ನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿ
ಬೆಂಗಳೂರು, ಜುಲೈ 14: 'ನಿರುತ್ತರ ಪುಸ್ತಕ' ಎಂಬ ಪ್ರಕಾಶನ ಸಂಸ್ಥೆಯನ್ನು ಹೊಸ ಕನಸು ಮತ್ತು ಭರವಸೆಗಳೊಂದಿಗೆ ಉತ್ಸಾಹಿ ಯುವಕರು ಕಟ್ಟಿದ್ದಾರೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ.
ಇದರ ಸಲುವಾಗಿ ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ 'ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ' ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ.

ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಕರು ಆಗಸ್ಟ್ 12, 2018ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.
ನಿಯಮಗಳು:
*ಲೇಖಕರ ವಯಸ್ಸು 45 ವರ್ಷ ಮೀರಿರಬಾರದು
*ಕಾದಂಬರಿಯು ಬೇರೆಲ್ಲೂ ಪ್ರಕಟವಾಗಿರಬಾರದು
*ಹಸ್ತಪ್ರತಿಯ ಯಾವ ಭಾಗದಲ್ಲೂ ಲೇಖಕರ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಮೂದಿಸಬಾರದು.
*ಕಾದಂಬರಿಗೆ ಪುಟಗಳ ಮಿತಿ ಇರುವುದಿಲ್ಲ.
*ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ
*ತೀರ್ಪಿನ ಮಧ್ಯೆ ಯಾವುದೇ ಪತ್ರವ್ಯವಹಾರವಿರುವುದಿಲ್ಲ
ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸಿರುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.
ಕಾದಂಬರಿಯನ್ನು ಕಳುಹಿಸಬೇಕಾದ ವಿಳಾಸ:
ನಿರುತ್ತರ ಪುಸ್ತಕ
ನಂ:13
ಒಂದನೇ ಮುಖ್ಯರಸ್ತೆ
ಎರಡನೇ ಅಡ್ಡರಸ್ತೆ
ಮಲ್ಲತ್ತಹಳ್ಳಿ
ಬೆಂಗಳೂರು-56












Click it and Unblock the Notifications