ಕಲಾಗ್ರಾಮದಲ್ಲಿ ವರ್ತಮಾನದ ಚರಿತ್ರೆ ನಾಟಕ ನೋಡಿ
ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮೂರನೇ ವರ್ಷದ ವಿದ್ಯಾರ್ಥಿಗಳು ಅಭಿನಯಿಸುವ 'ವರ್ತಮಾನದ ಚರಿತ್ರೆ' ನಾಟಕವು ಜೂನ್ 3 ಮತ್ತು 4 ರಂದು ಕಲಾಗ್ರಾಮದಲ್ಲಿ ಪ್ರದರ್ಶನವಾಗಲಿದೆ.
ಬೆಂಗಳೂರು, ಮೇ 31: ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮೂರನೇ ವರ್ಷದ ವಿದ್ಯಾರ್ಥಿಗಳು ಅಭಿನಯಿಸುವ 'ವರ್ತಮಾನದ ಚರಿತ್' ಕಾಶಿನಾಥ ಸಿಂಗ್ ಅವರ ಸಣ್ಣ ಕಥೆ ಆಧಾರಿತ 'ಕೌನ್ ಥುಗುವಾ ನಗರಿಯಾ ಲುಟಾ ಹೊ' ನಾಟಕವು ಜೂನ್ 3 ಮತ್ತು 4 ರಂದು ರಾಷ್ಟ್ರೀಯ ನಾಟಕ ಶಾಲೆಯ ಸ್ಟುಡಿಯೋ ಥಿಯೇಟರ್ ನಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳುತ್ತದೆ.
ನಾಟಕದ ರೂಪಾಂತರ, ವಿನ್ಯಾಸ ಮತ್ತು ನಿರ್ದೇಶನ, ಶ್ರೀಮತಿ ಪ್ರಸನ್ನ ರಾಮ ಸ್ವಾಮಿ ಚನ್ನೈ. ಪ್ರಸನ್ನ ರಾಮ ಸ್ವಾಮಿಯವರು ತಮಿಳು ನಾಡಿನ ಪ್ರಸಿದ್ದ ರಂಗಕರ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಖ್ಯಾತಿಹೊತ್ತವರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರಾಷ್ಟ್ರೀಯ ನಾಟಕ ಶಾಲೆಯ ಸ್ಟುಡಿಯೋ ಥಿಯೇಟರ್
ಕಲಾಗ್ರಾಮ, ಮಲ್ಲತಹಳ್ಳಿ, ಬೆಂಗಳೂರು
ದೂರವಾಣಿ ಸಂಖ್ಯೆ: 080 -23183027.
E-mail: [email protected]
Website: www.nsdblr.org
ಎನ್.ಎಸ್.ಡಿ: ಎಂದೇ ಹೆಸರುವಾಸಿಯಾದ ರಾಷ್ಟ್ರೀಯ ನಾಟಕ ಶಾಲೆಯು ಸ್ವಾಯತ್ತತೆಯ ಸಂಸ್ಥೆಯಾಗಿದ್ದು, ಸಚಿವಾಲಯ ಸಂಸ್ಕೃತಿಯ ಅಡಿಯಲ್ಲಿ 1959 ರಲ್ಲಿ ಸ್ಥಾಪಿಸಲಾಗಿದೆ. ಇದೊಂದು ರಂಗ ತರಬೇತಿ ಸಂಸ್ಥೆಯಾಗಿದೆ. ಸ್ವಾಯತ್ತತೆಯ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಹೊಂದಿದ್ದು ಇದನ್ನು ಸಂಗೀತ ನಾಟಕ ಅಕಾಡೆಮಿಯಾಗಿ ಸ್ಥಾಪಿಸಲಾಗಿದೆ.
ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಚಾಪ್ಟರ್ ಎಂಬ ಹೆಸರಿನಿಂದ ಮೊದಲು ಆರಂಭವಾಯಿತು. ಆಗಸ್ಟ್ 30, 2014ರಿಂದ ಪೂರ್ಣ ಪ್ರಮಾಣದಲ್ಲಿ ನಟನಾ ತರಬೇತಿ ಶಾಲೆಯಾಗಿದೆ. ಮುಂದಿನ ದಿನಗಳಲ್ಲಿ ದೆಹಲಿ ಮಾದರಿಯಲ್ಲಿ ಮೂರು ವರ್ಷದ ಕೋರ್ಸ್ ಆರಂಭಿಸುವ ನಿರೀಕ್ಷೆಯಿದೆ. ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ಮುಖ್ಯಸ್ಥರಾಗಿರುವವರು ರಂಗಕರ್ಮಿ ಸಿ.ಬಸವಲಿಂಗಯ್ಯ,
ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ರಂಗ ರೂಪಾಂತರದ 9 ಗಂಟೆ ಅವಧಿಯ ನಾಟಕ ಜನಪ್ರಿಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications