ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಮನೆ ಕಟ್ಟುವವರಿಗೆ ಪಾಲಿಕೆಯಿಂದ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಆಗಸ್ಟ್ 01 : ಬೆಂಗಳೂರಿನಲ್ಲಿ ಮನೆ ನಿರ್ಮಿಸುವವರಿಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ. ಮನೆ ನಿರ್ಮಾಣ ಮಾಡಲು ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಪಾಲಿಕೆ ವ್ಯಾಪ್ತಿಯಲ್ಲಿ 40*60ಕ್ಕಿಂತ ಕಡಿಮೆ ಅಳತೆಯ ನಿವೇಶನದಲ್ಲಿ ಮನೆ ಕಟ್ಟುವುದಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

ಬಿಬಿಎಂಪಿ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. 40*60ಕ್ಕಿಂತ ಕಡಿಮೆ ಅಳತೆಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುವವರು ಕಟ್ಟಡದ ನಕ್ಷೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಿದರೆ ಸಾಕಾಗುತ್ತದೆ.

ಹೊಸ 15 ಸ್ಕೈವಾಕ್‌ಗೆ ಬಿಬಿಎಂಪಿ ಟೆಂಡರ್, ಎಲ್ಲೆಲ್ಲಿ ನಿರ್ಮಾಣ?ಹೊಸ 15 ಸ್ಕೈವಾಕ್‌ಗೆ ಬಿಬಿಎಂಪಿ ಟೆಂಡರ್, ಎಲ್ಲೆಲ್ಲಿ ನಿರ್ಮಾಣ?

No Need To Take Building Plan Approval From BBMP

ನೋಂದಾಯಿತ ವಾಸ್ತುಶಿಲ್ಪಿಗಳಿಂದ ನಕ್ಷೆಯನ್ನು ಸಿದ್ಧಪಡಿಸಿ ಪಾಲಿಕೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಪಾಲಿಕೆಯ ಬೈಲಾಕ್ಕೆ ಅನುಗುಣವಾಗಿ ನಕ್ಷೆ ಇದ್ದರೆ ಒಪ್ಪಿಗೆ ಸಿಗಲಿದೆ. ಇಲ್ಲವಾದಲ್ಲಿ ನಕ್ಷೆಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಸೂಚನೆ ನೀಡಲಾಗುತ್ತದೆ.

ಜಯಮಹಲ್ ರಸ್ತೆ ಅಗಲೀಕರಣಕ್ಕೆ ಇದ್ದ ಅಡೆ-ತಡೆ ನಿವಾರಣೆಜಯಮಹಲ್ ರಸ್ತೆ ಅಗಲೀಕರಣಕ್ಕೆ ಇದ್ದ ಅಡೆ-ತಡೆ ನಿವಾರಣೆ

ಪಾಲಿಕೆ ವೆಬ್‌ಸೈಟ್‌ಗೆ ನಕ್ಷೆಯನ್ನು ಅಪ್‌ಲೋಡ್ ಮಾಡಿದ ತಕ್ಷಣ ಕೆಲಸವನ್ನು ಆರಂಭಿಸಬಹುದಾಗಿದೆ. ಸುಳ್ಳು ದಾಖಲೆ ಅಥವ ನಕ್ಷೆಯನ್ನು ಅಪ್‌ಲೋಡ್ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ನಿಯಮ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅನ್ವಯವಾಗುವುದಿಲ್ಲ. ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡುವವರು ನಕ್ಷೆ ಮಂಜೂರಾತಿಯನ್ನು ಪಡೆಯಬೇಕಾಗಿದೆ. 40*60ಕ್ಕಿಂತ ಕಡಿಮೆ ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸುವವರು ಪಾಲಿಕೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಪಾಲಿಕೆ ನಕ್ಷೆಯನ್ನು ಅಪ್‌ಲೋಡ್ ಮಾಡುವ ತೀರ್ಮಾನ ಕೈಗೊಂಡಿದೆ.

English summary
Bruhat Bengaluru Mahanagara Palike (BBMP) submitted the proposal to state government regard building plan approval. Who building house on the site less than 40x60 sqft not need to take BBMP building plan approval. They can upload building plan on BBMP website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X