ವಿಶ್ವ ಹೃದಯ ದಿನಾಚರಣೆಗಾಗಿ ಚೇಂಜ್ ಆಫ್ ಹಾರ್ಟ್ ಅಭಿಯಾನ
ಬೆಂಗಳೂರು, ಸೆಪ್ಟೆಂಬರ್ 28: ನಾರಾಯಣ ಹೆಲ್ತ್, ವಿಶ್ವ ಹೃದಯ ದಿನದ ಅಂಗವಾಗಿ ಚೇಂಜ್ ಆಫ್ ಹಾರ್ಟ್ ಎಂಬ ಒಂದು ವಾರದ ಅಭಿಯಾನ ಹಮ್ಮಿಕೊಂಡಿದೆ.
ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಬೆಂಗಳೂರಿನ ಉದ್ದಗಲಕ್ಕೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದರಲ್ಲಿ ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿ ಸಂಗ್ರಹ ಚಿತ್ರಕಲಾ ಪ್ರದರ್ಶನ, ಸಾರ್ವಜನಿಕ ವೇದಿಕೆಗಳಲ್ಲಿ ಹಾರ್ಟ್ ಅಂಡ್ ಸೈಕಲ್ ಪ್ರತಿಷ್ಠಾಪನೆ, ಪ್ರಮುಖ ಸ್ಥಳಗಳಲ್ಲಿ ವಾಕಥಾನ್ ಮತ್ತು ವೈಟ್‍ಫೀಲ್ಡ್ ನರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಪುನಶ್ಚೇತನ ಶಿಬಿರ ಒಳಗೊಂಡಿದೆ.
ಈ ವಿಶಿಷ್ಟ ಅಭಿಯಾನದ ಬಗ್ಗೆ ಮಾತನಾಡಿದ ನಾರಾಯಣ ಹೆಲ್ತ್ ಸಿಟಿ ಹೃದ್ರೋಗ ವಿಭಾಗದ ಹಿರಿಯ ಸಲಹಾತಜ್ಞ ಡಾ.ಸಂಜಯ್ ಮೆಹೋತ್ರಾ, "ಭಾರತದಲ್ಲಿ ಹೃದಯ ಕಾಯಿಲೆ ದಿನದಿಂದ ದಿನಕ್ಕೆ ಯುವಜನರಲ್ಲಿ ಹೆಚ್ಚುತ್ತಿದೆ. ಎಳೆ ವಯಸ್ಸಿನಲ್ಲೇ ಹೃದಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಜೀವನಶೈಲಿ. ಇದರಲ್ಲಿ ಜಂಕ್ ಫುಡ್ ಸೇವನೆ, ದೈಹಿಕ ವ್ಯಾಯಾಮಗಳು ಕಡಿಮೆಯಾಗಿರುವುದು, ಒತ್ತಡದ ಮಟ್ಟ ಅಧಿಕವಾಗುತ್ತಿರುವುದು, ಧೂಮಪಾನ ಮತ್ತು ಮದ್ಯಪಾನ ಚಟ ಹೆಚ್ಚುತ್ತಿರುವುದು.

ಒಟ್ಟು ಪ್ರಕರಣಗಳ ಪೈಕಿ ಶೇಕಡ 80ರಷ್ಟು ಪ್ರಕರಣಗಳನ್ನು ತಂಬಾಕು ಬಳಕೆ ಮಾಡದಿರುವುದು, ಅನಾರೋಗ್ಯಕರ ಆಹಾರ ಪದ್ಧತಿ ಕೈಬಿಡುವುದು, ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದು, ಆಲ್ಕೋಹಾಲ್‍ನ ಅಪಾಯಕಾರಿ ಬಳಕೆಯನ್ನು ನಿಯಂತ್ರಿಸುವುದರಿಂದ ತಡೆಯಲು ಸಾಧ್ಯವಿದೆ.
