ಸೋಮವಾರ ಸಿಐಡಿ ಕೈಗೆ ನಿತ್ಯಾ ಪುರುಷತ್ವ ಪರೀಕ್ಷೆ ವರದಿ

ಬೆಂಗಳೂರು, ಸೆ. 13 : ಬಿಡದಿ ಧ್ಯಾನ­ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ವರದಿ ಸಿದ್ಧವಾಗಿದ್ದು, ಸೆ.15ರ ಸೋಮವಾರ ಸಿಐಡಿ ಕೈಸೇರಲಿದೆ. ಪುರುಷತ್ವ ಪರೀಕ್ಷೆ ವೇಳೆ ಅಶ್ಲೀಲ ಚಲನಚಿತ್ರ ನೋಡುವಂತೆ ಒತ್ತಾಯಿಸಿದ್ದಾರೆ ಎಂದು ನಿತ್ಯಾನಂದ ಪರ ವಕೀಲರು ವೈದ್ಯರಿಗೆ ಶುಕ್ರವಾರ ನೋಟಿಸ್‌ ನೀಡಿದ್ದಾರೆ.

ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ದುರ್ಗಣ್ಣ ನೇತೃತ್ವದಲ್ಲಿ ಸಭೆ ನಡೆಸಿದ ಪುರುಷತ್ವ ಪರೀಕ್ಷೆ ನಡೆಸಿದ ವೈದ್ಯರು ವರದಿಯ ಬಗ್ಗೆ ಚರ್ಚಿಸಿದರು. ನಿತ್ಯಾನಂದ ಸ್ವಾಮಿಯ ದೇಹ, ಜನ­ನಾಂಗ, ವೃಷಣಗಳ ಬೆಳವಣಿಗೆ ಹಾಗೂ ವೀರ್ಯಾಣು ಚಲನೆ ಸಹಜ­ವಾಗಿದೆ. ವಯಸ್ಸಿಗೆ ಅನುಗುಣ­ವಾಗಿ ಜನ­ನಾಂಗ ಉದ್ರೇಕಗೊಳ್ಳುವ ಮತ್ತು ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವೂ ಇದೆ ಎಂದು ವೈದ್ಯರು ತಿಳಿಸಿದ್ದಾರೆ. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!]

Swami Nithyananda

ನಿತ್ಯಾನಂದ ಸ್ವಾಮಿಯ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಲಾಗಿತ್ತು. ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಧ್ವನಿ ಪರೀಕ್ಷೆ ಮಾಡಲಾಗಿತ್ತು. ಎಫ್‌ಎಸ್‌ಎಲ್‌ ತಜ್ಞರು ಧ್ವನಿ ಪರೀಕ್ಷೆಯ ವಿವರ ಸಲ್ಲಿಸಿದ ನಂತರ ಅಂತಿಮ ವರದಿ ಸಿದ್ಧಪಡಿಸಿ ಸಿಐಡಿ ಪೊಲೀಸರಿಗೆ ಸೆ.15ರಂದು ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]

ಈ ನಡುವೆ ಪುರುಷತ್ವ ಪರೀಕ್ಷೆ ನಡೆಸಿರುವ ವೈದ್ಯರ ವಿರುದ್ಧ ಕಾನೂನು ಸಮರ ಆರಂಭಿಸಿರುವ ನಿತ್ಯಾನಂದ ಸ್ವಾಮಿ, ಪರೀಕ್ಷೆ ವೇಳೆ ಅಶ್ಲೀಲ ಚಲನಚಿತ್ರ ನೋಡುವಂತೆ ಒತ್ತಾಯಿಸಿದ್ದಾರೆ ಎಂದು ವೈದ್ಯರಿಗೆ ಶುಕ್ರವಾರ ಲೀಗಲ್‌ ನೋಟಿಸ್‌ ನೀಡಿದ್ದಾರೆ. ಸಿಐಡಿ ಅಧಿಕಾರಿಗಳು ವರದಿ ಕೈ ಸೇರಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, ವರದಿಯನ್ನು ರಾಮನಗರ ಕೋರ್ಟ್‌ಗೆ ನೀಡಲಿದ್ದಾರೆ.

ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ನಡೆದಿತ್ತು. ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆಯನ್ನು ನಡೆಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+