Namma Metro new Corridor: ನೈಸ್ ರಸ್ತೆಯಲ್ಲಿ ಬೃಹತ್ 'ಮೆಟ್ರೋ ಕಾರಿಡಾರ್' ನಿರ್ಮಾಣ ಯೋಜನೆ
ಬೆಂಗಳೂರು, ಫೆಬ್ರವರಿ 28: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನೈಸ್ ರಸ್ತೆ ಜೊತೆ ಜೊತೆಯಾಗಿ ನಮ್ಮ ಮೆಟ್ರೋ (NICE-Namma Metro Corridor) ಕಾರಿಡಾರ್ ಅಭಿವೃದ್ಧಿಗೊಳ್ಳಲಿದೆ. ಈ ಮಾರ್ಗದಲ್ಲಿ ಒಂದು ಕಡೆ ಮೆಟ್ರೋ ಮತ್ತೊಂದು ಕಡೆ ವಾಹನಗಳು ಸಂಚಾರ ಆರಂಭಿಸಲಿವೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ರಾಜಧಾನಿ ಬೆಂಗಳೂರಿಗೆ ಬರುವವರು ಹಾಗೂ ಸ್ಥಳೀಯರು ಭವಿಷ್ಯದಲ್ಲಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ನೈಸ್ ರಸ್ತೆ ಪಕ್ಕದಲ್ಲಿಯೇ ಸುಮಾರು 40 ಕಿಮೀ ಉದ್ದ ನಮ್ಮ ಮೆಟ್ರೊ (Namma Metro) ರೈಲಿನಲ್ಲಿ ಸಂಚರಿಸಬಹುದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನೈಸ್ ರಸ್ತೆ ಜತೆ ನಮ್ಮ ಮೆಟ್ರೋ ಕಾರಿಡಾರ್ ಪ್ರಸ್ತಾವ
ನೈಸ್ ರಸ್ತೆಯ ಮಧ್ಯದಲ್ಲಿ ಮೆಟ್ರೊ ರೈಲು ಮಾರ್ಗಕ್ಕಾಗಿ ರಾಜ್ಯ ಸರ್ಕಾರಕ್ಕೆ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಲಿಮಿಟೆಡ್ (ಬೆಂಗಳೂರಿನಲ್ಲಿ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಜಾರಿಗೊಳಿಸುತ್ತಿರುವ ಕಂಪನಿ) ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಕೂಡಲೇ ಹಸಿರು ನಿಶಾನೆ ತೋರಿಸಿದ್ದೇ ಆದಲ್ಲಿ ಭವಿಷ್ಯದಲ್ಲಿ ನೈಸ್ ರಸ್ತೆ ಜತೆ ಅತೀ ಉದ್ದದ ಮೆಟ್ರೋ ಕಾರಿಡಾರ್ ತಲೆ ಎತ್ತಲಿದೆ.
ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಗರದ ಉಪಗ್ರಹ ಪಟ್ಟಣಗಳು ಮತ್ತು ಉಪನಗರ ಪ್ರದೇಶಗಳಿಗೆ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸುತ್ತಿದೆ.