ನಿಯತವಾಗಿ ಸ್ಕ್ರೀನಿಂಗ್ ನಡೆಸುವುದು, ಜಡ ಜೀವನಶೈಲಿಯನ್ನು ಅನುಸರಿಸದಿರುವುದು ಮತ್ತಿತರ ವಿಧಾನಗಳಿಂದಷ್ಟೇ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯ. ನಮ್ಮ ಆಹಾರದ ಹವ್ಯಾಸದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು, ನಿಯತವಾಗಿ ದೈಹಿಕ ವ್ಯಾಯಾಮಗಳನ್ನು ಮಾಡುವಂಥ ರೋಗ ತಡೆ ವಿಧಾನಗಳನ್ನು ಅನುಸರಿಸಿ, ವೈದ್ಯರ ಸಲಹೆ ಪಡೆಯುವುದು ಉತ್ತಮ.
ಚಿತ್ರಕಲಾ ಪ್ರದರ್ಶನ : ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿಸಂಗ್ರಹ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ, 56 ಮಂದಿ ಉದಯೋನ್ಮುಖ ಕಲಾವಿದರ 100ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಕಲಾಕೃತಿಗಳಿಗೆ 3000 ರೂಪಾಯಿನಿಂದ 80 ಸಾವಿರ ರೂಪಾಯಿವಗಿನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳನ್ನು ಒಂದು ವಾರ ಕಾಲ ಪ್ರರ್ಶಿಸಲಾಗುತ್ತದೆ.
ಈ ಕಲಾಕೃತಿಗಳ ಮಾರಾಟದಿಂದ ಬಂದ ಹಣದ ಶೇಕಡ 50ರಷ್ಟನ್ನು ನಾರಾಯಣ ಹೃದಯಾಲಯದ ಲಾಭರಹಿತ ಘಟಕವಾದ ನಾರಾಯಣ ಹೃದಯಾಲಯ ಚಾರಿಟಬಲ್ ಟ್ರಸ್ಟ್ ಗೆ ಸಮರ್ಪಿಸಲಾಗುವುದು. ಇದರ ವತಿಯಿಂದ ದುರ್ಬಲ ವರ್ಗದವರಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದು ಆಸಕ್ತಿದಾಯಕ ಹೃದಯ ಮತ್ತು ಸೈಕಲ್ ಅಳವಡಿಕೆ ಸಮಾರಂಭವನ್ನು ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಮತ್ತು ವೈಟ್‍ಫೀಲ್ಡ್‍ನ ಗ್ಲೋಬಲ್ ಟೆಕ್‍ಪಾರ್ಕ್ ಅವರಣದಲ್ಲಿ ನಡೆಸಲಾಗುವುದು. ಇದರ ಮುಖ್ಯವಾದ ಉದ್ದೇಶವೆಂದರೆ, ಹೃದಯಪೂರ್ವಕ ಹೃದಯ ಮತ್ತು ಆರೋಗ್ಯಕರ ನಡವಳಿಕೆಯ ನಡುವಿನ ಸಂಬಂಧವನ್ನು ತಿಳಿಸುವುದು.
ಇದರಲ್ಲಿ ಪಾಲ್ಗೊಳ್ಳುವ ರೋಗಿಗಳು ಸೈಕಲ್ ಪೆಡಲ್ ತುಳಿದುಕೊಂಡು, ಅಳವಡಿಸಿರುವ ಹೃದಯ ಚಿತ್ರದ ಬಳಿಗೆ ಬರಬೇಕು. ಇದೇ ವೇಳೆ ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್‍ನಲ್ಲಿ, ವಾಕಾಥಾನ್ ಕೂಡಾ ಆಯೋಜಿಸಲಾಗಿದೆ. ಈ ವಾಕಥಾನ್, ಸೆಪ್ಟೆಂಬರ್ 30ರಂದು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಇದನ್ನು ಆಯೋಜಿಸಲಾಗಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications