ಬೆಂಗಳೂರಲ್ಲಿ ಸೈಕಲ್ ಸವಾರಿಗೆ ಪ್ರತ್ಯೇಕ ಪಥ ಸಿದ್ಧ

ಬೆಂಗಳೂರು, ಫೆಬ್ರುವರಿ 02: ಸದಾ ಬ್ಯುಸಿಯಾಗಿರುವ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಈಗ ಆರಾಮಾಗಿ ಸೈಕಲ್ ಸವಾರಿ ಮಾಡಬಹುದಾಗಿದೆ. ಸೈಕಲ್ ಗೆಂದೇ ಪ್ರತ್ಯೇಕ ಲೇನ್ ರೆಡಿಯಾಗಿದ್ದು, ಸವಾರಿಗೆ ಸಿದ್ಧವಾಗಿದೆ.

ಆರ್ ಸಿ ಕಾಲೇಜಿನಿಂದ ಟರ್ಫ್ ಕ್ಲಬ್ ವರೆಗೆ ಹಾಗೂ ರಾಜ ಭವನ ರಸ್ತೆಯಲ್ಲಿ ಈ ಸೈಕಲ್ ಲೇನ್ ಆರಂಭವಾಗಿದ್ದು, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಮಿಂಕ್ ಸ್ವ್ಕಾರ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್ ಯೋಜನೆಯಡಿಯಲ್ಲಿ ಸೈಕಲ್ ಲೇನ್ ರೂಪಿಸಲಾಗಿದೆ.

ಬಿಎಸ್ ಸಿಎಲ್ 30 ಕಿ.ಮೀ ವ್ಯಾಪ್ತಿಯ ಸೈಕಲ್ ಲೇನ್ ಗೆ ಯೋಜನೆ ರೂಪಿಸಿದ್ದು, ಸೈಕಲ್ ಲೇನ್ ಗೆ ಸೂಕ್ತ ರಸ್ತೆಗಳ ಕುರಿತು ಸ್ಥಳ ಸಮೀಕ್ಷೆಗೆ ಮುಂದಾಗಿದೆ. ನಗರ ಭೂ ಸಾರಿಗೆ ಇಲಾಖೆಯು ಈಗಾಗಲೇ ಹದಿನಾಲ್ಕು ರಸ್ತೆಗಳನ್ನು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದರ ನಡುವೆ ಬಿಬಿಎಂಪಿ ಕೂಡ 35 ಕಿ.ಮೀ ಉದ್ದ ಮಾರ್ಗದ ಸಿಲ್ಕ್ ಬೋರ್ಡ್ ಹಾಗೂ ಲೋರಿ ಜಂಕ್ಷನ್ ನಡುವೆ ಸೈಕಲ್ ಲೇನ್ ರೂಪಿಸುವತ್ತ ಚಿಂತನೆ ನಡೆಸಿದೆ. ಲೋರಿ ಜಂಕ್ಷನ್ ನಿಂದ ಮಹದೇವಪುರದವರೆಗೆ ಐದು ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್ ಲೇನ್ ಸಿದ್ಧವಾಗಿದ್ದು, ಸಿಲ್ಕ್ ಬೋರ್ಡ್ ಹಾಗೂ ಇಬಲೂರು ಜಂಕ್ಷನ್ ನಡುವೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.

New cycling lane on Bengaluru Race Course Road

ಸುಮಾರು ಒಂದೂವರೆ ಲಕ್ಷ ಸೈಕಲ್ ಸವಾರರು ನಗರದಲ್ಲಿದ್ದು, ಈ ಸೈಕಲ್ ಲೇನ್ ಗಳು ಅನುಕೂಲ ಮಾಡಿಕೊಡಲಿರುವ ನಿರೀಕ್ಷೆ ವ್ಯಕ್ತವಾಗಿದೆ.

Recommended Video

      Budget 2021 : ಮೋದಿ ಸರ್ಕಾರ ಕೊಟ್ಟ ದೊಡ್ಡ ಶಾಕ್ ಇದೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+