ಬೆಂಗಳೂರು ವಿವಿಯಲ್ಲಿ 'ರೇಡಿಯೇಷನ್ ಫಿಜಿಕ್ಸ್' ವಿಚಾರ ಸಂಕಿರಣ
ಬೆಂಗಳೂರು, ನವೆಂಬರ್ 22: ದೇಶದ ಅತ್ಯಂತ ಹಳೆಯ ಭೌತಶಾಸ್ತ್ರ ವಿಭಾಗಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯದ ವಿಭಾಗವು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. 'ರೇಡಿಯೇಷನ್ ಫಿಜಿಕ್ಸ್' ವಿಷಯದ ಮೇಲೆ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಮುಂಬೈನ ಅಣು ವಿಜ್ಞಾನ ಸಂಶೋಧನಾ ಮಂಡಳಿ ಮತ್ತು ಭಾರತ ಸರಕಾರ ಅಣು ಇಂಧನ ಇಲಾಖೆ ಸಹಯೋಗದಲ್ಲಿ ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಜ್ಞಾನ ಭಾರತಿ ಆವರಣದಲ್ಲಿರುವ ಪ್ರೊ. ವೆಂಕಟಗಿರಿ ಗೌಡ ಅಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ 23 ನವೆಂಬರ್ ಬೆಳಿಗ್ಗೆ 10ಗಂಟೆಗೆ ಉದ್ಘಾಟನೆಯಾಗಲಿದೆ.
ಖ್ಯಾತ ಅಣು ವಿಜ್ಞಾನಿ ಡಾ. ಎಂ.ಆರ್ ಅಯ್ಯರ್, ಹೈದರಾಬಾದ್ ಎಎಮ್ ಡಿ ನಿರ್ದೇಶಕ ಎಲ್.ಕೆ ನಂದಾ, ಬೆಂಗಳೂರು ವಿವಿ ಉಪಕುಲಪತಿ ಪ್ರೊ. ಎಚ್.ಎನ್. ರಮೇಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೇಶಕ್ಕೆ ಅಣು ಶಕ್ತಿಯ ಅವಶ್ಯಕತೆ, ಜೀವನದ ಮೇಲೆ ಎಕ್ಸ್ ರೇ, ಗಾಮಾ ರೇ ಸೇರಿದಂತೆ ವಿಕಿರಣಗಳು ಬೀರುವ ಪರಿಣಾಮ ಸೇರಿದಂತೆ ರೇಡಿಯೇಷನ್ ಸಂಶೋಧನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಈ ವಿಚಾರ ಸಂಕಿರಣದಲ್ಲಿ ಚರ್ಚೆ, ಉಪನ್ಯಾಸ, ಸಂವಾದಗಳು ನಡೆಯಲಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.












Click it and Unblock the Notifications