Get Updates
Get notified of breaking news, exclusive insights, and must-see stories!

ಅಂತರ್ಜಾಲ ಬಳಸಿರಿ, ಪೊಲೀಸರಿಗೆ ದೂರು ದಾಖಲಿಸಿರಿ

ಬೆಂಗಳೂರು, ನ. 15 : ಬೆಂಗಳೂರಿನಲ್ಲಿ ಪೊಲೀಸರಿಗೆ ಜನರು ಸುಲಭವಾಗಿ ದೂರು ನೀಡಲು ಸಹಾಯಕವಾಗುವ ಬ್ಯಾಂಕ್‌ ಎಟಿಎಂ ಮಾದರಿಯ ಮೊದಲ 'ಎಫ್ಐಆರ್‌ ನೊಂದಣಿ ಕೇಂದ್ರ'ವನ್ನು ಆರಂಭಿಸಲಾಗಿದೆ. ಮೂರು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗಿದ್ದು, ಜನರ ಪ್ರತಿಕ್ರಿಯೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ಮಂತ್ರಿಮಾಲ್‌ನಲ್ಲಿ ಬೆಂಗಳೂರು ನಗರ ಪೊಲೀಸರು ಹಾಗೂ ಸಿಸ್ಕೊ ಸಂಸ್ಥೆ ಸಹಯೋಗದಲ್ಲಿ ಸ್ಥಾಪಿಸಿರುವ 'ಎಫ್ಐಆರ್‌ ನೊಂದಣಿ ಕೇಂದ್ರ'ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟಿಸಿದ್ದಾರೆ. ಇದು ದೇಶದಲ್ಲೇ ಮೊದಲ ಕೇಂದ್ರವಾಗಿದ್ದು, ಆರಂಭವಾದ ಮೊದಲ ದಿನವೇ ವಾಹನ ಕಳ್ಳತನದ ಕುರಿತು ಕೇಂದ್ರದಲ್ಲಿ ಪ್ರಕರಣ ದಾಖಲಾಗಿವೆ.

ಪೊಲೀಸ್‌ ಠಾಣೆಗಳಿಗೆ ದೂರು ನೀಡಲು ಬರುವ ನಾಗರಿಕರನ್ನು ಗೌರವಯುತವಾಗಿ ಠಾಣಾಧಿಕಾರಿಗಳು ನಡೆಸಿಕೊಳ್ಳಬೇಕು. ಜನರಿಂದ ಸಲ್ಲಿಕೆಯಾಗುವ ದೂರುಗಳನ್ನು ಕಡ್ಡಾಯವಾಗಿ ಅಧಿಕಾರಿಗಳು ದಾಖಲು ಮಾಡಿಕೊಂಡು ತನಿಖೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಎಫ್ಐಆರ್‌ ನೊಂದಣಿ ಯೋಜನೆಯಿಂದ ಜನರಿಗೆ ಸಾಕಷ್ಟು ಅನುಕೂಲತೆಗಳಿದ್ದು, ಠಾಣೆಗಳಿಗೆ ದೂರು ಕೊಡಲು ಅಲೆಯುವುದು ತಪ್ಪಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕೇಂದ್ರದ ಮೂಲಕ ಭ್ರಷ್ಟ ಅಧಿಕಾರಿಗಳ ವಿರುದ್ಧ ಜನರು ದೂರು ದಾಖಲಿಸಬಹುದು. ಈ ಕೇಂದ್ರದಲ್ಲಿ 24 ತಾಸು ಕಾರ್ಯನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸಿಎಂ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.

ಆನ್ ಲೈನ್‌ ಸೇವೆಗೆ ಚಾಲನೆ : ಕಳುವಾಗಿರುವ ವಸ್ತುಗಳ ಬಗ್ಗೆ ಸಾರ್ವಜನಿಕರು ಆನ್‌ಲೈನ್‌ ಮೂಲಕವೇ ದೂರು ಸಲ್ಲಿಸಿ, ಸ್ವೀಕೃತಿ ಪತ್ರ ಪಡೆಯುವ ವ್ಯವಸ್ಥೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಜನರು ಸಿಮ್‌ಕಾರ್ಡ್, ಚಾಲನಾ ಪರವಾನಗಿ, ಶೈಕ್ಷಣಿಕ ದಾಖಲಾತಿಗಳು, ಪಾಸ್‌ಪೋರ್ಟ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳೆದುಕೊಂಡಾಗ, ಅವುಗಳ ನಕಲು ಪ್ರತಿ ಪಡೆಯಲು ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಸ್ವೀಕೃತಿ ಪಡೆಯಬೇಕಾಗುತ್ತದೆ.

Police

ಆದರೆ, ಇಂಥ ದೂರುಗಳನ್ನು ದಾಖಲಿಸಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ ವಹಿಸುತ್ತಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಆನ್‌ಲೈನ್ ಸ್ವೀಕೃತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಸೇವೆ ಪಡೆಯಲು ಬಯಸುವವರು http://www.bcp.gov.in/home.aspx ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ 'Lost Report' ಎಂಬ ಆಯ್ಕೆಯನ್ನು ಒತ್ತಿದಾಗ ವಿವರಗಳು ಲಭ್ಯವಾಗುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+