ಕೊಕೇನ್ ಮಾರಾಟ : ನೈಜೀರಿಯಾ ಮಹಿಳೆ ಸೇರಿ 4 ಬಂಧನ

ಬೆಂಗಳೂರು, ಫೆಬ್ರವರಿ 18 : ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನೈಜೀರಿಯಾದ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ರಾಮಮೂರ್ತಿ ನಗರದ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ಅಪಾರ ಪ್ರಮಾಣದ ಕೊಕೇನ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಮಾರಾಟ ಜಾಲದ ಖಚಿತ ಮಾಹಿತಿ ಮೇಲೆ ರಾಮಮೂರ್ತಿನಗರ ಪೊಲೀಸ್‌ ಠಾಣಾ ಸರಹದ್ದಿನ, ಮಾರಗೊಂಡನಹಳ್ಳಿ, ಬಿದರಹಳ್ಳಿ ಹೋಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದರು.

Narcotic Drug raquet : 4 Nigerian arrested in Bengaluru

ಈ ದಾಳಿಯಲ್ಲಿ ನೈಜೀರಿಯಾದ ಓರ್ವ ಮಹಿಳೆ ಮತ್ತು ಮೂವರು ಪುರುಷರನ್ನು ಬಂಧಿಸಲಾಗಿದೆ. ಅವರಿಂದ 44 ಗ್ರಾಂ ಕೊಕೇನ್, 10 ಮೊಬೈಲ್, ಎರಡು ದ್ವಿ-ಚಕ್ರ ವಾಹನ, ಲ್ಯಾಪ್‌ಟ್ಯಾಪ್, ಎಲೆಕ್ಟ್ರಾನಿಕ್ ಪೋರ್ಟೆಬಲ್ ತೂಕದ ಯಂತ್ರ, ಅಮಾನ್ಯಗೊಂಡಿರುವ 500 ಮುಖಬೆಲೆಯ 5 ನೋಟು, ಒಂದು ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅಮಾನತ್ತುಪಡಿಸಿದ ಮಾಲುಗಳ ಮೌಲ್ಯ 7 ಲಕ್ಷ 50 ಸಾವಿರ ರು.ಗಳೆಂದು ಅಂದಾಜಿಸಲಾಗಿದೆ.

ದಸ್ತಗಿರಿಯಾದ ಆರೋಪಿಗಳ ವಿವರ ಈ ಕೆಳಕಂಡಂತಿದೆ

29 ವರ್ಷದ ಮುಕುಕೊ ಚುಕ್ವುಕಾ ಮೌಲೋಕ್ವು, 26 ವರ್ಷದ ಗಿಫ್ಟ್ ಬೆನೆಡಿಕ್ಟ್ (ಮಹಿಳೆ), 31 ವರ್ಷದ ಚುಕ್ವೆಮೆಕಾ ಎಜೊಂಬಿ ಮತ್ತು 28 ವರ್ಷದ ವಿಸ್ಡಂ ಅಹಿಬೇಕ್ವು ಚುಕ್ವುಂಬಕ್ವಾ ಎಂದು ಗುರುತಿಸಲಾಗಿದೆ. ಎಲ್ಲರೂ ನೈಜೀರಿಯಾ ಸಂಜಾತರು.

ಆರೋಪಿಗಳು ಬಿಸ್‌ನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದರು. ಕಾನೂನು ಬಾಹಿರವಾಗಿ ಮಾದಕ ವಸ್ತು ಕೊಕೇನ್‌ಅನ್ನು ಮಾರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಈ ಪೈಕಿ 1 ಮತ್ತು 2ನೇ ಆರೋಪಿಗಳ ವಿರುದ್ಧ ಎನ್‌ಸಿಬಿ ಅಧಿಕಾರಿಗಳು ನಾರ್ಕೋಟಿಕ್ ಡ್ರಗ್ಸ್ ಸೈಕೊಟ್ರೋಪಿಕ್ ಸಬ್ಸಟನ್ಸಸ್ (ಎನ್‌ಡಿಪಿಎಸ್) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿಯ ಸಹಾಯಕ ಪೊಲೀಸ್‌ ಆಯುಕ್ತರಾದ ಎಸ್‌ಟಿ ಸಿದ್ಧಲಿಂಗಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್‌ ಇನ್ಸ್‌ಪೆಕ್ಟರ್ ಕೆ ಎನ್ ಯಶವಂತ್‌ಕುಮಾರ್ ಹಾಗೂ ಸಹೋದ್ಯೋಗಿಗಳಾದ ಮಹಿಳಾ ಪಿಎಸ್‌ಐ ಎಚ್‌ಬಿ ಬೆಕ್ಕೇರಿ, ರಂಗನಾಥ್, ಶಾಂತಕುಮಾರ್, ರಮೇಶ್, ವಿನಯ್, ನಂದೀಶ್, ಶಶಿಧರ್, ನೂರುಲ್ಲಾ ಮತ್ತು ಪದ್ಮಜಾರವರುಗಳ ತಂಡ ಪಾಲ್ಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+