ವೋಟ್ ಬೇಕು ಅಂತ ಬರ್ತಾರೆ: ಈಗ ಯಾರು ಪತ್ತೆನೇ ಇಲ್ಲ

ಬೆಂಗಳೂರು, ಏಪ್ರಿಲ್ 15: ''ವೋಟ್ ಬೇಕು ಅಂತ ಬರ್ತಾರೆ... ಆದರೆ, ಈಗ ಯಾರು ಪತ್ತೆನೇ ಇಲ್ಲ..'' ಎಂದು ಕಣ್ಣೀರು ಹಾಕುತ್ತಿದ್ದಾರೆ ಬೆಂಗಳೂರಿನ ಮಂಜುನಾಥ ಲೇ ಔಟ್‌ ನಿವಾಸಿಗಳು.

Recommended Video

      ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಯಾರಿಗೂ ಹೊಟ್ಟೆಗೆ ಊಟ ಇಲ್ಲ..! | D V Sadananda Gowda | Krishna Byregowda

      ಮಂಜುನಾಥ ಲೇ ಔಟ್‌ನ ಆರನೇ ವಾರ್ಡ್‌ನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲ ಧರ್ಮದ ಜನರು ವಾಸ ಮಾಡುತ್ತಿದ್ದಾರೆ. ಈಗ ಈ ಜನರ ಪರಿಸ್ಥಿತಿ ನೋಡಿದರೆ, ಬೇಸರ ಆಗುತ್ತದೆ. ಈ ಜನರು ಊಟಕ್ಕೂ ಪರದಾಟ ನಡೆಸಿದ್ದಾರೆ. ಬಹುತೇಕ ಮನೆಯಲ್ಲಿ ಪಾತ್ರೆಗಳು ಖಾಲಿ ಖಾಲಿಯಾಗಿವೆ.

      ಇಲ್ಲಿ ಸುಮಾರು 60 ಕುಟುಂಬಗಳು ವಾಸ ಮಾಡುತ್ತಿದೆ. ಲಾಕ್‌ಡೌನ್‌ ಘೋಷಣೆ ಆದ ನಂತರ, ಇಲ್ಲಿನ ಜನರಿಗೆ ಬಹಳ ತೊಂದರೆಯಾಗಿದೆ. ಲಾಕ್‌ಡೌನ್ ಆಗಿ ಇಷ್ಟು ದಿನ ಕಳೆದರು, ಊಟ, ಹಾಲು, ಆಹಾರ ಸಾಮಗ್ರಿಗಳು ಇಲ್ಲಿನ ಜನರ ಕೈಗೆ ತಲುಪಿಲ್ಲ. ಆಧಾರ್ ಕಾರ್ಡ್‌ ಕೊಡಿ, ಅದು ಬೇಕು, ಇದು ಬೇಕು ಎಂದು ಅಧಿಕಾರಿಗಳು ಆಟ ಆಡಿಸುತ್ತಿದ್ದಾರೆ ಎಂದು ನಿವಾಸಿಗಳು ನೋವು ಹಂಚಿಕೊಂಡಿದ್ದಾರೆ.

      No Food NO Ration Bengaluru Manjunatha Layout Residentss Sad Story

      ಇಲ್ಲಿ ವಾಸ ಮಾಡುವ ಬಹುತೇಕರು ಮನೆ ಕೆಲಸ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಲಾಕ್‌ಡೌನ್ ಇರುವ ಕಾರಣ ಕೆಲಸ ಇಲ್ಲದೆ, ಹಣ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವ ಹಾಗೆ ಇಲ್ಲ.. ಮನೆಯಲ್ಲಿ ಹಣವೂ ಇಲ್ಲ ಎಂದು ತಮ್ಮ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.

      ಇಲ್ಲಿನ ಕಾರ್ಪೊರೇಟರ್ ಗೆದ್ದ ನಂತರ ಒಮ್ಮೆಯೂ ಇಲ್ಲಿಗೆ ಬಂದಿಲ್ಲ. ಮತ ಹಾಕಿಸಿಕೊಳ್ಳುವಾಗ ಮಾತ್ರ ಅವರಿಗೆ ನಮ್ಮ ನೆನಪು ಇರುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+