ಬೆಂಗಳೂರಲ್ಲಿ ಹೊಸ ಪ್ರಕರಣ ಇಳಿಕೆ; ಸಕ್ರಿಯ ಪ್ರಕರಣಗಳು ಅಧಿಕ

ಬೆಂಗಳೂರು, ಮೇ 18; ಸರ್ಕಾರವೇ ಹೇಳುವ ಪ್ರಕಾರ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲೇ ಅಧಿಕವಾಗಿದೆ. ಮೇ 17ರ ವರದಿಯಂತೆ 13,338 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣ 3,64,382 ಆಗಿದೆ.

Recommended Video

      ಬೆಂಗಳೂರಲ್ಲಿ ಹೊಸ ಪ್ರಕರಣ ಇಳಿಕೆ; ಸಕ್ರಿಯ ಪ್ರಕರಣಗಳು ಅಧಿಕ | Oneindia Kannada

      ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಅಹಮದಾಬಾದ್‌ಗಳಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇರುವುದು ಬೆಂಗಳೂರಿನಲ್ಲಿ. ಮೇ 7-12ರ ತನಕ ಬೆಂಗಳೂರು, ಚೆನ್ನೈ ಹೊರತುಪಡಿಸಿ ಪ್ರಮುಖ ನಗರಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

      ಮೇ 7 ರಿಂದ 12ರ ಅವಧಿಯಲ್ಲಿ 6 ಪ್ರಮುಖ ನಗರಗಳಲ್ಲಿ ಒಟ್ಟು 5,534 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 1958 ಜನರು ಬೆಂಗಳೂರು ನಗರದಲ್ಲಿಯೇ ಸಾವನ್ನಪ್ಪಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣವೂ ಹೆಚ್ಚಿದೆ.

      New Cases Come Down Active Cases Remain Highest In Bengaluru

      6 ಪ್ರಮುಖ ನಗರಗಳಲ್ಲಿ 28 ದಿನಗಳಲ್ಲಿ (ಮೇ 12ರ ತನಕ) 17 ಸಾವಿರ ಜನರು ಮೃತಪಟ್ಟಿದ್ದಾರೆ. ಇವುಗಳಲ್ಲಿ ಶೇ 50ರಷ್ಟು ದೆಹಲಿ, ಶೇ 24ರಷ್ಟು ಜನರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಸೋಂಕನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ವಿಫಲವಾಗಿದ್ದು, ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

      ಮೈಕ್ರೋ ಕಂಟೈನ್ಮೆಂಟ್ ಮಾದರಿಯನ್ನು ಜಾರಿಗೆ ತಂದು ಸಾವಿನ ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಇಳಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಬೆಂಗಳೂರು ನಗರದಲ್ಲಿ ಕೋವಿಡ್ ನಿರ್ವಹಣೆ ರೀತಿ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+