ಬೆಂಗಳೂರು; ಸೋಮವಾರ ಕರೆಂಟ್, ಮಂಗಳವಾರ ನೀರಿಲ್ಲ

ಬೆಂಗಳೂರು, ಆಗಸ್ಟ್ 29; ಬೆಂಗಳೂರು ನಗರದಲ್ಲಿ ಸೋಮವಾರ ವಿದ್ಯುತ್ ಮತ್ತು ಮಂಗಳವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಮತ್ತು ಜಲಮಂಡಳಿ ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ಈ ಕುರಿತು ಮಾಹಿತಿ ನೀಡಿವೆ.

ತುರ್ತು ನಿರ್ವಹಣಾ ಕಾರ್ಯದ ಹಿನ್ನಲೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 30ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನರು ಬೆಸ್ಕಾಂ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

No Power Supply In Bengaluru On August 30 And No Water Supply On August 31

ಬನ್ನೇರುಘಟ್ಟ ರಸ್ತೆ ಬಳಿ 900 ಮಿ. ಮೀ. ವ್ಯಾಸದ ಕೊಳವೆ ಜೋಡಣೆ ಕಾಮಗಾರಿ ಹಿನ್ನಲೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 31ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 2 ಗಂಟೆಯ ತನಕ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಹೇಳಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ; ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಉದ್ಯಾನ, ಆದರ್ಶ ನಗರ, ಆದರ್ಶ ಬಡಾವಣೆ, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ ನಗರ, ಲಕ್ಷ್ಮೀ ನಗರ, ಎಚ್‌.ವಿ.ಕೆ. ಬಡಾವಣೆ, ಕಿರ್ಲೋಸ್ಕರ್ ಕಾಲೋನಿ.

ಕರ್ನಾಟಕದ ಬಡಾವಣೆ, ಕಮಲಾ ನಗರ, ವಿ.ಜೆ.ಎಸ್‌.ಎಸ್. ಬಡಾವಣೆ, ವಾರ್ಡ್‌ ಕಚೇರಿ ಸುತ್ತಮತ್ತ, ಗೃಹಲಕ್ಷ್ಮೀ ಬಡಾವಣೆ, ನಾಗಾಪುರ, ಮಹಾಲಕ್ಷೀ ಪುರ ಮೋದಿ ಆಸ್ಪತ್ರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್.

ಗೆಳೆಯರ ಬಳಗ, ಮೈಕೊ ಬಡಾವಣೆ, ಜಿ. ಡಿ. ನಾಯ್ಡು, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮೀ ಬಡಾವಣೆ, ಬಿಎನ್‌ಇಎಸ್ ಕಾಲೇಜು, ಬಿಇಎಲ್ ಅಪಾರ್ಟ್‌ಮೆಂಟ್ಸ್‌ ರಸ್ತೆ, ಸ್ಯಾಂಡಲ್‌ ಸೋಪ್ ಕಾರ್ಖಾನೆ, ಯಶವಂತಪುರ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಎಲ್ಲೆಲ್ಲಿ ನೀರು ಪೂರೈಕೆ ಇಲ್ಲ; ಶಾಂತಲಾ ನಗರ, ವಿನಾಯಕ ನಗರ, ಆನೆಪಾಳ್ಯ, ಎಲ್. ಆರ್. ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್ಮಂಡ್ ಟೌನ್, ಎಂ. ಜಿ. ರಸ್ತೆ, ಜೆ. ಕೆ. ಪುರ, ಎಂ. ಬಿ. ಗಾರ್ಡನ್, ವಿಕ್ಟೋರಿಯಾ ಬಡಾವಣೆ, ಜೀವನ್ ಭೀಮಾನಗರ.

ಎಚ್‌. ಎ. ಎಲ್. 3ನೇ ಹಂತ, ದೊಮ್ಮಲೂರು, ಅಮರ ಜ್ಯೋತಿ ಬಡಾವಣೆ, ಕೋಡಿಹಳ್ಳಿ, ಹನುಮಂತಪ್ಪ ಬಡಾವಣೆ, ಹಲಸೂರು, ಜೋಗುಪಾಳ್ಯ, ಕೆಂಬ್ರಿಜ್ ಬಡಾವಣೆ, ಗೌತಮಪುರ, ಧೀನಬಂಧು ನಗರ, ರಾಜೇಂದ್ರ ನಗರ, ನಂಜಪ್ಪ ರೆಡ್ಡಿ ಬಡಾವಣೆ, ಆಡುಗೋಡಿ, ಕೋರಮಂಗಲ, ಕೆ. ಎಚ್‌. ಬಿ. ಬ್ಲಾಕ್, ಕತ್ತಲಿಪಾಳ್ಯ, ಜಾನ್ ನಗರ, ಎನ್‌ಜಿವಿ, ಜಯನಗರ, ತಿಲಕ್ ನಗರ, ಎನ್‌. ಆರ್. ನಗರ, ಚಂದ್ರಪ್ಪ ನಗರ, ಈರಮ್ಮ ಬಡಾವಣೆ.

ವೆಂಕಟೇಶ್ವರ ಬಡಾವಣೆ, ಭುವನಪ್ಪ ಬಡಾವಣೆ, ಜೋಗಿ ಕಾಲೋನಿ ಚಿಕ್ಕ ಆಡುಗೋಡಿ, ಬೃಂದಾವನ ನಗರ, ಮಾರುತಿ ನಗರ, ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ. ಪಿ. ಅಗ್ರಹಾರ, ನ್ಯೂ ಬಿನ್ನಿ ಬಡಾವಣೆ, ಶ್ರೀನಗರ, ಚಾಮರಾಜಪೇಟೆ, ಪಾದರಾಯಪುರ, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐ. ಟಿ. ಐ. ಲೇಔಟ್, ಗುರುರಾಜ ಬಡಾವಣೆ, ಕತ್ರಿಗುಪ್ಪೆ, ಬಸವನಗುಡಿ, ಎನ್. ಆರ್. ಕಾಲೋನಿ, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ಬನಶಂಕರಿ ಮತ್ತು ಸುತ್ತಮುತ್ತಲ ಪ್ರದೇಶಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+