RV Road-Bommasandra Metro Line: ಮಕರ ಸಂಕ್ರಾಂತಿಗೆ ಸಿಹಿಸುದ್ದಿ, 8ನೇ ಡ್ರೈವರ್‌ಲೆಸ್ ರೈಲಿನ ಅಪ್ಡೇಟ್
ಬೆಂಗಳೂರು: ನಗರದ ಮೆಟ್ರೋ ಪ್ರಯಾಣಿಕರು ಬಹುನಿರೀಕ್ಷೆಯಂತೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಡ್ರೈವರ್‌ಲೆಸ್ ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತದವರೆಗೆ ಆರು ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಇದೇ ಸಂಕ್ರಾಂತಿಗೆ (ಜನವರಿ 15)ರಂದು ಕೊಲ್ಕತ್ತದ ಟಿಟಾಗರ್‌ನಿಂದ 08ನೇ ರೈಲು ಬೆಂಗಳೂರಿಗೆ ಆಗಮಿಸಲಿದೆ. ಇದರ ಕಾರ್ಯಾಚರಣೆ ಯಾವಾಗ?, ರೈಲು ಕಾಯುವಿಕೆ ಸಮಯ ಎಷ್ಟು ತಗ್ಗುತ್ತದೆ, 07ನೇ ರೈಲಿನ ಅಪ್ಡೇಟ್ ವಿವರ ಮುಂದಿದೆ.
ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ ಕಂಪನಿಯು (TRSL) ಎಂಟನೇ ರೈಲನ್ನು ರವಾನಿಸಿದೆ. ಆರು ಬೋಗಿಗಳ ಈ ರೈಲಿನ ಕೋಚ್ ಗಳನ್ನು ಹೊತ್ತ ಲಾರಿಗಳು ಇದೇ ಜನವರಿ 08ರಂದು ಟಿಟಾಗರ್ ಕಂಪನಿಯಿಂದ ಹೊರಟಿವೆ. ಅವುಗಳು ಬೆಂಗಳೂರು ಬಂದು ಸೇರಲು ಎಂಟ ಹತ್ತು ದಿನಗಳು ಬೇಕಾಗಬಹುದು. ಒಟ್ಟಾರೆ ಸಂಕ್ರಾಂತಿ ಹಬ್ಬದೊತ್ತಿಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

8ನೇ ಮೆಟ್ರೋ ರೈಲು ಬೆಂಗಳೂರಿಗೆ ಬರುತ್ತಿದ್ದಂತೆ ಜನವರಿ ಪೂರ್ತಿ ವಿವಿಧ ದಕ್ಷತೆ, ಕಾರ್ಯಕ್ಷಮತೆಯ ಹಲವು ಪರೀಕ್ಷೆಗಳಿಗೆ ಒಳಗಾಗಲಿದೆ. ನಂತರ ಫೆಬ್ರವರಿ ಆರಂಭದಲ್ಲಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಈ ರೈಲು ಸೇರಿ ಒಟ್ಟು ಎಂಟು ರೈಲುಗಳ ಸೇವೆಯು 19.4 ಕಿಮೀ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ಹಳದಿ ಮಾರ್ಗದಲ್ಲಿ ಲಭ್ಯವಾಗಲಿದೆ.
ಕಾಯುವಿಕೆ ಸಮಯ 8-10 ನಿಮಿಷ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸದ್ಯ ಆರು ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಪ್ರಯಾಣಿಕರು ನಿಲ್ದಾಣದಲ್ಲಿ ರೈಲಿಗೆ ಕಾಯುವ ಸಮಯ 13 ನಿಮಿಷ ಇದೆ. ಎಲ್ಲ ಎಂಟೂ ರೈಲುಗಳ ಸೇವೆ ಆರಂಭವಾದರೆ ರೈಲಿಗೆ ಕಾಯುವಿಕೆ ಸಮಯ 8-10 ನಿಮಿಷಕ್ಕೆ ಇಳಿಕೆ ಆಗಲಿದೆ.
ನಮ್ಮ ಮೆಟ್ರೋ 7ನೇ ರೈಲು ಕಳೆದ ತಿಂಗಳು 2025ರ ಡಿಸೆಂಬರ್ ಮೂರನೇ ವಾರ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಿದೆ. ಈ ರೈಲು ಬೋಗಿಗಳನ್ನು ಲಾರಿಯಿಂದ ಹಳಿಗೆ ಜೋಡಿಸಿ, ಪರೀಕ್ಷೆಗಳನ್ನು ಆರಂಭಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ಹಳಗೆ ಇಳಿಯಬಹುದು. ಇನ್ನೂ ಆರನೇ ಮೆಟ್ರೋ ರೈಲನ್ನು ಕಳೆದ ಡಿಸೆಂಬರ್ 22ರಂದು ಸೇವೆಗೆ ನಿಯೋಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃತವಾಗಿ ತಿಳಿಸಿತ್ತು. ಸದ್ಯ ಎಲ್ಲರ ಚಿತ್ತ ಎಂಟನೇ ರೈಲು ಆಗಮಿಸುವುದು ಹಾಗೂ ಫೆಬ್ರವರಿ ಮಧ್ಯಭಾಗಕ್ಕೆ ಬಹುತೇಕ ಎಂಟೂ ರೈಲುಗಳ ಸೇವೆ ಆರಂಭವಾಗುವುದರ ಮೇಲೆ ನೆಟ್ಟಿದೆ.
8th #YellowLine train dispatched tonight, to reach Bengaluru after Sankranti (Jan 15).
— Muthi-ur-Rahman Siddiqui (@ever_pessimist) January 8, 2026
After tests, it'll enter passenger service around mid-Feb; freq ~10mins or less.
TS7 may enter service around Sankranti;
freq 10–11mins.
Current freq is 13mins.@WF_Watcher @blrmetrotracker pic.twitter.com/jF5s6sSzky
ಒಂದು ಲಕ್ಷ ದಾಟಲಿದೆ ಪ್ರಯಾಣಿಕರ ಸಂಖ್ಯೆ
2025ರ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಮರುದಿನ ಆಗಸ್ಟ್ 11ರಿಂದ ವಾಣಿಜ್ಯ ಸಂಚಾರ ಸೇವೆ ಶುರುವಾಗಿತ್ತು. ಮೊದಲ ದಿನವೇ ಸುಮಾರು 30 ಸಾವಿರ ಪ್ರಯಾಣಿಕರು ಸಂಚಾರ ಮಾಡಿದ್ದರು. ಸದ್ಯ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಸರಿ ಸುಮಾರು 80 ಸಾವಿರದಷ್ಟಿದೆ. ಮೆಟ್ರೋಗಳ ಸಂಖ್ಯೆ ಹೆಚ್ಚಾದಂತೆ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಒಂದು ಲಕ್ಷ ದಾಟಬಹುದು ಎಂಬ ನಿರೀಕ್ಷೆ ಇದೆ. ಐಟಿ ಕಾರಿಡಾರ್‌ಗೆ ಸಂಪರ್ಕ ಒದಗಿಸುವ ಈ ಹಳದಿ ಮಾರ್ಗ ತೆರೆದ ಬಳಿಕ ನಮ್ಮ ಮೆಟ್ರೋ ಸಾರಿಗೆ ಮೇಲಿನ ಜನರ ಸಂಚಾರ ಅವಲಂಬನೆ ಹೆಚ್ಚಾಗಿದ್ದು, ನಿತ್ಯ ಸುಮಾರು ಹತ್ತು ಲಕ್ಷ ಮಂದಿ ಮೆಟ್ರೋ ಬಳಸುತ್ತಿದ್ದಾರೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications