ಆರು ಬೋಗಿಗಳ ನಮ್ಮ ಮೆಟ್ರೋದಲ್ಲಿ ಕೊನೆಗೂ ಬಂತು ಡಿಸ್‌ಪ್ಲೇ ಬೋರ್ಡ್
ಬೆಂಗಳೂರು, ಏ.19: ಪ್ರಸ್ತುತ ಹಸಿರು ಹಾಗೂ ನೇರಳೆ ಮಾರ್ಗ ಸೇರಿ 6 ಬೋಗಿಗಳಿರುವ 10 ನಮ್ಮ ಮೆಟ್ರೋ ರೈಲುಗಳು ಸಂಚರಿಸುತ್ತಿವೆ.
ನೇರಳೆ ಮಾರ್ಗದಲ್ಲಿ 9, ಹಸಿರು ಮಾರ್ಗದಲ್ಲಿ 1 ರೈಲು ಮಾತ್ರ ಸಂಚಿಸುತ್ತಿದೆ. ಆದರೆ ಈ ರೈಲಿನೊಳಗೆ ಡಿಸ್‌ಪ್ಲೇ ಬೋರ್ಡ್ ಅಳವಡಿಸದ ಕಾರಣ ಮೆಟ್ರೋ ನಿಲ್ದಾಣಗಳಾಗಲಿ ಇನ್ಯಾವುದೇ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗುತ್ತಿರಲಿಲ್ಲ.
ಹೀಗಾಗಿ ಪ್ರಯಾಣಿಕರು ಮೆಟ್ರೋ ನಿಗಮಕ್ಕೆ ದೂರು ನೀಡಿದ್ದರು. ಹಿಂದಿನ ಬೋಗಿಗಳಲ್ಲಿ ಹತ್ತಿದರೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ, ದಿನನಿತ್ಯ ಓಡಾಡುವವರಿಗೆ ಸ್ವಲ್ಪ ಜ್ಞಾನವಿರುತ್ತದೆ ಆದರೆ ಮೊದಲ ಬಾರಿಗೆ ಮೆಟ್ರೋದಲ್ಲಿ ಬಂದವರು ಅಥವಾ ಆ ಸ್ಥಳದ ಬಗ್ಗೆ ಮಾಹಿತಿ ಇಲ್ಲದಿರುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು. ಹಾಗಾಗಿ ಇದೀಗ ಎಲ್ಲಾ ಆರು ಬೋಗಿಯ ಮೆಟ್ರೋದಲ್ಲಿ ಡಿಸ್‌ಪ್ಲೇ ಬೋರ್ಡ್ ಅಳವಡಿಸಲಾಗಿದೆ.

ಬರುವ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಇನ್ನೂ 40 ಆರು ಬೋಗಿಯ ರೈಲುಗಳು ಸೇರ್ಪಡೆಗೊಳ್ಳಲಿವೆ. ಅಷ್ಟೇ ಅಲ್ಲದೆ ಆರು ಬೋಗಿಯ ಮೆಟ್ರೋ ರೈಲಿನಲ್ಲಿ ಮೊದಲ ಒಂದು ಬೋಗಿ ಮಹಿಳೆಯರಿಗೆ ಮೀಸಲಾಗಿದ್ದರೂ ಯಾರಿಗೂ ಸರಿಯಾದ ಮಾಹಿತಿ ಇಲ್ಲ ಪುರುಷರು ಕೂಡ ಅಲ್ಲಿ ಬಂದು ಕುಳಿತುಕೊಳ್ಳುತ್ತಾರೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.












Click it and Unblock the Notifications