ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್ ಠಾಣೆಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

|
Google Oneindia Kannada News

ಬೆಂಗಳೂರು, ಆಗಸ್ಟ್ 20 : ಪ್ರಧಾನಿ ನರೇಂದ್ರ ಮೋದಿ ಅವರು ಆ.26ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದಾರೆ. ಅಚ್ಚರಿ ಪಡಬೇಕಾಗಿಲ್ಲ, ಪೊಲೀಸ್‌ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲು ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಠಾಣೆಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ದೇಶದಲ್ಲಿನ 3 ಪೊಲೀಸ್ ಠಾಣೆಗಳನ್ನು ನರೇಂದ್ರ ಮೋದಿ ಅವರ ವಿಡಿಯೋ ಕಾನ್ಫರೆನ್ಸ್‌ಗೆ ಆಯ್ಕೆ ಮಾಡಲಾಗಿದ್ದು, ಇವುಗಳಲ್ಲಿ ಕಬ್ಬನ್‌ ಪಾರ್ಕ್ ಠಾಣೆ ಸೇರಿದೆ. ಅಸ್ಸಾಂ, ಉತ್ತರ ಪ್ರದೇಶದ ಎರಡು ಠಾಣೆಗಳಿವೆ. [ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]

narendra modi

2009ರಲ್ಲಿ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲು ಮತ್ತು ಡಿಜಿಟಲ್ ಆಡಳಿತಕ್ಕೆ ಒಳಪಡಿಸಲು ಸಿಸಿಟಿಎನ್‌ಎಸ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದರ ಬಗ್ಗೆ ಆ.26ರಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಮಧ್ಯಾಹ್ನ 3.30ರಿಂದ 5.30ರ ತನಕ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ. [ಡಿಜಿಟಲ್ ಇಂಡಿಯಾದಿಂದ ರಾಜ್ಯಕ್ಕಾಗುವ ಲಾಭಗಳೇನು?]

ಪೊಲೀಸ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಲಾಗುತ್ತಿದೆ?, ಇದರಿಂದ ಸಾರ್ವಜನಿಕರಿಗೆ ಹೇಗೆ ಅನುಕೂಲವಾಗುತ್ತಿದೆ? ಎಂಬ ಬಗ್ಗೆ ಮೋದಿ ಅವರು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಈ ಸಂವಾದ ಕಾರ್ಯಕ್ರಮದಲ್ಲಿ : ಗೃಹ ಸಚಿವ ಕೆಜೆ ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಮತ್ತು ಕಬ್ಬನ್‌ ಪಾರ್ಕ್‌ ಠಾಣೆ ಸಿಬ್ಬಂದಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

bangalore police

ಏನಿದು ಸಿಸಿಟಿಎನ್‌ಎಸ್ : ಪೊಲೀಸ್ ಠಾಣೆಗಳನ್ನು ಡಿಜಿಟಲೀಕರಣ ಮಾಡಿ ತಂತ್ರಜ್ಞಾನದ ಮೂಲಕ ಪೊಲೀಸಿಂಗ್ ನಿರ್ವಹಿಸಲು 2009ರಲ್ಲಿ ಸಿಸಿಟಿಎನ್‌ಎಸ್ (Crime and Criminal Tracking Network & Systems (CCTNS)) ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

ಕಬ್ಬನ್‌ ಪಾರ್ಕ್ ಪೊಲೀಸ್ ಠಾಣೆಯನ್ನು ಬಹುತೇಕ ಡಿಜಿಟಲೀಕರಣ ಮಾಡಲಾಗಿದ್ದು, 10ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಈ ಠಾಣೆಯ ಸಿಬ್ಬಂದಿಗೆ ಡಿಜಿಟಲ್ ತರಬೇತಿ ನೀಡಲಾಗಿದೆ. ದೂರು ದಾಖಲು, ಎಫ್‌ಐಆರ್ ಸೇರಿದಂತೆ ಬಹುತೇಕ ಕೆಲಸಗಳು ಡಿಜಿಟಲ್ ಮಾದರಿಯಲ್ಲಿಯೇ ನಡೆಯುತ್ತವೆ. ಆದ್ದರಿಂದ ಈ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

English summary
The Cubbon Park Police station selected to participate in Prime Minister Narendra Modi’s E-visit. Station was selected since it is fully digitized under the Crime and Criminal Tracking Network Systems (CCTNS). Cubbon Park station is one among the 3 police stations in the country chosen for e-visit on August 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X