Get Updates
Get notified of breaking news, exclusive insights, and must-see stories!

ಸುದ್ದಿಚಿತ್ರ : ಚಾಯ್ ಪೇ ಚರ್ಚಾದಲ್ಲಿ ಅರುಣ್ ಜೇಟ್ಲಿ

ಬೆಂಗಳೂರು, ಜು.20 : ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಆದರೆ, ಚಿತ್ರಕ್ಕೆ ತಕ್ಕಂತೆ ಸೂಕ್ತವಾದ ಶೀರ್ಷಿಕೆ ಇದ್ದರೆ ಅಥವಾ ಪೂರಕವಾದ ಮಾಹಿತಿ ಇದ್ದರೆ ಆ ಚಿತ್ರದ ಸೊಗಸು ಇನ್ನಷ್ಟು ಹೆಚ್ಚುತ್ತದೆ.

ಇಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಕಳಿಸಿರುವ ಕೆಲ ಚಿತ್ರಗಳನ್ನು ನಿಮಗಾಗಿ ನೀಡುತ್ತಿದ್ದೇವೆ. ಇಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಜೀವನವನ್ನು ಹಿಡಿದಿಡುವಂಥ ಚಿತ್ರಳಿವೆ.

ವಿತ್ತ ಸಚಿವ ಅರುಣ್ ಜೇಟ್ಲಿ ಭಾನುವಾರ ವಾಯುವಿಹಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು, ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಸಭೆಯಲ್ಲಿ ಪಾಲ್ಗೊಂಡಿರುವುದು, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿರುವುದು, ಬೆಂಗಳೂರಿನಲ್ಲಿ ಅತ್ಯಾಚಾರದ ವಿರುದ್ಧ ಪ್ರತಿಭಟನೆ ಮುಂತಾದ ಚಿತ್ರಗಳು ಇಲ್ಲಿವೆ.

ಚಾಯ್ ಪೇ ಚರ್ಚಾದಲ್ಲಿ ಜೇಟ್ಲಿ ಭಾಗಿ

ಚಾಯ್ ಪೇ ಚರ್ಚಾದಲ್ಲಿ ಜೇಟ್ಲಿ ಭಾಗಿ

ಕೇಂದ್ರ ರಕ್ಷಣಾ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಸಾಲಿಟರ್ ಜನರಲ್ ರಜನೀತ್ ಕುಮಾರ್, ಅರ್ಟಾನಿ ಜನರಲ್ ಜೊತೆ ನವದೆಹಲಿಯ ಲೋದಿ ಗಾರ್ಡ್ ನ್ ನಲ್ಲಿ ಭಾನುವಾರ ಬೆಳಗ್ಗೆ ಮಾತುಕತೆಯಲ್ಲಿ ತೊಡಗಿರುವುದು.

ಮಹಾಕಾಳಿ ಕಾಪಾಡಮ್ಮ

ಮಹಾಕಾಳಿ ಕಾಪಾಡಮ್ಮ

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಭಾನುವಾರ ಅಕ್ಕಣ್ಣ ಮಾದಣ್ಣ ಮಹಾಕಾಳಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪುನಃ ಕದನ ವಿರಾಮ ಉಲ್ಲಂಘನೆ

ಪುನಃ ಕದನ ವಿರಾಮ ಉಲ್ಲಂಘನೆ

ಜಮ್ಮುವಿನ ಆರ್‌.ಎಸ್‌.ಪುರ ಸೆಕ್ಟರ್‌ ನಲ್ಲಿ ಭಾನುವಾರ ಮುಂಜಾನೆ 2 ಗಂಟೆಯ ವೇಳೆಗೆ ಪಾಕ್‌ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಬಿದ್ದ ಶೆಲ್ ಅನ್ನು ಮಹಿಳೆ ತೋರಿಸುತ್ತಿದ್ದಾಳೆ.

ಮೃತರ ಆತ್ಮಕ್ಕೆ ಶಾಂತಿ ನೀಡಪ್ಪ

ಮೃತರ ಆತ್ಮಕ್ಕೆ ಶಾಂತಿ ನೀಡಪ್ಪ

ಬಂಡುಕೋರರು ಹೊಡೆದುರುಳಿಸಿದ ಮಲೇಷ್ಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ನೀಡುವಂತೆ ಕೋರಿ ಕೌಲಾಲಂಪುರದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಲಾಯಿತು.

ನರೇಂದ್ರ ಮೋದಿ ಸಭೆ

ನರೇಂದ್ರ ಮೋದಿ ಸಭೆ

ಪ್ರಧಾನಮಂತ್ರಿಯವರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಬಗ್ಗೆ ಪ್ರಧಾನ ಮಂತ್ರಿ ಹಿರಿಯ ಅಧಿಕಾರಿಗಳೊಂದಿಗೆ ನವ ದೆಹಲಿಯಲ್ಲಿ ಸಭೆ ನಡೆಸಿದರು.

ಆಲಿಯಾ ಭಟ್ ಫ್ಯಾಷನ್ ಝಲಕ್

ಆಲಿಯಾ ಭಟ್ ಫ್ಯಾಷನ್ ಝಲಕ್

ನವದೆಹಲಿಯಲ್ಲಿ ನಡೆದ India Couture Week 2014ರ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಡಿಗೆಯ ಭಂಗಿ.

ರೂಪದರ್ಶಿಯಾದ ಖುಷ್ಬು

ರೂಪದರ್ಶಿಯಾದ ಖುಷ್ಬು

ಚೆನ್ನೈನಲ್ಲಿ ಶನಿವಾರ ರಾತ್ರಿ ನಡೆದ Kingfisher Premium Chennai International Fashion Week 2014 ಕಾರ್ಯಕ್ರಮದಲ್ಲಿ ನಟಿ ಖುಷ್ಬು ಹೆಜ್ಜೆ ಹಾಕಿದ್ದು ಹೀಗೆ.

ಬೆಳಗ್ಗಿನ ವಾಕಿಂಗ್ ಮುಗಿಯಿತು

ಬೆಳಗ್ಗಿನ ವಾಕಿಂಗ್ ಮುಗಿಯಿತು

ಕೇಂದ್ರ ರಕ್ಷಣಾ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಸಾಲಿಟರ್ ಜನರಲ್ ರಜನೀತ್ ಕುಮಾರ್, ಅರ್ಟಾನಿ ಜನರಲ್ ಜೊತೆ ನವ ದೆಹಲಿಯ ಲೋದಿ ಗಾರ್ಡ್ ನ್ ನಲ್ಲಿ ಭಾನುವಾರ ವಾಕಿಂಗ್ ಮುಗಿಸಿ ಹೊರಟಿರುವುದು.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ

ಅತ್ಯಾಚಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ನಡೆದ ಪ್ರತಿಭಟನೆಯ ವೇಳೆ ಮಹಿಳೆಯೊಬ್ಬರು ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂಬ ಫಲಕ ಹಿಡಿದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+