RV Road-Bommasandra Metro Line: ನಾಳೆ ಬೆಳಗ್ಗೆ 5 ಗಂಟೆಗೆ ಮೆಟ್ರೋ ಸೇವೆ ಆರಂಭ, ವಿವರ

Bengaluru Metro: ಬೆಂಗಳೂರು ನಿವಾಸಿಗಳ ಬಹುನಿರೀಕ್ಷೆಯ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯಾಗಿದೆ. ಮರುದಿನದಿಂದಲೇ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದವರೆಗೆ ಮೂರು ಮೆಟ್ರೋ ರೈಲುಗಳು ಸಂಚಾರ ಸೇವೆ ಆರಂಭಿಸಿವೆ. ಅವುಗಳ ಸಂಚಾರ ಸಮಯ ಸೋಮವಾರ ಬದಲಾಗಿದೆ. ಆಗಸ್ಟ್ 18ರಂದು ಮರಳಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

BMRCL ಹೇಳುವ ಪ್ರಕಾರ, ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಆಗಸ್ಟ್ 18ರಂದು ಸೋಮವಾರದಂದು ಬೆಳಗ್ಗೆ 5:00 ಗಂಟೆಗೆ ಸೇವೆ ಆರಂಭಿಸಲಿದೆ. ಈ ಸಮಯ ಬದಲಾವಣೆ ಸ್ವಾತಂತ್ರ್ಯ ದಿನದ ದೀರ್ಘ ವಾರಾಂತ್ಯದ ನಂತರ ಪ್ರಯಾಣಿಕರ ಚಲನವಲನವು ಹೆಚ್ಚಿನ ಪ್ರಮಾಣದಲ್ಲಿ ಇರುವ ನಿರೀಕ್ಷೆ ಇದೆ. ಹೀಗಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

Namma Metro Yellow Line to Start Early Morning Service on August 18 fot This Reason

ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಸೇವೆ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ. ಈ ವಿಶೇಷ ವ್ಯವಸ್ಥೆ ಕೇವಲ 18ನೇ ಆಗಸ್ಟ್ 2025 ರ ಸೋಮವಾರಕ್ಕೆ ಮಾತ್ರ ಅನ್ವಯಿಸುತ್ತದೆ. ಮುಂದಿನ ದಿನವಾದ ಮಂಗಳವಾರದಿಂದ (ಆಗಸ್ಟ್ 19) ಮೆಟ್ರೋ ಸೇವೆಗಳು ಎಂದಿನಂತೆ ಬೆಳಗ್ಗೆ 6:30 ರಿಂದ ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆಯಬೇಕು. ಈ ಹಿಂದೆ ಘೋಷಿಸಿದಂತೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋ ಸೇವೆಗಳು ಸೋಮವಾರದಂದು ಬೆಳಗ್ಗೆ 4:15 ರಿಂದ ಕಾರ್ಯನಿರ್ವಹಿಸುತ್ತದೆ.

ವಾರಾಂತ್ಯ ಮುಗಿಸಿಕೊಂಡು ಬೆಂಗಳೂರಿಗೆ ಸೋಮವಾರ ಮರಳುವವರಿಗೆ ಹೆಚ್ಚಿನ ರೀತಿಯ ಅನುಕೂಲ ಆಗುತ್ತದೆ. ಕಚೇರಿಗೆ ಬೇಗನೆ ತೆರಳುವವರಿಗೆ ತಮ್ಮ ಗಮ್ಯ ಸ್ಥಳ ತಲುಪಲು ಬಿಎಂಆರ್‌ಸಿಎಲ್ ಈ ಮೂಲಕ ಸಹಕರಿಸುತ್ತಿದೆ. ಸದ್ಯ ಹಳದಿ ಮಾರ್ಗದಲ್ಲಿ ಮೂರು ರೈಲುಗಳು ಮಾತ್ರವೇ ಸಂಚರಿಸುತ್ತಿವೆ. ನಾಲ್ಕನೇ ರೈಲು ಈಗಾಗಲೇ ಬೆಂಗಳೂರಿಗೆ ಆಗಮಿಸಿದೆ. ಸೆಪ್ಟಂಬರ್‌ನಿಂದ ನಾಲ್ಕು ರೈಲುಗಳ ಸೇವೆ ಲಭ್ಯವಾಗಲಿದೆ. ಬೆಂಗಳೂರು ಮೆಟ್ರೋ ಜಾಲವು 96 ಕಿಲೋ ಮೀಟರ್ ವ್ಯಾಪ್ತಿಗೆ ವಿಸ್ತರಣೆಯಾಗಿದೆ.

ಅಕ್ಟೋಬರ್ ತಿಂಗಳಿನಿಂದ ಪ್ರತಿ ತಿಂಗಳು ಎರಡು ರೈಲು ಪಶ್ಚಿಮ ಬಂಗಾಳದ ಟಿಟಾಗಢನಿಂದ ಬೆಂಗಳೂರಿಗೆ ರವಾನೆ ಆಗಲಿದೆ. ಈಗಾಗಲೇ ಬಿಎಂಆರ್‌ಸಿಎಲ್ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪೂರೈಕೆ ಕಂಪನಿದಾರರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಪ್ರತಿ ತಿಂಗಳು ಎರಡು ರೈಲು ಸೆಟ್ ಪೂರೈಕೆಗೆ ಕಂಪನಿ ಬದ್ಧವಾಗಿದೆ ಎಂದು ಟಿಟಾಗಢ ಮುಖ್ಯಸ್ಥರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+