಾದ್ಯಂತ ವಿವಿಧ ಭಾಗಗಳ ವಿದ್ಯಾರ್ಥಿಗಳು ಒಟ್ಟು 20 ಮಂದಿ ನಾಟಕ ಪ್ರದರ್ಶಿಸಲಿದ್ದಾರೆ .












Click it and Unblock the Notifications