ಕಸದ ಲಾರಿ ಬಿಂಗೀಪುರಕ್ಕೆ ಬರೋಲ್ಲ ಮೇಯರ್ ಭರವಸೆ

ಬೆಂಗಳೂರು, ಸೆಪ್ಟೆಂಬರ್, 14 : ಬಿಂಗೀಪುರದ ಜನರ ಹೋರಾಟಕ್ಕೆ ಫಲ ಸಿಕ್ಕಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ನೂತನ ಮೇಯರ್ ಮಂಜುನಾಥ ರೆಡ್ಡಿ ಅವರು ಬಿಂಗೀಪುರ ಕೇಂದ್ರಕ್ಕೆ ಕಸ ವಿಲೇವಾರಿಯನ್ನು ಒಂದು ವಾರದಲ್ಲಿ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಆನೇಕಲ್ ತಾಲೂಕಿನ ಬಿಂಗೀಪುರದಲ್ಲಿರುವ ಕಸ ವಿಲೇವಾರಿ ಕೇಂದ್ರಕ್ಕೆ ಕಸ ಸಾಗಣೆ ಮಾಡಬಾರದು ಎಂದು ಶುಕ್ರವಾರದಿಂದ ಜನರು ಪ್ರತಿಭಟನೆ ನೆಡೆಸುತ್ತಿದ್ದರು. ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಗ್ರಾಮಸ್ಥರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. [ಹೊಸ ಮೇಯರ್ ಸ್ವಾಗತಿಸಿದ ಹಳೇ ಕಸದ ಸಮಸ್ಯೆ]

manjunath reddy

'ಒಂದು ವಾರದಲ್ಲಿ ಕೇಂದ್ರಕ್ಕೆ ಕಸ ವಿಲೇವಾರಿ ಸ್ಥಗಿತಗೊಳಿಸಲಾಗುತ್ತದೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಜಲ ಮಂಡಳಿಗೆ 1.85 ಕೋಟಿಯನ್ನು ಸೋಮವಾರ ನೀಡಲಾಗುತ್ತದೆ. ಗ್ರಾಮಗಳಲ್ಲಿ ಆರೋಗ್ಯದ ಸಮಸ್ಯೆ ಕಂಡುಬರುತ್ತಿದೆ. ಗ್ರಾಮದಲ್ಲಿ ವಾರಕ್ಕೊಮ್ಮೆ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ' ಎಂದು ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಭರವಸೆ ನೀಡಿದರು.[ನೂತನ ಮೇಯರ್ ಮುಂದಿರುವ 10 ಸವಾಲು]

ಎಲ್ಲಿಗೆ ಕಸ ಸಾಗಣೆ : 'ಬಿಂಗೀಪುರದ ಕೇಂದ್ರಕ್ಕೆ ಕಸ ಸಾಗಣೆ ನಿಲ್ಲಿಸಿದ ನಂತರ ಚಿಕ್ಕನಾಗಮಂಗಲದ ಘಟಕಕ್ಕೆ ಕಸ ವಿಲೇವಾರಿ ಮಾಡಲಾಗುತ್ತದೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಸಲಹೆ ಪಡೆದು ಬಿಂಗೀಪುರ, ಬೆಟ್ಟದಾಸನಪುರ, ಮೈಲಸಂದ್ರ, ಪೋಡು, ಹುಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ' ಎಂದು ಮೇಯರ್ ಹೇಳಿದರು.

bbmp

ಬಿಬಿಎಂಪಿ ಬಿಂಗೀಪುರದಲ್ಲಿ ಸುಮಾರು 20 ಎಕರೆ ಜಾಗದಲ್ಲಿ ಕಸವನ್ನು ಸುರಿಯುತ್ತಿದೆ. ಸುಮಾರು ಎರಡು ವರ್ಷಗಳಿಂದ ಪ್ರತಿನಿತ್ಯ ಇಲ್ಲಿಗೆ 40 ಟನ್ ಕಸವನ್ನು ಸಾಗಣೆ ಮಾಡಲಾಗುತ್ತಿದೆ. ಬೊಮ್ಮನಹಳ್ಳಿ, ಬಿಟಿಎಂ, ಜಯನಗರ, ಚಿಕ್ಕಪೇಟೆ, ಪದ್ಮನಾಭನಗರ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಕಸವನ್ನು ಇಲ್ಲಿಗೆ ಸಾಗಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+