ಮೇ ಅಂತ್ಯದವರೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
ನಿರ್ವಹಣಾ ಕಾಯ್ದೆಯಡಿ ಹೇಮಾವತಿ, ಹಾರಂಗಿ, ಕಬಿನಿ ಹಾಗೂ ಕೆ.ಆರ್.ಎಸ್. ಜಲಾಶಯಗಳಿಂದ ಸುಮಾರು ೧೧.೭೫ ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ಟ್ಯಾಂಕರ್ ಗಳ ಮೂಲಕ ತರಿಸಲು ಸರ್ಕಾರದ ಚಿಂತನೆ.
ಬೆಂಗಳೂರು, ಮಾರ್ಚ್ 2: ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದರೂ ಬೆಂಗಳೂರು ನಗರಕ್ಕೆ ಮೇ ತಿಂಗಳ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದ್ದ ಬೆಂಗಳೂರು ನಗರ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಸಭೆಯ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಕುಡಿಯುವ ನೀರಿಗಾಗಿ ಕೈಗೊಳ್ಳಲಾದ ಕ್ರಮಗಳನ್ನು ವಿವರಿಸಿದರು.[ಸ್ಟೀಲ್ ಬ್ರಿಡ್ಜ್ ಯೋಜನೆ ಕ್ಯಾನ್ಸಲ್ ಓಕೆ, 65 ಕೋಟಿ ರು ಕಿಕ್ ಬ್ಯಾಕ್?]

ಹೇಮಾವತಿ, ಹಾರಂಗಿ, ಕಬಿನಿಯಿಂದ ನೀರು: ನಗರಕ್ಕೆ ವಾರ್ಷಿಕ ೧೯ ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ನಿತ್ಯ ೧೪೦೦ ಎಂಎಲ್‌ಡಿ ನೀರನ್ನು ನಗರಕ್ಕೆ ತರಲಾಗುತ್ತಿದೆ. ಇದಕ್ಕಾಗಿ ಹೇಮಾವತಿ, ಹಾರಂಗಿ, ಕಬಿನಿ ಹಾಗೂ ಕೆ.ಆರ್.ಎಸ್. ಜಲಾಶಯಗಳಿಂದ ಸುಮಾರು ೧೧.೭೫ ಟಿ.ಎಂ.ಸಿ. ನೀರು ದೊರೆಯುವ ಸಾಧ್ಯತೆ ಇದೆ ಎಂದು ಮಾತನಾಡಿದ ಸಚಿವರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಖಾಸಗಿ ಟ್ಯಾಂಕರ್‌ಗಳನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಬಿ.ಬಿ.ಎಂ.ಪಿ. ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.[ಉಕ್ಕಿನ ಸೇತುವೆ ಬದಲು ಎಲಿವೇಟೆಡ್ ರಸ್ತೆ, ಅಳಿಯ ಅಲ್ಲ...!]
ನೀರು ಸರಬರಾಜಿಗೆ ಅಗತ್ಯ ಕೈಗೊಳ್ಳಲಾಗಿದೆಯಾದರೂ, ಸಾರ್ವಜನಿಕರು ನೀರನ್ನು ಪೋಲು ಮಾಡದಂತೆ ಮಿತವಾಗಿ ಬೆಳೆಸಿ ಸರ್ಕಾರದ ಕ್ರಮಗಳಿಗೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಟ್ಯಾಂಕರ್ ಸರಬರಾಜು ರದ್ದತಿ ಇಲ್ಲ: ನೀರಿನ ಸಮಸ್ಯೆಗಳಿರುವ ಕಡೆ ತುರ್ತಾಗಿ ಉತ್ತಮ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಕೆಲವು ಖಾಸಗಿ ನೀರಿನ ಟ್ಯಾಂಕರ್ ಗಳ ಸಹಯೋಗದೊಂದಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ತಕ್ಷಣ ಆ ಪದ್ದತಿಯನ್ನು ನಿಲ್ಲಿಸಿದರೆ ತೊಂದರೆಯಾಗಬಹುದು. ಖಾಸಗಿ ಟ್ಯಾಂಕರ್‌ಗಳವರು ಅವ್ಯವಹಾರದಲ್ಲಿ ತೊಡಗಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.[ಬೆಂಗ್ಳೂರಿನ ಎಚ್ಎಎಲ್ ನಲ್ಲಿ ವಿವಿಧ ಉದ್ಯೋಗ ಅವಕಾಶ]
ತನಿಖಾ ದಳ ಹಾಗೂ 100 ಬೋರ್ ವೆಲ್: ನೀರು ಪೂರೈಕೆ ಮಾಡುವಾಗ ಅನಗತ್ಯ ನೀರು ಸೋರಿಕೆಯಾಗುತ್ತಿದ್ದು ಇದನ್ನು ತಡೆಗಟ್ಟಲು ತನಿಖಾ ದಳ ರಚಿಸಲಾಗಿದೆ ಎಂದ ಸಚಿವರು ಬೆಂಗಳೂರು ನಗರದಲ್ಲಿ ಸುಮಾರು ೧೦೦ ಬೋರ್‌ವೆಲ್‌ಗಳನ್ನು ಕೊರೆಸಲಾಗುವುದು. ಅಲ್ಲದೆ ಬೆಂಗಳೂರು ಹೊರವಲಯಗಳಲ್ಲಿ ಬರುವ ೧೧೦ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ವಹಿಸಿದ್ದು, ಇದಕ್ಕಾಗಿ ಮೂರು ಕೋಟಿ ರೂ. ಹಣವನ್ನು ಕಾಯ್ದಿರಿಸಲಾಗಿದೆ ಎಂದರು.












Click it and Unblock the Notifications