ಯಶವಂತಪುರ : ಜ.23 ರಿಂದ 31ರ ತನಕ ಹೊಸ ವಾಹನ ನೋಂದಣಿ ಇಲ್ಲ

ಬೆಂಗಳೂರು, ಜನವರಿ 07 : ಯಶವಂತಪುರದ ಸಾರಿಗೆ ಕಚೇರಿಯಲ್ಲಿ ಜನವರಿ 23 ರಿಂದ 31ರ ತನಕ ಹೊಸ ವಾಹನಗಳ ನೋಂದಣಿ ನಡೆಯುವುದಿಲ್ಲ. ಹೊಸ ನೋಂದಣಿ ಹಾಗೂ ಇ-ಪಾವತಿಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ.

ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಅಧಿಕಾರಿಗಳ ಕಚೇರಿಯ ಎಲ್ಲಾ ಸೇವೆಗಳನ್ನು ಆನ್‍ಲೈನ್ ಮುಖಾಂತರ ಜಾರಿಗೊಳಿಸಲು ವಾಹನ್-4 ತಂತ್ರಾಂಶವನ್ನು ಅಳವಡಿಸುವ ಪ್ರಕ್ರಿಯೆ ನಡೆಸಲಾಗುತ್ತಿರುವ ಕಾರಣಕ್ಕಾಗಿ ಹೊಸ ನೋಂದಣಿ ಹಾಗೂ ಇ-ಪಾವತಿಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಜನವರಿ 24 - 28 ರವರೆಗೆ ಕಚೇರಿಯ ಖಜಾನೆ ವಿಭಾಗದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಜನವರಿ 29 ರಿಂದ ಹೊಸ ವಾಹನಗಳ ನೋಂದಣಿಗೆ ವಾಹನ್-4 ತಂತ್ರಾಂಶದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

vehicle

ಫೆಬ್ರವರಿ 1 ರಿಂದ ವಾಹನ್ 4 ನಲ್ಲಿ ಉಳಿದ ವಾಹನಗಳಿಗೆ ಸಂಬಂಧಿಸಿದ ಇತರೆ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರು, ಮಾಲೀಕರು ಈ ಕಚೇರಿಗೆ ಅರ್ಹತಾ ಪತ್ರ ನವೀಕರಣ, ನೋಂದಣಿ ಪತ್ರ ನವೀಕರಣ, ವಾಹನ ಮಾಲೀಕತ್ವ ವರ್ಗಾವಣೆ, ರಹದಾರಿ ಇನ್ನಿತರೆ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದ್ದು, ಬಾಕಿಯಿದ್ದ ಪ್ರಕರಣಗಳನ್ನು ಖುದ್ದಾಗಿ ಕಚೇರಿಗೆ ಹಾಜರಾಗಿ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 22 ರೊಳಗೆ ಪೂರೈಸಿಕೊಳ್ಳಬೇಕು.

ಜನವರಿ 23 ರಿಂದ 31 ರವರೆಗೆ ಸದರಿ ಕಚೇರಿಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಫೆಬ್ರವರಿ 1 ರಿಂದ ವಾಹನ್-4 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+