ಯೋಜನೆ ಕಾರ್ಯಸಾಧ್ಯತೆಗೆ ಒಪ್ಪಿಗೆ ಶೀಘ್ರ
ಈ ಕುರಿತು ಪ್ರಸ್ತಾಪವು ಕಾರ್ಯಸಾಧ್ಯತೆಯ ಅಧ್ಯಯನ ನಡೆಸುವುದಾಗಿ ತಿಳಿಸಿದೆ. ಭವಿಷ್ಯದ ಯೋಜನೆ ಜಾರಿಯಾದರೆ ಪ್ರಯಾಣಿಕರ ಸಮಯವನ್ನು ಕಡಿಮೆ ಆಗುತ್ತದೆ. ಅಲ್ಲದೇ ಹೊರ ಭಾಗದಿಂದ ಬೆಂಗಳೂರಿಗೆ ಬರುವವರ ಪ್ರಯಾಣದ ಆಯಾಸ ಸಹ ಕಡಿಮೆ ಮಾಡುತ್ತದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ಮತ್ತು ತುಮಕೂರು ರಸ್ತೆ ನೈಸ್ (NICE) ರಸ್ತೆ ಬಳಸಿ ಈ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
BMRCL ಸಭೆಯಲ್ಲಿ ಯೋಜನೆ ಕುರಿತು ಚರ್ಚೆ
ನೈಸ್ ಅಸೋಸಿಯೇಟ್ ಉಪಾಧ್ಯಕ್ಷ (ಟೋಲ್ ಕಾರ್ಯಾಚರಣೆಗಳು) ಮಯೂಖಾ ದೇವಂಗಿ ಅವರು ಈ ಹೊಸ ಮೆಟ್ರೊ ಕಾರಿಡಾರ್ ಯೋಜನೆ ಕುರಿತು ಸರ್ಕಾರಕ್ಕೆ ತಿಳಿಸಿದ್ದೇವೆ. ಪ್ರಸ್ತಾವನೆಯನ್ನು ಸಹ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ ಪ್ರಸ್ತುತದಲ್ಲಿ 73 ಕಿಲೋ ಮೀಟರ್ ಜಾಲ ಹೊಂದಿದೆ ಬೆಂಗಳೂರು ನಗರದ ಕೇಂದ್ರದಿಂದ ದಿಕ್ಕುಗಳಲ್ಲಿ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಇದರೊಂದಿಗೆ ಇದೀಗ ನೈಸ್ ರಸ್ತೆ ಮಧ್ಯದಲ್ಲಿ 40 ಕಿಮೀ ಮಧ್ಯದಲ್ಲಿ ಮೆಟ್ರೋ ರೈಲಿನ ಪ್ರಸ್ತಾಪ ಮಾಡಲಾಗಿದೆ.
ಸದ್ಯ ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಈ ಕುರಿತು ಚರ್ಚಿಸಲು, ಯೋಜನೆ ಸಾದಕ-ಬಾಧಕ ಬಗ್ಗೆ ಚರ್ಚಿಸಲು BMRCL ಅಧಿಕಾರಿಗಳು ಸಭೆ ಕರೆದಿದ್ದಾರೆ. ಇಲ್ಲಿ ಯೋಜನೆ ಕಾರ್ಯಸಾಧ್ಯತೆ ಬಗ್ಗೆ ನಿರ್ಧರಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಆದಷ್ಟು ಶೀಘ್ರವೇ ಬೆಂಗಳೂರು ಮೆಟ್ರೊ ಪ್ರಯಾಣಿಕರಿಗೆ ಅದರಲ್ಲೂ ತುಮಕೂರಿನಿಂದ ನಗರಕ್ಕೆ ಬರುವವರಿಗೆ ಈ ಹೊಸ ಕಾರಿಡಾರ್‌ನಿಂದ ಸಾಕಷ್ಟು ಪ್ರಯೋಜನವಗಲಿದೆ. ನಗರದಿಂದ ನೈಸ್ ರಸ್ತೆಗೆ ಸಂಪರ್ಕಿಸುವ ಕಡೆ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಆಗಲಿದೆ.
ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಆದಷ್ಟು ಶೀಘ್ರವೇ ಯೋಜನೆ ಕಾರ್ಯಸಾಧ್ಯತಾ ಸಮೀಕ್ಷೆಯನ್ನು ನಮ್ಮ ಮೆಟ್ರೋ ಅಧಿಕಾರಿಗಳು ಸೇರಿದಂತೆ ಕಂಪನಿಯ ಮುಖ್ಯಸ್ಥರು ಕೈಗೊಳ್ಳಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ರಮುಖ ಮೆಟ್ರೋ ಕಾರಿಡಾರ್ ಇದಾಗಿದೆ.












Click it and Unblock the Notifications