ಕೊಕೇನ್ ಮಾರಾಟ: ನೈಜೀರಿಯಾದ ಇಬ್ಬರ ಬಂಧನ
ಬೆಂಗಳೂರು, ಮಾರ್ಚ್. 01 : ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನೈಜೀರಿಯಾದ ಮೂಲದ ಇಬ್ಬರನ್ನು ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 3.5 ಗ್ರಾಂ ಕೋಕೇನ್, 2.45 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್, ಒಂದು ದ್ವಿ-ಚಕ್ರ ವಾಹನ, ಒಂದು ಎಲೆಕ್ಟ್ರಾನಿಕ್ ಪೋರ್ಟೆಬಲ್ ತೂಕದ ಯಂತ್ರ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.[ಕೊಕೇನ್ ಮಾರಾಟ : ನೈಜೀರಿಯಾ ಮಹಿಳೆ ಸೇರಿ 4 ಬಂಧನ]

ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಮಾರಾಟ ಜಾಲದ ಖಚಿತ ಮಾಹಿತಿ ಮೇಲೆ ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ವಿವೇಕಾನಂದ ಲೇಔಟ್, ಕಣ್ಣೂರು ಗ್ರಾಮ, ಆರ್ಮಿ ಕಾಲೇಜಿನ ಪಕ್ಕದಲ್ಲಿ ಕೋಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಬಂಧಿಸಿದ್ದಾರೆ.
ಸಿಸಿಬಿ ಕಾರ್ಯಾಚರಣೆ ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ಆರ್ಮಿ ಕಾಲೇಜ್ ಪಕ್ಕದಲ್ಲಿ ಕೊಕೇನ್ ಮಾರುತ್ತಿದ್ದ ನೈಜೀರಿಯಾ ಮೂಲದ ಆರೋಪಿಯ ಬಂಧನ.@CPBlr pic.twitter.com/cLpMCeFt1W
— BengaluruCityPolice (@BlrCityPolice) March 1, 2017
ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಶ್ರೀಎಸ್ ಟಿ ಸಿದ್ಧಲಿಂಗಪ್ಪ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಎನ್ ಯಶವಂತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ರಮೇಶ್ ಗೌಡ, ರಮೇಶ್, ವಿನಯ್, ನಂದೀಶ್, ನೂರುಲ್ಲಾ ತಂಡದಲ್ಲಿದ್ದರು.












Click it and Unblock the Notifications