ಬಜೆಟ್ ನಲ್ಲಿ ನಮ್ಮ ಮೆಟ್ರೋಗೆ ಸಿಕ್ಕಿದ್ದೇನು?
ಬೆಂಗಳೂರು, ಮಾರ್ಚ್ 15: ಈ ಬಾರಿಯ ಬಜೆಟ್ ನಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ವಿ ನೂತನ ಮೆಟ್ರೋ ರೈಲು ಮಾರ್ಗಕ್ಕೂ ಅಸ್ತು ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಿಲ್ಕ್ ಬೋರ್ಡ್ ನಿಂದ ಕೆ.ಆರ್. ಪುರಂ ಜಂಕ್ಷನ್ ವರೆಗೂ ಸುಮಾರು 17 ಕಿ.ಮೀ. ಉದ್ದದ ನೂತನ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರ, ವಿನೂತನ ವಿಧಾನಗಳಿಂದ ಸುಮಾರು 4,200 ಕೋಟಿ ರು. ವೆಚ್ಛದಲ್ಲಿ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯ ಮಾರ್ಗವು ಶೀಘ್ರವೇ ಅಂತಿಮಗೊಳ್ಳಲಿದೆ ಎಂದು ಬಜೆಟ್ ಮಂಡಿಸುವ ವೇಳೆ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications