ಸೆ.18,19 ರಂದು ಬೆಂಗಳೂರಿನಲ್ಲಿ ನೀರು ಬರೋಲ್ಲ

ಬೆಂಗಳೂರು, ಸೆ. 11 : ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತಾತಗುಣಿ, ಟಿ.ಕೆ.ಹಳ್ಳಿಯಲ್ಲಿ ಪಂಪ್ ನಿರ್ವಹಣೆ ಸೇರಿದಂತೆ ವಿವಿಧ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಜಲಮಂಡಳಿ ಮುಂದಾಗಿದೆ. ಆದ್ದರಿಂದ ಸೆ.18 ಮತ್ತು 19ರಂದು ನಗರದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನೀರಿನ ವ್ಯತ್ಯಯದ ಕುರಿತು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಾವೇರಿ 1 ಮತ್ತು 2ನೇ ಹಂತದ ನೀರು ಪೂರೈಕೆ ಯೋಜನೆಯ ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗು­ಣಿಯಲ್ಲಿ ಪಂಪ್‌ ನಿರ್ವಹಣೆ ಸೇರಿದಂತೆ ವಿವಿಧ ನಿರ್ವಹಣಾ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

bwssb

ಸೆ.18ರ ಗುರುವಾರ ಬೆಳಗ್ಗೆಯಿಂದ ಸುಮಾರು 16 ಗಂಟೆಗಳ ಕಾಲ ಪಂಪಿಂಗ್‌ ಕಾರ್ಯ ಸ್ಥಗಿತಗೊಳ್ಳಲಿದ್ದು, ಇದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಸೆ. 18ರ ಗುರುವಾರ ಹಾಗೂ ಸೆ.19ರ ಶುಕ್ರವಾರ ನೀರಿನ ಪೂರೈಕೆಯಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದೆ. [ಜಲಮಂಡಳಿ ಅಪೂರ್ಣ ಕಾಮಗಾರಿ, ಸವಾರರ ಪರದಾಟ]

ಎಲ್ಲಿ ನೀರು ಬರೋಲ್ಲಾ? : ಜಯನಗರ, ಜೆ.ಪಿ. ನಗರ, ಬಸವನಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆ, ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಶಾಂತಿನಗರ, ನೀಲಸಂದ್ರ, ಕೆ.ಆರ್. ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪಾಲಿಕೆ ಹಣಕಾಸು ವ್ಯವಹಾರಕ್ಕೆ ಆನ್‌ಲೈನ್ ವ್ಯವಸ್ಥೆ : ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ವಿಭಾಗ ಸೇರಿದಂತೆ ಹಣಕಾಸು ವ್ಯವಹಾರದಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಾರದರ್ಶಕತೆ ತರಲಾಗುವುದು ಎಂದು ಮೇಯರ್ ಎನ್.ಶಾಂತಕುಮಾರಿ ಅವರು ತಿಳಿಸಿದ್ದಾರೆ. ಬುಧವಾರ ಮಾತನಾಡಿದ ಅವರು, ಹಣಕಾಸು ವಿಭಾಗದಲ್ಲಿ ಸಾಕಷ್ಟು ಮಂದಿ ಗುತ್ತಿಗೆದಾರರು ಮತ್ತಿತರರು ಗುಂಪುಗೂಡಿರುತ್ತಾರೆ. ಅಲ್ಲಿ ಪಾದರ್ಶಕತೆ ತರಲು ಆನ್‌ಲೈನ್ ವ್ಯವಸ್ಥೆ ಮಾಡಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+